ಕೋವಿಡ್ 2ನೇ ಅಲೆ ಭಾರತದ ಮೇಲೆ ಚೀನಾದ ಯುದ್ಧ: ವಿಜಯ್ ವರ್ಗೀಯಾ

ಕೆಲ ತಿಂಗಳುಗಳಿಂದ ದೇಶದಲ್ಲಿ ಸಾವು, ನೋವುಗಳಿಗೆ ಕಾರಣವಾಗಿರುವ ವಿನಾಶಕಾರಿ ಕೋವಿಡ್-19 ಎರಡನೇ ಅಲೆ ದೇಶದ ವಿರುದ್ಧ ಚೀನಾದ ವೈರಲ್ ಯುದ್ಧ ಎಂದು ಹಿರಿಯ ಬಿಜೆಪಿ ಮುಖಂಡ ಕೈಲಾಶ್ ವಿಜಯ್ ವರ್ಗೀಯಾ ಹೇಳಿದ್ದಾರೆ. ಈ ಸಂದರ್ಭದಲ್ಲಿ ನಾವೆಲ್ಲ ದೇಶದ ಜೊತೆ ನಿಲ್ಲಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ವಿಜಯ್ ವರ್ಗೀಯಾ
ವಿಜಯ್ ವರ್ಗೀಯಾ

ನವದೆಹಲಿ: ಕೆಲ ತಿಂಗಳುಗಳಿಂದ ದೇಶದಲ್ಲಿ ಸಾವು, ನೋವುಗಳಿಗೆ ಕಾರಣವಾಗಿರುವ ವಿನಾಶಕಾರಿ ಕೋವಿಡ್-19 ಎರಡನೇ ಅಲೆ ದೇಶದ ವಿರುದ್ಧ ಚೀನಾದ ವೈರಲ್ ಯುದ್ಧ ಎಂದು ಹಿರಿಯ ಬಿಜೆಪಿ ಮುಖಂಡ ಕೈಲಾಶ್ ವಿಜಯ್ ವರ್ಗೀಯಾ ಹೇಳಿದ್ದಾರೆ. ಈ ಸಂದರ್ಭದಲ್ಲಿ ನಾವೆಲ್ಲ ದೇಶದ ಜೊತೆ ನಿಲ್ಲಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ದೇಶ ಹಾಗೂ ಪ್ರಧಾನಿ ನರೇಂದ್ರ ಮೋದಿ ಜಾಗತಿಕವಾಗಿ ನಿಲ್ಲುವುದನ್ನು ತಡೆಯಲು ಈ ವೈರಲ್ ಯುದ್ಧ ನಡೆಸಲಾಗಿದೆ ಎಂದು 
ಪಶ್ಚಿಮ ಬಂಗಾಳದ ಬಿಜೆಪಿ ಉಸ್ತುವಾರಿ ವಿಜಯ್ ವರ್ಗೀಯಾ ಹೇಳಿದ್ದಾರೆ. ಈ ಕೋವಿಡ್ ಎರಡನೇ ಅಲೆ ಬಂದಿದ್ದೇಯೂ ಅಥವಾ ಕಳುಹಿಸಲಾಗಿದೆಯೋ ಎಂಬುದು ಚರ್ಚೆಯ ವಿಷಯವಾಗಿದೆ. ಏಕೆಂದರೆ ವಿಶ್ವದಲ್ಲಿ ಚೀನಾಕ್ಕೆ ಸವಾಲು ಹಾಕಿದವರು ಯಾರಾದರೂ ಇದ್ದಲ್ಲಿ ಅದು ಭಾರತ ಮತ್ತು ಮೋದಿಜೀ. ಎರಡನೇ ಅಲೆ ಪ್ರಧಾನಿ ಮೋದಿ ಅವರ ವರ್ಚಸ್ಸು ಮತ್ತು ಜನಪ್ರಿಯತೆಯನ್ನು ಕಡಿಮೆ ಮಾಡಲು ಚೀನಾದ ಟೂಲ್ ಕಿಟ್  ಆಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಎರಡನೇ ಅಲೆ ಭಾರತದಲ್ಲಿ ಮಾತ್ರ ಸಾಕಷ್ಟು ಪರಿಣಾಮವನ್ನುಂಟು ಮಾಡುತ್ತಿದೆ. ನೆರೆಯ ದೇಶಗಳಾದ ಬಾಂಗ್ಲಾದೇಶ, ಪಾಕಿಸ್ತಾನ,
ಶ್ರೀಲಂಕಾ, ಭೂತಾನ್, ಅಪ್ಘಾನಿಸ್ತಾನದಲ್ಲಿ ಯಾವುದೇ ಪರಿಣಾಮ ಬೀರಿಲ್ಲ.ಆದ್ದರಿಂದ ಚೀನಾದಿಂದ ಭಾರತಕ್ಕೆ ತೊಂದರೆಯಾಗಿದೆ ಅನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com