ಉತ್ತರ ಪ್ರದೇಶ: 17 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ 'ತಂತ್ರಿ'ಯ ಬಂಧನ

17 ವರ್ಷದ ಬಾಲಕಿಯನ್ನು ಅಪಹರಿಸಿ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ "ತಂತ್ರಿ"ಯನ್ನು ಬಂಧಿಸಿರುವುದಾಗಿ ಬಲಿಯಾ ಜಿಲ್ಲೆಯ ಪೊಲೀಸರು ಮಂಗಳವಾರ  ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬಲಿಯಾ(ಉತ್ತರ ಪ್ರದೇಶ): 17 ವರ್ಷದ ಬಾಲಕಿಯನ್ನು ಅಪಹರಿಸಿ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ "ತಂತ್ರಿ"ಯನ್ನು ಬಂಧಿಸಿರುವುದಾಗಿ ಬಲಿಯಾ ಜಿಲ್ಲೆಯ ಪೊಲೀಸರು ಮಂಗಳವಾರ  ತಿಳಿಸಿದ್ದಾರೆ.

ಆರೋಪಿ ಜೋಗ್ ಬಾಬಾ(23)ನನ್ನು ಇಲ್ಲಿನ ರೈಲ್ವೇ ನಿಲ್ದಾಣದಲ್ಲಿ ಬಂಧಿಸಲಾಗಿದೆ ಮತ್ತು ಆತನ ಜೊತೆಯಲ್ಲಿದ್ದ ಬಾಲಕಿಯನ್ನು ಸೋಮವಾರ ರಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ರೇವತಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯ ನಿವಾಸಿಯಾದ ಬಾಲಕಿಯನ್ನು ಆರೋಪಿ ಜೂನ್ ನಲ್ಲಿ ಅಪಹರಿಸಿದ್ದರು ಎಂದು ಹಿರಿಯ ಸಬ್ ಇನ್ಸ್ ಪೆಕ್ಟರ್ ಅಜಯ್ ಯಾದವ್ ತಿಳಿಸಿದ್ದಾರೆ. 

ತಾನು ಚಿಕಿತ್ಸೆಗಾಗಿ "ತಂತ್ರಿ"ಯನ್ನು ಭೇಟಿ ಮಾಡಿದ್ದೇ. ಆದರೆ ಆರೋಪಿ ತಂತ್ರಿ ಮದುವೆಯಾಗುವುದಾಗಿ ಭರವಸೆ ನೀಡಿ, ತನ್ನನ್ನು ಅಪಹರಿಸಿ, ದೆಹಲಿ ಮತ್ತು ಕೋಟಾಗೆ ಕರೆದೊಯ್ದು, ಸುಮಾರು ಮೂರು ತಿಂಗಳ ಕಾಲ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಸಿದ್ದಾರೆ. 

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಆಕೆಯ ತಂದೆ ಜೂನ್ 30 ರಂದು ಆರೋಪಿಗಳ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದಾರೆ ಎಂದು ಯಾದವ್ ಹೇಳಿದ್ದಾರೆ.

ಬಾಲಕಿಯ ಹೇಳಿಕೆಯ ಆಧಾರದ ಮೇಲೆ, ತಂತ್ರಿ ಜೊಗ್ ಬಾಬಾ ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ ಮತ್ತು ಪೋಕ್ಸೊ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com