ಮಿಸ್ ಇಂಡಿಯಾ ಮಾನಸಾ ವಾರಣಾಸಿಗೆ ಕೊರೋನಾ ಸೋಂಕು; ವಿಶ್ವ ಸುಂದರಿ ಸ್ಪರ್ಧೆ ಮುಂದೂಡಿಕೆ

ಮಿಸ್ ಇಂಡಿಯಾ-2020 ಮಾನಸಾ ವಾರಣಾಸಿ ಸೇರಿದಂತೆ 16 ಮಂದಿ ಸ್ಪರ್ಧಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಇದರ ಪರಿಣಾಮ ವಿಶ್ವ ಸುಂದರಿ – 2021 ಸ್ಪರ್ಧೆಯನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ಮಾನಸಾ ವಾರಣಾಸಿ
ಮಾನಸಾ ವಾರಣಾಸಿ

ನವದೆಹಲಿ: ಮಿಸ್ ಇಂಡಿಯಾ-2020 ಮಾನಸಾ ವಾರಣಾಸಿ ಸೇರಿದಂತೆ 16 ಮಂದಿ ಸ್ಪರ್ಧಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಇದರ ಪರಿಣಾಮ ವಿಶ್ವ ಸುಂದರಿ – 2021 ಸ್ಪರ್ಧೆಯನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.

ಡಿಸೆಂಬರ್ 16 ರಂದು ಫಿನಾಲೆ ಪೋರ್ಟೊ ರಿಕೊದಲ್ಲಿ ನಡೆಯಬೇಕಿತ್ತು. ಕೊರೋನಾ ಸೋಂಕು ಕಾರಣದಿಂದ ವಿಶ್ವ ಸುಂದರಿ 2021 ಅಂತಿಮ ಸ್ಪರ್ಧೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಸ್ಪರ್ಧಿಗಳು, ಸಿಬ್ಬಂದಿ ಹಾಗೂ ಸಾಮಾನ್ಯ ಜನರ ಆರೋಗ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ಸಂಘಟಕರು ಕಾರ್ಯಕ್ರಮ ಮುಂದೂಡಿದ್ದು, ಮುಂದಿನ 90 ದಿನಗಳಲ್ಲಿ ಪೋರ್ಟೊ ರಿಕೊದ ಜೋಸ್ ಮಿಗುಯೆಲ್ ಆಗ್ರೊಲೊಟ್ ಕೊಲಿಸಿಯಂನಲ್ಲಿ ವಿಶ್ವ ಸುಂದರಿ ಸ್ಪರ್ಧೆಯ ಸಮಾರೋಪದ ವೇಳಾಪಟ್ಟಿ ನಿಗದಿಪಡಿಸುವುದಾಗಿ ಪ್ರಕಟಿಸಿದ್ದಾರೆ.

ಮಿಸ್ ವರ್ಲ್ಡ್ 2021 ಸ್ಪರ್ಧಿಗಳು ಸೇರಿದಂತೆ 17 ಮಂದಿ ಸಿಬ್ಬಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಕೊರೊನಾ ಸೋಂಕಿಗೆ ಒಳಗಾದವರಲ್ಲಿ ಭಾರತವನ್ನು ಪ್ರತಿನಿಧಿಸಿರುವ ಸ್ಪರ್ಧಿ, ನಿರ್ಮಾಣ ತಂಡದ ಸದಸ್ಯರು ಸೇರಿರುವ ಕಾರಣ ಪ್ರೇಕ್ಷಕರ ಸುರಕ್ಷತೆಗಾಗಿ ಮಿಸ್ ವರ್ಲ್ಡ್ ಸ್ಪರ್ಧೆಯನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಕಾರ್ಯಕ್ರಮ ಸಂಘಟಕರು ವಿವರಿಸಿದ್ದಾರೆ. 23 ವರ್ಷದ ಮಾನಸಾ ವಾರಣಾಸಿ 70 ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com