ನವದೆಹಲಿ: ದೇಶದ ಸಬ್ ಮರೈನ್ ಪ್ರಾಜೆಕ್ಟ್ ಸಂಬಂಧಿಸಿದಂತೆ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇರೆ ಸಿಬಿಐ, ನೌಕಾದಳ ಕಮಾಂಡರ್ ಸೇರಿದಂತೆ ಒಟ್ಟು ಐವರನ್ನು ಬಂಧಿಸಿದೆ.
ಇಬ್ಬರು ನಿವೃತ್ತ ನೌಕಾದಳ ಸಿಬ್ಬಂದಿ ಹಾಗೂ ಓರ್ವ ವ್ಯಕ್ತಿಯನ್ನು ಸಿಬಿಐ ವಶಕ್ಕೆ ಪಡೆದುಕೊಂಡಿದೆ. ಪ್ರಕರಣ ಸಂಬಂಧ ಸಿಬಿಐ ದೆಹಲಿ, ಮುಂಬೈ, ಹೈದರಾಬಾದ್, ವಿಶಾಖಪಟ್ಟಣಂ ಸೇರಿದಂತೆ ಇದುವರೆಗೂ 19 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ಶೋಧ ಕಾರ್ಯಾಚರಣೆ ವೇಳೆ ದಾಖಲೆಪತ್ರಗಳು, ಡಿಜಿಟಲ್ ಸಾಕ್ಷ್ಯಗಳು ಸಿಬಿಐ ಅಧಿಕಾರಿಗಳಿಗೆ ಲಭ್ಯವಾಗಿದೆ ಎನ್ನಲಾಗಿದೆ. ಸಿಬಿಐ ತನಿಖೆಗೆ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ನೌಕಾದಲ ತಿಳಿಸಿದೆ. ಅಲ್ಲದೆ ಆಂತರಿಕ ತನಿಖಾ ಸಮಿತಿಯನ್ನು ರಚನೆ ಮಾಡಲಾಗಿದ್ದು ರಕ್ಷಣಾ ಮಾಹಿತಿ ಸೋರಿಕೆಯಾದುದರ ಕುರಿತು ಪರಿಶೀಲನೆ ನಡೆಸಲಿದೆ.
ಪ್ಯಾಂಡೋರಾ ಪೇಪರ್ಸ್: ಜಗತ್ತಿನ ಪ್ರಭಾವಿ ವ್ಯಕ್ತಿಗಳ ವಿದೇಶಿ ಹೂಡಿಕೆಗಳ ರಹಸ್ಯ ದಾಖಲೆಗಳು ಸೋರಿಕೆ
ಪಾಕ್ ಏಜೆಂಟ್ಗಳೊಂದಿಗೆ ರಕ್ಷಣಾ ರಹಸ್ಯ ಹಂಚಿಕೊಂಡ ಡಿಆರ್ಡಿಒದ 4 ಉದ್ಯೋಗಿಗಳ ಬಂಧನ
ಬೆಂಗಳೂರಿನ ವಾಯುನೆಲೆಯ ಬಳಿ ಡ್ರೋನ್ ಹಾರಾಟ: 40 ದಿನಗಳ ನಂತರವೂ ನಿಗೂಢವಾಗಿಯೇ ಉಳಿದ ರಹಸ್ಯ
ಪಾಕ್ ನ ಐಎಸ್ಐಗೆ ರಹಸ್ಯ ದಾಖಲೆಗಳನ್ನು ರವಾನಿಸುತ್ತಿದ್ದ ಭಾರತೀಯ ಯೋಧನ ಬಂಧನ
ಚೀನಾಗೆ ರಹಸ್ಯ ದಾಖಲೆ ಹಸ್ತಾಂತರ, ಮನಿ ಲಾಂಡರಿಂಗ್ ಕೇಸ್: ಇಡಿಯಿಂದ ಫ್ರೀ ಲ್ಯಾನ್ಸ್ ಪತ್ರಕರ್ತನ ಬಂಧನ
ಡಯೆಟ್, ಸೆಕ್ಸ್, ಕೊಕೇನ್: ಪ್ರಖ್ಯಾತ ಇನ್ನರ್ ವೇರ್ ಸಂಸ್ಥೆಯ ಸೂಪರ್ ಮಾಡೆಲ್ ಬಿಚ್ಚಿಟ್ಟ ರಹಸ್ಯ
Advertisement