ಚೀನಾಗೆ ಜಾಗತಿಕ ಹಿನ್ನಡೆ: ಕೊರೋನಾ ವೈರಸ್ ಮೂಲ ಹುಡುಕುವ ಅಮೆರಿಕದ ನಿರ್ಧಾರಕ್ಕೆ ಭಾರತ ಬೆಂಬಲ

ಚೀನಾಗೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಹಿನ್ನಡೆಯಾಗಿದ್ದು, ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಮೂಲವನ್ನು ಹುಡುಕುವ ಅಮೆರಿಕದ ಪ್ರಯತ್ನಕ್ಕೆ ಭಾರತ ಬೆಂಬಲ ಸೂಚಿಸಿದೆ. 
ಸಾಂದರ್ಭಿಕ ಚಿತ್ರ (ಸಿಜಿಟಿಎನ್ ಚಿತ್ರ)
ಸಾಂದರ್ಭಿಕ ಚಿತ್ರ (ಸಿಜಿಟಿಎನ್ ಚಿತ್ರ)
Updated on

ನವದೆಹಲಿ: ಚೀನಾಗೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಹಿನ್ನಡೆಯಾಗಿದ್ದು, ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಮೂಲವನ್ನು ಹುಡುಕುವ ಅಮೆರಿಕದ ಪ್ರಯತ್ನಕ್ಕೆ ಭಾರತ ಬೆಂಬಲ ಸೂಚಿಸಿದೆ. 

ಜಾಗತಿಕ ಒತ್ತಾಯಕ್ಕೆ ಮಣಿದು ಕೊರೋನಾ ವೈರಸ್ ಮೂಲದ ಕುರಿತು ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ್ದ ಶೋಧ ಕಾರ್ಯದ ಹೊರತಾಗಿಯೂ ಜಾಗತಿಕ ಸಮುದಾಯ ಕೊರೋನಾ ವೈರಸ್ ಮೂಲವನ್ನು ಹುಡುಕುವ ಕಾರ್ಯ ಮುಂದುವರೆಸಿದ್ದು, ನಿನ್ನೆಯಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಕೊರೋನಾ ವೈರಸ್ ಮೂಲದ ಕುರಿತು ಅಮೆರಿಕ ವಿಜ್ಞಾನಿಗಳು ಮತ್ತು ತಜ್ಞರು ನಡೆಸುತ್ತಿರುವ ಶೋಧ ಕಾರ್ಯದ ವೇಗವನ್ನು ದ್ವಿಗುಣಗೊಳಿಸಿ 90 ದಿನಗಳಲ್ಲಿ ಅದರ ವರದಿ ನೀಡುವಂತೆ ತಮ್ಮ ಗುಪ್ತಚರ ಸಂಸ್ಥೆಗಳಿಗೆ ಸೂಚಿಸಿದ್ದರು.

'ಈಗಾಗಲೇ ಅಮೆರಿಕ ತಜ್ಞರು ಮತ್ತು ವಿಜ್ಞಾನಿಗಳು ಕೋವಿಡ್-19 ವೈರಸ್ ನ ಮೂಲದ ಕುರಿತು ತನಿಖೆ ನಡೆಸುತ್ತಿದ್ದು, ಇದರ ಜೊತೆಗೆ ಅಮೆರಿಕ ಗುಪ್ತಚರ ಇಲಾಖೆಗಳ ಕೆಲ ತಂಡಗಳೂ ಕೂಡ ಈ ತನಿಖೆಯ ಮೇಲುಸ್ತುವಾರಿ ನೋಡಿಕೊಳ್ಳಲಿವೆ. ಕೊರೋನಾ ವೈರಸ್ ಮೂಲದ ಕುರಿತು ಒಂದು ನಿಶ್ಚಿತ ತೀರ್ಮಾನಕ್ಕೆ  ಹತ್ತಿರವಾಗಬಲ್ಲ ಮಾಹಿತಿಯನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲುಸ ಗುಪ್ತಚರ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ನಡೆಯುತ್ತಿರುವ ತನಿಖೆಯನ್ನು ಚುರುಕುಗೊಳಿಸಿ 90 ದಿನಗಳಲ್ಲಿ ಈ ಕುರಿತ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಪ್ರಯತ್ನದಲ್ಲಿ ನಮ್ಮ ನ್ಯಾಷನಲ್ ಲ್ಯಾಬ್ಸ್ ಮತ್ತು  ನಮ್ಮ ಸರ್ಕಾರದ ಇತರ ಇಂಟೆಲಿಜೆನ್ಸ್ ಏಜೆನ್ಸಿಗಳು ಪ್ರಯತ್ನಗಳನ್ನು ಹೆಚ್ಚಿಸಲು ಕೆಲಸ ಮಾಡಬೇಕೆಂದು ನಾನು ಕೇಳಿದ್ದೇನೆ. ಈ ವರದಿಯ ಭಾಗವಾಗಿ, ಅಧ್ಯಕ್ಷ ಜೋ ಬೈಡನ್ ಚೀನಾಕ್ಕೆ ನಿರ್ದಿಷ್ಟವಾದ ಪ್ರಶ್ನೆಗಳನ್ನು ಒಳಗೊಂಡಂತೆ ಹೆಚ್ಚಿನ ವಿಚಾರಣೆಯ ಕ್ಷೇತ್ರಗಳನ್ನು ಕೇಳಿದ್ದಾರೆ ಎನ್ನಲಾಗಿದೆ.

ಅಂತೆಯೇ ಪೂರ್ಣ, ಪಾರದರ್ಶಕ, ಸಾಕ್ಷ್ಯ ಆಧಾರಿತ ಅಂತಾರಾಷ್ಟ್ರೀಯ ತನಿಖೆಯಲ್ಲಿ ಭಾಗವಹಿಸಲು ಮತ್ತು ಎಲ್ಲಾ ಸಂಬಂಧಿತ ದತ್ತಾಂಶ ಮತ್ತು ಪುರಾವೆಗಳ ಸಂಗ್ರಹಕ್ಕೆ ಅನುವು ಮಾಡಿಕೊಡುವಂತೆ ಚೀನಾವನ್ನು ಒತ್ತಾಯಿಸಲು ಅಮೆರಿಕ ವಿಶ್ವದಾದ್ಯಂತ ಸಮಾನ ಮನಸ್ಕ ಪಾಲುದಾರ ರಾಷ್ಟ್ರಗಳೊಂದಿಗೆ ಕೆಲಸ  ಮಾಡುತ್ತದೆ ಎಂದು ಬೈಡೆನ್ ಹೇಳಿದ್ದರು.

ಇದೀಗ ಜೋ ಬೈಡನ್ ಅವರ ಈ ನಿರ್ಧಾರಕ್ಕೆ ಭಾರತ ಬೆಂಬಲ ಸೂಚಿಸಿದ್ದು, ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಅವರು, ಕೊರೋನಾ ವೈರಸ್ ಮೂಲದ ಕುರಿತು ವಿಶ್ವ ಆರೋಗ್ಯ ಸಂಸ್ಥೆ ನಡೆಸಿರುವ ಅಧ್ಯಯನ ಮತ್ತು ಅದರ ವರದಿಯ ಮುಂದುವರಿದ   ಅಧ್ಯಯನಗಳ ಅಗತ್ಯತೆ ಇದ್ದು, ಈ ಸಂಬಂಧ ಎಲ್ಲ ದೇಶಗಳ ಸಹಕಾರ ಅತ್ಯಗತ್ಯ. ಕೋವಿಡ್-19 ವೈರಸ್ ನ ಮೂಲದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಅಧ್ಯಯನವನ್ನು ನಡೆಸುವ ಮೂಲಕ ಮಹತ್ವದ ಮೊದಲ ಹೆಜ್ಜೆಯನ್ನಿರಿಸಿದೆ. ಇದರ ಮುಂದಿನ ಹಂತದ ಅಧ್ಯಯನಗಳ ಅಗತ್ಯತೆ ಮತ್ತು ದೃಢವಾದ  ತೀರ್ಮಾನಗಳನ್ನು ತಲುಪಲು ಹೆಚ್ಚಿನ ದತ್ತಾಂಶ ಮತ್ತು ಅಧ್ಯಯನಗಳು ಅಗತ್ಯವಿದೆ ಎಂದು ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com