ದೆಹಲಿ ಟ್ರಾಕ್ಟರ್ ರ್ಯಾಲಿಯಲ್ಲಿ ಬಂಧನಕ್ಕೊಳಗಾಗಿದ್ದ ಪ್ರತಿ ರೈತರಿಗೆ 2 ಲಕ್ಷ ರೂಪಾಯಿ ಘೋಷಿಸಿದ ಪಂಜಾಬ್ ಸರ್ಕಾರ!

ದೆಹಲಿಯಲ್ಲಿ 2021 ರ ಜನವರಿ 26 ರಂದು ಹಿಂಸಾಚಾರಕ್ಕೆ ತಿರುಗಿದ ಟ್ರ್ಯಾಕ್ಟರ್ ರ್ಯಾಲಿ ಪ್ರಕರಣದಲ್ಲಿ ಬಂಧನಕ್ಕೊಳಗಾದವರಿಗೆ ಪಂಜಾಬ್ ಸರ್ಕಾರ 2 ಲಕ್ಷ ರೂಪಾಯಿಗಳ ಆರ್ಥಿಕ ನೆರವನ್ನು ಘೋಷಿಸಿದೆ. 
ಪಂಜಾಬ್ ಸಿಎಂ ಚನ್ನಿ
ಪಂಜಾಬ್ ಸಿಎಂ ಚನ್ನಿ

ಚಂಡೀಗಢ: ದೆಹಲಿಯಲ್ಲಿ 2021 ರ ಜನವರಿ 26 ರಂದು ಹಿಂಸಾಚಾರಕ್ಕೆ ತಿರುಗಿದ ಟ್ರ್ಯಾಕ್ಟರ್ ರ್ಯಾಲಿ ಪ್ರಕರಣದಲ್ಲಿ ಬಂಧನಕ್ಕೊಳಗಾದವರಿಗೆ ಪಂಜಾಬ್ ಸರ್ಕಾರ 2 ಲಕ್ಷ ರೂಪಾಯಿಗಳ ಆರ್ಥಿಕ ನೆರವನ್ನು ಘೋಷಿಸಿದೆ. 

ಪಂಜಾಬ್ ಸರ್ಕಾರದ ಈ ನಡೆ ಕೇಂದ್ರ ಸರ್ಕಾರ ಮತ್ತು ಪಂಜಾಬ್ ನಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದ ನಡುವೆ ಮತ್ತೊಂದು ಸಮರ, ವಿವಾದವನ್ನು ಹುಟ್ಟುಹಾಕಲಿದೆ.

ದೆಹಲಿಯಲ್ಲಿ ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್-ಹರ್ಯಾಣ ರೈತರು ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಇದರ ಭಾಗವಾಗಿ ಈ ವರ್ಷದ ಜ.26 ರಂದು, ರೈತರು ದೆಹಲಿಯ ನಿರ್ದಿಷ್ಟ ಪ್ರದೇಶಗಳಲ್ಲಿ ಟ್ರಾಕ್ಟರ್ ರ್ಯಾಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಈ ಪ್ರತಿಭಟನೆ ಹಿಂಸಾಚಾರದ ಸ್ವರೂಪ ಪಡೆದು ಹಲವು ಮಂದಿಯನ್ನು ಬಂಧಿಸಲಾಗಿತ್ತು.

ಈ ಘಟನೆಯನ್ನು ಬಂಧನಕ್ಕೊಳಗಾದವರಿಗೆ 2 ಲಕ್ಷ ರೂಪಾಯಿ ನೀಡುವುದರ ಬಗ್ಗೆ ಪಂಜಾಬ್ ಸಿಎಂ ಚರಣ್ ಜಿತ್ ಸಿಂಗ್ ಛನ್ನಿ ಟ್ವೀಟ್ ಮೂಲಕ ಖಚಿತಪಡಿಸಿದ್ದು,  ಜ.26 ರ ಟ್ರ್ಯಾಕ್ಟರ್ ರ್ಯಾಲಿಯ ಪ್ರತಿಭಟನೆ ವೇಳೆ ದೆಹಲಿ ಪೊಲೀಸರಿಂದ ಬಂಧನಕ್ಕೆ ಒಳಗಾದವರಿಗೆ ತಲಾ 2 ಲಕ್ಷ ರೂಪಾಯಿ ನೆರವು ನೀಡುವುದಾಗಿ ಘೋಷಿಸಲಾಗಿದೆ. "ರೈತರ ಪ್ರತಿಭಟನೆಯ ಪರವಾಗಿರುವ ನಮ್ಮ ಸರ್ಕಾರದ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದು ದೆಹಲಿಯಲ್ಲಿ ಜ.26 ರಂದು ಪ್ರತಿಭಟನೆ ವೇಳೆ ಬಂಧನಕ್ಕೆ ಒಳಗಾದವರಿಗೆ ನಮ್ಮ ಸರ್ಕಾರ 2 ಲಕ್ಷ ರೂಪಾಯಿ ನೆರವು ನೀಡುತ್ತಿದೆ" ಎಂದು ಸಿಎಂ ಛನ್ನಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com