ದೇಶದ ಮೊದಲ ಕೋವಿಡ್-19 ಸೋಂಕಿತೆಯಾದ ಕೇರಳ ವೈದ್ಯಕೀಯ ವಿದ್ಯಾರ್ಥಿಗೆ ಈಗ ಮತ್ತೆ ಪಾಸಿಟಿವ್!

ದೇಶದಲ್ಲಿಯೇ ಮೊದಲಿಗೆ ಕೋವಿಡ್-19 ಸೋಂಕು ಪತ್ತೆಯಾಗಿದ್ದ ಕೇರಳದ ತ್ರಿಸ್ಸೂರ್ ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿಯೊಬ್ಬರಲ್ಲಿ ಸುಮಾರು ಒಂದೂವರೆ ವರ್ಷಗಳ ಅಂತರದ ನಂತರ ಇದೀಗ ಮತ್ತೆ ಪಾಸಿಟಿವ್ ಕಂಡುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ತ್ರಿಸ್ಸೂರ್:  ದೇಶದಲ್ಲಿಯೇ ಮೊದಲಿಗೆ ಕೋವಿಡ್-19 ಸೋಂಕು ಪತ್ತೆಯಾಗಿದ್ದ ಕೇರಳದ ತ್ರಿಸ್ಸೂರ್ ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿಯೊಬ್ಬರಲ್ಲಿ ಸುಮಾರು ಒಂದೂವರೆ ವರ್ಷಗಳ ಅಂತರದ ನಂತರ ಇದೀಗ ಮತ್ತೆ ಪಾಸಿಟಿವ್ ಕಂಡುಬಂದಿದೆ.

ಸಾಂಕ್ರಾಮಿಕ ಹುಟ್ಟಿದ್ದ ಚೀನಾದ ವುಹಾನ್ ನಿಂದ ಹಿಂತಿರುಗಿದ ವೈದ್ಯಕೀಯ ವಿದ್ಯಾರ್ಥಿಗೆ ಕಳೆದ ವರ್ಷ ಜನವರಿ 30 ರಂದು ಕೋವಿಡ್ -19 ಪಾಸಿಟಿವ್ ದೃಢಪಟ್ಟಿತ್ತು. ಆ ಮೂಲಕ ದೇಶದಲ್ಲಿ ಕೋವಿಡ್-19 ಸೋಂಕು ತಗುಲಿದ ಮೊದಲ ವ್ಯಕ್ತಿಯಾಗಿ ಹೊರಹೊಮ್ಮಿದ್ದರು. ಆಕೆ ವುಹಾನ್ ವಿಶ್ವವಿದ್ಯಾನಿಲಯದಲ್ಲಿ ವೈದ್ಯಕೀಯ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ದೆಹಲಿಗೆ ತೆರಳುವ ಮುನ್ನ ಕೋವಿಡ್ ಪರೀಕ್ಷೆ ಮಾಡಿಸಬೇಕಾಗಿತ್ತು. ಆಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ಆದರೆ, ಆರ್ ಟಿ- ಪಿಸಿಆರ್ ಪರೀಕ್ಷೆ ಮಾಡಿಸಿದಾಗ ಮತ್ತೆ ಪಾಸಿಟಿವ್ ಬಂದಿದೆ. ಅಲ್ಪ ರೋಗಲಕ್ಷಣಗಳಿದ್ದು, ಸದ್ಯ ಹೋಮ್ ಐಸೋಲೇಷನ್ ನಲ್ಲಿರುವುದಾಗಿ ಮತಿಲಾಕಂ ನಿವಾಸಿಯಾಗಿರುವ ವಿದ್ಯಾರ್ಥಿ ಹೇಳಿದ್ದಾರೆ.

ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ಭಯಪಡಬೇಕಾದ ಅಗತ್ಯವಿಲ್ಲ. ಕೆಲ ಜನರಲ್ಲಿ ಎರಡನೇ ಬಾರಿಗೆ ಕೋವಿಡ್ -19 ಸೋಂಕು ತಗುಲಿದೆ. ಇದು  ಕೂಡಾ ಅದೇ ರೀತಿಯ ಪ್ರಕರಣವಾಗಿದೆ. ಆಕೆಯೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಎಂದು ತ್ರಿಸ್ಸೂರ್ ಡಿಎಂಒ ಕೆ ಜೆ ರೀನಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com