ದೇಶದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ; ಪಾಸಿಟಿವಿಟಿ ದರ ಶೇ.16.98ಕ್ಕೆ ಕುಸಿತ: ಕೇಂದ್ರ ಸರ್ಕಾರ

ಕಳೆದ 24 ಗಂಟೆಗಳ ಅವಧಿಯಲ್ಲಿ 55,344 ಪ್ರಕರಣಗಳ ನಿವ್ವಳ ಇಳಿಕೆಯೊಂದಿಗೆ ದೇಶದಲ್ಲಿ  ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ  36,18,458ಕ್ಕೆ ಕಡಿಮೆಯಾಗಿದೆ. ದೈನಂದಿನ ಪಾಸಿಟಿವಿಟಿ ದರ ಶೇ.16.98ಕ್ಕೆ ಕುಸಿತವಾಗಿದೆ. ಇದು ಒಟ್ಟು ಸೋಂಕು ಪ್ರಕರಣಗಳ ಶೇ. 14.66 ರಷ್ಟಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ. 
ಆಕ್ಸಿಜನ್ ಬಸ್ ನಲ್ಲಿ ಕೋವಿಡ್ ರೋಗಿಗೆ ಸೇವೆ ನೀಡುತ್ತಿರುವ ಆರೋಗ್ಯ ಕಾರ್ಯಕರ್ತೆ
ಆಕ್ಸಿಜನ್ ಬಸ್ ನಲ್ಲಿ ಕೋವಿಡ್ ರೋಗಿಗೆ ಸೇವೆ ನೀಡುತ್ತಿರುವ ಆರೋಗ್ಯ ಕಾರ್ಯಕರ್ತೆ
Updated on: 

ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ 55,344 ಪ್ರಕರಣಗಳ ನಿವ್ವಳ ಇಳಿಕೆಯೊಂದಿಗೆ ದೇಶದಲ್ಲಿ  ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ  36,18,458ಕ್ಕೆ ಕಡಿಮೆಯಾಗಿದೆ. ದೈನಂದಿನ ಪಾಸಿಟಿವಿಟಿ ದರ ಶೇ.16.98ಕ್ಕೆ ಕುಸಿತವಾಗಿದೆ. ಇದು ಒಟ್ಟು ಸೋಂಕು ಪ್ರಕರಣಗಳ ಶೇ. 14.66 ರಷ್ಟಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ. 

ಕರ್ನಾಟಕ, ಮಹಾರಾಷ್ಟ್ರ, ಕೇರಳ, ರಾಜಸ್ಥಾನ, ತಮಿಳುನಾಡು, ಆಂಧ್ರ ಪ್ರದೇಶ ,ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್
ಮತ್ತು ಛತ್ತೀಸ್ ಗಢ ರಾಜ್ಯಗಳಲ್ಲಿ ದೇಶದ ಒಟ್ಟು ಶೇ.74.69 ರಷ್ಟು ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಕೂಡಾ
ಇಳಿಕೆಯಾಗುತ್ತಿದೆ. ಮೇ 3 ರಂದು ಶೇ. 24.47 ರಷ್ಟಿದ್ದ ಪಾಸಿಟಿವಿಟಿ ದರ ಮೇ 16 ರಂದು ಶೇ.16.98ಕ್ಕೆ ಕುಸಿತವಾಗಿದೆ ಎಂದು
ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ  3 ಲಕ್ಷದ 62 ಸಾವಿರದ 437 ಮಂದಿ ಚೇತರಿಸಿಕೊಂಡಿದ್ದು, ಒಟ್ಟಾರೇ ಗುಣಮುಖರಾದವರ ಸಂಖ್ಯೆ
2,07,95,335ಕ್ಕೆ ಏರಿಕೆಯಾಗಿದೆ. ಚೇತರಿಸಿಕೊಂಡವರಲ್ಲಿ ಶೇ.70.94 ಮಂದಿ ಗರಿಷ್ಠ ಪ್ರಕರಣಗಳಿರುವ 10 ರಾಜ್ಯಗಳಿಗೆ
ಸೇರಿದವರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 3, 11,170 ಪ್ರಕರಣ ದೃಢಪಟ್ಟಿದ್ದು, ಇವುಗಳ ಪೈಕಿ ಶೇ. 74.7 ರಷ್ಟು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ 10 ರಾಜ್ಯಗಳಿವೆ.

ಕರ್ನಾಟಕದಲ್ಲಿ ಗರಿಷ್ಠ 41,664, ಮಹಾರಾಷ್ಟ್ರದಲ್ಲಿ 34,848, ತಮಿಳುನಾಡಿನಲ್ಲಿ 33,658, ಪ್ರಕರಣಗಳು ವರದಿಯಾಗಿವೆ. ಮರಣ ಪ್ರಮಾಣ ಶೇ.1.09 ರಷ್ಟಿದೆ. ನಿನ್ನೆ ಒಂದೇ ದಿನ ಒಟ್ಟಾರೇ 4,077 ಸಾವಿನ ಪ್ರಕರಣಗಳು ವರದಿಯಾಗಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com