The New Indian Express
ವಿಜಯವಾಡ: ನ್ಯಾಯಾಂಗ ಮತ್ತು ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಗಳನ್ನು ಹಂಚಿಕೊಂಡ ಕಾರಣಕ್ಕೆ ಸಿಬಿಐ 6 ಮಂದಿಯನ್ನು ಬಂಧಿಸಿದೆ. ಈ ಹಿಂದೆ ಸಿಬಿಐ ನ್ಯಾಯಾಂಗ ವಿರುದ್ಧ ಕೆಟ್ಟದಾಗಿ ಪೋಸ್ಟ್ ಮಾಡಿದ್ದ 5 ಮಂದಿಯನ್ನು ಬಂಧಿಸಿತ್ತು. ಇದರೊಂದಿಗೆ ಬಂಧನಕ್ಕೊಳಗಾದವರ ಸಂಖ್ಯೆ 11ಕ್ಕೆ ಏರಿಕೆಯಾದಂತಾಗಿದೆ.
ಇದನ್ನೂ ಓದಿ: ಮುದ್ರಣ- ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅಶ್ಲೀಲ ಮಾಹಿತಿ ಪ್ರಸಾರಕ್ಕೆ ನಿರ್ಬಂಧ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಆಂಧ್ರಪ್ರದೇಶ ಹೈಕೋರ್ಟ್ ನ್ಯಾಯಾಧೀಶರು ನೀಡಿದ್ದ ಸೂಚನೆಯಂತೆ 2020ರಲ್ಲಿ 16 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಹೈಕೋರ್ಟ್ ಸೂಚನೆಯಂತೆ ಈ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿತ್ತು.
ಇದನ್ನೂ ಓದಿ: ಹಿರಿಯ ಅಧಿಕಾರಿ ಸೂಚಿಸಿದರೆ ನೀವು ಕೊಲೆ ಮಾಡುತ್ತೀರಾ?: ಪೊಲೀಸ್ ಅಧಿಕಾರಿಗೆ ಮದ್ರಾಸ್ ಹೈಕೋರ್ಟ್ ಪ್ರಶ್ನೆ
ಆರೋಪಿಗಳಲ್ಲಿ ಐವರು ವಿದೇಶದಲ್ಲಿದ್ದು ಅವರನ್ನು ಸ್ವದೇಶಕ್ಕೆ ಕರೆತರುವ ಪ್ರಯತ್ನಗಳು ನಡೆದಿದೆ. ಈ ಹಿಂದೆ ನ್ಯಾಯಾಂಗ ವಿರುದ್ಧದ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಿಂದ ಸಿಬಿಐ ಡಿಲೀಟ್ ಮಾಡಿಸಿತ್ತು.
ಇದನ್ನೂ ಓದಿ: ಆರ್ಟಿಐ ಮೂಲಕ ಪೊಲೀಸ್ ತನಿಖಾ ವರದಿ ಪಡೆಯಬಹುದು: ಕರ್ನಾಟಕ ಹೈಕೋರ್ಟ್