The New Indian Express
ಚಂಡೀಘಡ: ರೈತರ ಪ್ರತಿಭಟನೆಗೆ ಕಾರಣವಾಗಿರುವ ವಿವಾದಾತ್ಮಕ ಕೃಷಿ ಸುಧಾರಣಾ ಕಾನೂನಿನ ಮೂಲ ನಿರ್ಮಾತೃ ಶಿರೋಮಣಿ ಅಕಾಲಿ ದಳ ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವ್ ಜೋತ್ ಸಿಂಗ್ ಸಿಧು ಆರೋಪಿಸಿದ್ದಾರೆ. ಅಕಾಲಿದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ ಅವರದೇ ಯೋಜನೆ ಅದು ಎಂದು ಸಿಧು ಕೆಟಕಿಯಾಡಿದ್ದಾರೆ.
ಇದನ್ನೂ ಓದಿ: ಕೃಷಿ ಕಾನೂನುಗಳನ್ನು ವಿರೋಧಿಸಿ ಪದ್ಮ ವಿಭೂಷಣ ಪ್ರಶಸ್ತಿ ಹಿಂತಿರುಗಿಸಿದ ಪ್ರಕಾಶ್ ಸಿಂಗ್ ಬಾದಲ್
ಸಿಧು ಆರೋಪಕ್ಕೆ ಪ್ರತಿಕ್ರಿಯಿಸಿರುವ ಶಿರೋಮಣಿ ಅಕಾಲಿ ದಳ ಸಿಧು ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರೈತ ಸಮುದಾಯಕ್ಕೆ ನಿಜಕ್ಕೂ ಸಹಾಯ ಮಾಡುವ ಹಾಗಿದ್ದರೆ 2017ರಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ಕಾಯ್ದೆಯನ್ನು ಹಿಂದಕ್ಕೆ ಪಡೆಯಲಿ ಎಂದು ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: ಸಿಎಂ ಅಮರೀಂದರ್ ಸಿಂಗ್ ನಿವಾಸದ ಎದುರು ಪ್ರತಿಭಟನೆ: ಸುಖ್ಬೀರ್ ಸಿಂಗ್ ಬಾದಲ್ ಪೊಲೀಸ್ ವಶಕ್ಕೆ
ಈ ಬಗ್ಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಸಿಧು ಅವರು ಬಾದಲ್ ಅವರ ಹಳೆಯ ವಿಡಿಯೋಗಳನ್ನು ಪ್ರದರ್ಶನ ಮಾಡಿದ್ದಾರೆ. ಆ ವಿಡಿಯೋದಲ್ಲಿ ಪ್ರಕಾಶ್ ಸಿಂಗ್ ಬಾದಲ್ ಅವರು ಕೇಂದ್ರದ ಕೃಷಿ ಸುಧಾರಣಾ ಕಾನೂನನ್ನು ಹೊಗಳುತ್ತಿರುವುದು ಕಂಡು ಬಂದಿದೆ. ನಂತರದ ವಿಡಿಯೋದಲ್ಲಿ ಅವರು ಅದೇ ಕಾನೂನನ್ನು ತೆಗಳುತ್ತಿರುವುದು ಕಂಡು ಬಂದಿದೆ.