ನವದೆಹಲಿ: ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ 60 ಲಕ್ಷ ಡೋಸ್ ಗಳಷ್ಟು ಲಸಿಕೆಯನ್ನು 3 ದಿನಗಳಲ್ಲಿ ಪೂರೈಕೆ ಮಾಡುವುದಾಗಿ ಕೇಂದ್ರ ಸರ್ಕಾರ ಮೇ 03 ರಂದು ತಿಳಿಸಿದೆ.
ಆರೋಗ್ಯ ಸಚಿವಾಲಯ ಮಾಧ್ಯಮ ಪ್ರಕಟಣೆಯನ್ನು ಪ್ರಕಟಿಸಿದ್ದು, ಈ ವರೆಗೂ ಭಾರತ ಸರ್ಕಾರ 16.54 ಕೋಟಿ ಲಸಿಕೆ ಡೋಸ್ ಗಳನ್ನು ಕೇಂದ್ರಾಡಳಿತ/ ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ನೀಡಿದೆ.
ಈ ಪೈಕಿ 15,79,21,537 ಗಳಷ್ಟು ಲಸಿಕೆ ಡೋಸ್ ಗಳನ್ನು ಸೋಮವಾರ ಬೆಳಿಗ್ಗೆ ವರೆಗೂ ಜನರಿಗೆ ನೀಡಲಾಗಿದೆ. ಇನ್ನೂ 75 ಲಕ್ಷಗಳಷ್ಟು ಡೋಸ್ ಗಳು ಬಳಕೆಯಾಗದೇ ಉಳಿದಿದ್ದು, ಇನ್ನಷ್ಟೇ ನೀಡಬೇಕಿದೆ, ಇದರ ಜೊತೆಗೆ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಇನ್ನು ಮೂರು ದಿನಗಳಲ್ಲಿ 59 ಲಕ್ಷ ಡೋಸ್ ಗಳನ್ನು ನೀಡಲಾಗುತ್ತದೆ ಎಂದು ಹೇಳಿದೆ.
Advertisement