ಸೋಲುಗಳು ಜೀವನದ ಒಂದು ಭಾಗ, ಇಂತಹ ಸೋಲುಗಳನ್ನು ಜೀವನದಲ್ಲಿ ಬಹಳ ನೋಡಿದ್ದೇನೆ: ಕೆ.ಅಣ್ಣಾಮಲೈ

ಸೋಲುಗಳು ಜೀವನದ ಒಂದು ಭಾಗ. ಇಂತಹ ಸೋಲುಗಳನ್ನ ಜೀವನದಲ್ಲಿ ನಾನು ಬಹಳ ನೋಡಿದ್ದೇನೆಂದು ತಮಿಳುನಾಡಿನ ಅರವಕುರುಚಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿರುವ ಅಣ್ಣಾಮಲೈ ಅವರು ಹೇಳಿದ್ದಾರೆ. 
ಅಣ್ಣಾಮಲೈ
ಅಣ್ಣಾಮಲೈ
Updated on: 

ಬೆಂಗಳೂರು: ಸೋಲುಗಳು ಜೀವನದ ಒಂದು ಭಾಗ. ಇಂತಹ ಸೋಲುಗಳನ್ನ ಜೀವನದಲ್ಲಿ ನಾನು ಬಹಳ ನೋಡಿದ್ದೇನೆಂದು ತಮಿಳುನಾಡಿನ ಅರವಕುರುಚಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿರುವ ಅಣ್ಣಾಮಲೈ ಅವರು ಹೇಳಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಸೋಲುಗಳು ಜೀವನದ ಒಂದು ಭಾಗ. ಇಂತಹ ಸೋಲುಗಳನ್ನ ಜೀವನದಲ್ಲಿ ನಾನು ಬಹಳ ನೋಡಿದ್ದೇನೆ. ಗೆಲ್ಲಬೇಕೆಂದು ಬಯಸಿದ್ದೆ. ಆದರೆ, ಗೆಲುವಿನ ರೇಖೆಯನ್ನು ದಾಟುವುದಕ್ಕೆ ಆಗಲಿಲ್ಲ. ಅರವಕುರುಚಿ ಕ್ಷೇತ್ರದ ಮತದಾರರಿಗೆ ಧನ್ಯವಾದಗಳು. 68 ಸಾವಿರ ಮತ ನೀಡಿದ ಮತದಾರರಿಗೆ ಧನ್ಯವಾದಗಳೆಂದು ಹೇಳಿದ್ದಾರೆ. 

ಐಪಿಎಸ್​ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಸಿಗಂ ಎಂದೇ ಖ್ಯಾತಿ ಗಳಿಸಿದ್ದ ಅಣ್ಣಾಮಲೈ ಅವರು, ಐಪಿಎಸ್​ ತೊರೆದು ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. ತಮಿಳು ನಾಡಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com