ಚೆನ್ನೈ ಮೃಗಾಲಯದಲ್ಲಿ ಮತ್ತೊಂದು ಕೋವಿಡ್-19 ಸೋಂಕಿಗೆ ಸಿಂಹಿಣಿ ಸಾವು!

ತಮಿಳುನಾಡು ರಾಜಧಾನಿ ಚೆನ್ನೈನಲ್ಲಿರುವ ವಂಡಲೂರು ಮೃಗಾಲಯದಲ್ಲಿ ಕೋವಿಡ್ ಸಾಂಕ್ರಾಮಿಕ ಸಾವಿನ ಸರಣಿ ಮುಂದುವರೆದಿದ್ದು, ಬುಧವಾರ ಕೂಡ ಹೆಣ್ಣು ಸಿಂಹವೊಂದು ಸೋಂಕಿಗೆ ಬಲಿಯಾಗಿದೆ.
ಚೆನ್ನೈನ ವಂಡಲೂರು ಮೃಗಾಲಯ
ಚೆನ್ನೈನ ವಂಡಲೂರು ಮೃಗಾಲಯ

ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈನಲ್ಲಿರುವ ವಂಡಲೂರು ಮೃಗಾಲಯದಲ್ಲಿ ಕೋವಿಡ್ ಸಾಂಕ್ರಾಮಿಕ ಸಾವಿನ ಸರಣಿ ಮುಂದುವರೆದಿದ್ದು, ಬುಧವಾರ ಕೂಡ ಹೆಣ್ಣು ಸಿಂಹವೊಂದು ಸೋಂಕಿಗೆ ಬಲಿಯಾಗಿದೆ.

ಮೂಲಗಳ ಪ್ರಕಾರ ಸುಮಾರು 23 ವರ್ಷದ ಕವಿತಾ ಹೆಸರಿನ ಹೆಣ್ಣು ಸಿಂಹವೊಂದು ಸಾವನ್ನಪ್ಪಿದೆ. ಈ ಹಿಂದೆಯೇ ಈ ಕವಿತಾ ಸಿಂಹ ಸೋಂಕಿಗೆ ತುತ್ತಾಗಿರುವುದು ಕಂಡುಬಂದಿತ್ತು. ಅಂದಿನಿಂದಲೇ ಸಿಂಹಕ್ಕೆ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಸಿಂಹದ  ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಸಿಂಹ ಘನ ಆಹಾರವನ್ನು ತ್ಯಜಿಸಿತ್ತು. ಹೀಗಾಗಿ ಸಿಂಹಕ್ಕೆ ದ್ರವಾಹಾರ ನೀಡಲಾಗುತ್ತಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಿಂಹ ಸಾವನ್ನಪ್ಪಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಮೃಗಾಲಯದಲ್ಲಿರುವ 14 ಸಿಂಹಗಳು ಪೈಕಿ ಮೂರು ಸಿಂಹಗಳು ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿವೆ. ಈ ಹಿಂದೆ ನಡೆಸಲಾಗಿದ್ದ ಪರೀಕ್ಷೆಯಲ್ಲಿ ಎಲ್ಲ ಸಿಂಹಗಳಲ್ಲೂ ಸೋಂಕು ದೃಢವಾಗಿತ್ತು. ಹೀಗಾಗಿ ಮೃಗಾಲಯದ ಸೋಂಕಿತ ಪ್ರಾಣಿಗಳಿಗೆ ರೋಗಲಕ್ಷಣ ಆಧಾರಿತ ಚಿಕಿತ್ಸೆ  ನೀಡಲಾಗುತ್ತಿದೆ. 

ಮೃಗಾಲಯದ ಪಶು ವೈದ್ಯರ ತಂಡವು ತನುವಾಸ್ ನ ತಜ್ಞರ ಸಹಯೋಗದೊಂದಿಗೆ ಸಿಂಹಗಳನ್ನು ಗುಣಪಡಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಸೋಮವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com