ಕೋವಿಡ್ ಔಷಧಿಗಳ ಅನಧಿಕೃತ ದಾಸ್ತಾನು, ವಿತರಣೆ; ಗೌತಮ್ ಗಂಭೀರ್ ಫೌಂಡೇಷನ್ ತಪ್ಪು ಸಾಬೀತು!

ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡಲಾಗುವ ಅತ್ಯಾವಶ್ಯಕ ಔಷಧಿಗಳ ಅನಧಿಕೃತ ದಾಸ್ತಾನು, ವಿತರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌತಮ್ ಗಂಭೀರ್ ಫೌಂಡೇಷನ್ ನ ಅಪರಾಧ ಸಾಬೀತಾಗಿದೆ ಎಂದು ದೆಹಲಿ ಹೈಕೋರ್ಟ್ ಗೆ ದೆಹಲಿ ಸರ್ಕಾರದ ಔಷಧ ನಿಯಂತ್ರಕ ಹೇಳಿದೆ.
ಗೌತಮ್ ಗಂಭೀರ್
ಗೌತಮ್ ಗಂಭೀರ್
Updated on: 

ನವದೆಹಲಿ: ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡಲಾಗುವ ಅತ್ಯಾವಶ್ಯಕ ಔಷಧಿಗಳ ಅನಧಿಕೃತ ದಾಸ್ತಾನು, ವಿತರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌತಮ್ ಗಂಭೀರ್ ಫೌಂಡೇಷನ್ ನ ಅಪರಾಧ ಸಾಬೀತಾಗಿದೆ ಎಂದು ದೆಹಲಿ ಹೈಕೋರ್ಟ್ ಗೆ ದೆಹಲಿ ಸರ್ಕಾರದ ಔಷಧ ನಿಯಂತ್ರಕ ಹೇಳಿದೆ.

ಹೌದು.. ಕೋವಿಡ್-19 ರೋಗಿಗಳ ಔಷಧಿಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡಿ ವಿತರಣೆ ಮಾಡಿದ್ದ ಆರೋಪದಲ್ಲಿ ಗೌತಮ್ ಗಂಭೀರ್ ಪ್ರತಿಷ್ಠಾನವು ತಪ್ಪಿತಸ್ಥರೆಂದು ದೆಹಲಿ ಹೈಕೋರ್ಟ್‌ ಹೇಳಿದೆ. ಕೋವಿಡ್ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತಿದ್ದ ಅತ್ಯಾವಶ್ಯಕ ಫ್ಯಾಬಿ ಫ್ಲೂ ಮಾತ್ರೆಗಳನ್ನು ಗೌತಮ್  ಗಂಭೀರ್ ಫೌಂಡೇಷನ್ ಸಂಸ್ಥೆ ಸಂಗ್ರಹಿಸಿ ವಿತರಣೆ ಮಾಡಿತ್ತು. 

ಈ ಬಗ್ಗೆ ಗಮನ ಹರಿಸಿದ್ದ ದೆಹಲಿ ಹೈಕೋರ್ಟ್ ದೇಶಾದ್ಯಂತ ವ್ಯಾಪಕ ಕೊರತೆ ಇರುವ ಪರಿಸ್ಥಿತಿಯಲ್ಲಿ ಗೌತಮ್ ಗಂಭೀರ್ ಫೌಂಡೇಷನ್ ಸಂಸ್ಥೆ ಯಥೇಚ್ಛವಾಗಿ ಈ ಔಷಧಿಗಳನ್ನು ಸಂಗ್ರಹಿಸಿದ್ದು ಹೇಗೆ..? ಇದಕ್ಕೆ ಯಾವ ಅಧಿಕಾರಿಗಳು ಸಹಕರಿಸಿದ್ದಾರೆ ಎಂದು ದೆಹಲಿ ಹೈಕೋರ್ಟ್ ದೆಹಲಿಯ ಔಷಧ ನಿಯಂತ್ರಕರನ್ನು ಪ್ರಶ್ನಿಸಿತ್ತು.

ಈ ಸಂಬಂಧ ಕೋರ್ಟ್ ಗೆ ವರದಿ ನೀಡಿದ್ದ ದೆಹಲಿಯ ಔಷಧ ನಿಯಂತ್ರಕ ಇಲಾಖೆ, ಗೌತಮ್ ಗಂಭೀರ್ ಫೌಂಡೇಷನ್ ಅಕ್ರಮವಾಗಿ ಕೋವಿಡ್-19 ಔಷಧಿಗಳನ್ನು ಸಂಗ್ರಹಿಸಿ ವಿತರಣೆ ಮಾಡಿತ್ತು. ಹೀಗಾಗಿ ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಅಲ್ಲದೆ ಇಂತಹ ಪ್ರಕರಣಗಳು ಕಂಡುಬಂದರೆ ಮಾಹಿತಿ ನೀಡುವಂತೆ ಔಷಧ ಡೀಲರ್ ಗಳಿಗೆ ಸೂಚಿಸಲಾಗಿದೆ ಎಂದು ಹೇಳಿದೆ.

ಪ್ರಕರಣದ ವಿಚಾರಣೆಯಲ್ಲಿ ಗೌತಮ್ ಗಂಭೀರ್ ಫೌಂಡೇಷನ್ ಸಂಸ್ಥೆ ತಪ್ಪಿತಸ್ಥ ಎಂದು ಕೋರ್ಟ್ ಗೆ ಹೇಳಿದ್ದು, ಇದೇ ಪ್ರಕರಣದಲ್ಲಿ ಶಾಸಕ ಪ್ರವೀಣ್ ಕುಮಾರ್ ಅವರನ್ನೂ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿ ತಪ್ಪಿತಸ್ಥರು ಎಂದು ಹೇಳಿದೆ.

ಅಂತೆಯೇ ಆರು ವಾರಗಳಲ್ಲಿ ಈ ಪ್ರಕರಣಗಳಲ್ಲಿ ಹೆಚ್ಚಿನ ಪ್ರಗತಿಯ ಕುರಿತು ಸ್ಥಿತಿ ವರದಿಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ಔಷಧ ನಿಯಂತ್ರಕ ಪ್ರಾಧಿಕಾರವನ್ನು ಕೇಳಿದೆ ಮತ್ತು ಅಂತೆಯೇ ಜುಲೈ 29ಕ್ಕೆ ವಿಚಾರಣೆಯನ್ನು ಮುಂದೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com