ಶ್ರೀನಗರ-ಶಾರ್ಜಾ ವಿಮಾನ ಸಂಚಾರಕ್ಕೆ ವಾಯುಮಾರ್ಗ ಬಳಕೆಗೆ ಪಾಕ್ ಅನುಮತಿ ಕೋರಿದ ಭಾರತ ಸರ್ಕಾರ

ಭಾರತದ ಶ್ರೀನಗರ ಮತ್ತು ಯುಎಇ ಶಾರ್ಜಾ ನಗರ ನಡುವೆ ಆರಂಭವಾಗಿರುವ ವಿಮಾನ ಸಂಚಾರಕ್ಕೆ ವಾಯುಮಾರ್ಗ ಬಳಕೆಗೆ ಅನುಮತಿ ನೀಡುವಂತೆ ಪಾಕಿಸ್ತಾನ ಸರ್ಕಾರವನ್ನು ಭಾರತ ಸರ್ಕಾರ ಮನವಿ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದ ಶ್ರೀನಗರ ಮತ್ತು ಯುಎಇ ಶಾರ್ಜಾ ನಗರ ನಡುವೆ ಆರಂಭವಾಗಿರುವ ವಿಮಾನ ಸಂಚಾರಕ್ಕೆ ವಾಯುಮಾರ್ಗ ಬಳಕೆಗೆ ಅನುಮತಿ ನೀಡುವಂತೆ ಪಾಕಿಸ್ತಾನ ಸರ್ಕಾರವನ್ನು ಭಾರತ ಸರ್ಕಾರ ಮನವಿ ಮಾಡಿದೆ.

ಗೋಫಸ್ಟ್ ಏರ್‌ಲೈನ್‌ನ ಶ್ರೀನಗರದಿಂದ ಶಾರ್ಜಾ ವಿಮಾನಯಾನಕ್ಕೆ ಪಾಕಿಸ್ತಾನ ಮಾರ್ಗವಾಗಿ ಕ್ಲಿಯರೆನ್ಸ್ ನೀಡುವಂತೆ, ಭಾರತ ಪಾಕಿಸ್ತಾನಕ್ಕೆ ಮನವಿ ಮಾಡಿದೆ ಎಂದು ಸರ್ಕಾರಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಶ್ರೀನಗರದಿಂದ ಶಾರ್ಜಾಗೆ ಹೋಗಲು ವಿಮಾನವನ್ನು ತನ್ನ ವಾಯುಪ್ರದೇಶದಲ್ಲಿ ಬಳಸಲು ಪಾಕಿಸ್ತಾನ ಅನುಮತಿಸಿಲ್ಲ. ಹಾಗಾಗಿ ಯುಎಇನ ಶಾರ್ಜಾಗೆ ಹೋಗಲು ಅತ್ಯಂತ ದೀರ್ಘ ಮಾರ್ಗದ ಮೂಲಕ ಹೋಗಬೇಕಾಗಿದೆ. ಈ ಹಿಂದೆ ಗೋ ಏರ್ ಎಂದು ಕರೆಯಲ್ಪಡುವ ಗೋ ಫರ್ಸ್ಟ್, ಅಕ್ಟೋಬರ್ 23 ರಿಂದ ಶ್ರೀನಗರ ಮತ್ತು ಶಾರ್ಜಾ ನಡುವೆ ನೇರ ವಿಮಾನಯಾನವನ್ನು ಪ್ರಾರಂಭಿಸಿತ್ತು. ಕಳೆದ ತಿಂಗಳು ಕಣಿವೆಗೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಸೇವೆಯನ್ನು ಉದ್ಘಾಟಿಸಿದರು.

ಅಕ್ಟೋಬರ್ 23, 24, 26 ಮತ್ತು 28 ರಂದು ಶ್ರೀನಗರ-ಶಾರ್ಜಾ ಸೆಕ್ಟರ್‌ನಲ್ಲಿ ಕಾರ್ಯನಿರ್ವಹಿಸಲು ಪಾಕಿಸ್ತಾನದ ಅಧಿಕಾರಿಗಳು ಗೋಫಸ್ಟ್ ವಿಮಾನಗಳಿಗೆ ಓವರ್‌ಫ್ಲೈಟ್ ಕ್ಲಿಯರೆನ್ಸ್ ನೀಡಿದ್ದರು ಎಂದು ಮೂಲವೊಂದು ತಿಳಿಸಿದೆ.

ಗೋ ಏರ್ ಎಂದು ಕರೆಯಲಾಗುತ್ತಿದ್ದ ‘ಗೋ ಫರ್ಸ್ಟ್’ ವಿಮಾನಯಾನ ಸಂಸ್ಥೆಯು ಅಕ್ಟೋಬರ್ 23 ರಿಂದ ಶ್ರೀನಗರ ಮತ್ತು ಶಾರ್ಜಾ ನಡುವೆ ನೇರ ವಿಮಾನಯಾನವನ್ನು ಪ್ರಾರಂಭಿಸಿದೆ. ಕಳೆದ ತಿಂಗಳು ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಸೇವೆಯನ್ನು ಉದ್ಘಾಟಿಸಿದ್ದರು.  ‘ಗೋ ಫರ್ಸ್ಟ್‌’ ವಿಮಾನಯಾನ ಸಂಸ್ಥೆಯ ಶ್ರೀನಗರ-ಶಾರ್ಜಾ ನಡುವಿನ ವಿಮಾನವು ತನ್ನ ವಾಯುಪ್ರದೇಶವನ್ನು ಬಳಸಲು ಪಾಕಿಸ್ತಾನವು ಮಂಗಳವಾರ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಭಾರತ ಈ ಹೆಜ್ಜೆ ಇಟ್ಟಿದೆ. ಯುನೈಟೆಡ್‌ ಅರಬ್‌ ಎಮಿರೆಟ್ಸ್‌’ನಲ್ಲಿನ ಗಮ್ಯ ತಲುಪಲು ಗುಜರಾತ್‌ ಮೂಲಕ ಬಳಸುವ ಮಾರ್ಗವನ್ನು ಆಶ್ರಯಿಸುವಂತೆ ಪಾಕಿಸ್ತಾನವು ‘ಗೋ ಫಸ್ಟ್‌’ ವಿಮಾನಕ್ಕೆ ಮಂಗಳವಾರ ಸೂಚಿಸಿತ್ತು.

ಅಧಿಕಾರಿಗಳ ಮಾಹಿತಿ ಪ್ರಕಾರ, ಅಕ್ಟೋಬರ್ 31 ರವರೆಗೆ ಗೋ ಫರ್ಸ್ಟ್‌ ಸಂಸ್ಥೆಯ ಶ್ರೀನಗರ-ಶಾರ್ಜಾ-ಶ್ರೀನಗರ ಸೇವೆಗೆ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಲಾಗುತ್ತಿತ್ತು ಎನ್ನಲಾಗಿದೆ. ಆದರೆ, ಪಾಕಿಸ್ತಾನವು ತನ್ನ ವಾಯುಮಾರ್ಗ ಬಳಕೆಗೆ ಮಂಗಳವಾರದಿಂದ ಅನುಮತಿ ನಿರಾಕರಿಸುತ್ತಿದೆ. ಹೀಗಾಗಿ ಗುಜರಾತ್‌ ಮೂಲಕ ಶಾರ್ಜಾಕ್ಕೆ ಬಳಸು ಮಾರ್ಗದಲ್ಲಿ ಹೋಗಬೇಕಾಗಿದೆ. ಹೀಗಾಗಿ ವಿಮಾನ ಪ್ರಯಾಣವು 40 ನಿಮಿಷ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ.

ದೀರ್ಘ ಮಾರ್ಗದ ಬಳಕೆಯಿಂದ ಹೆಚ್ಚಿನ ಇಂಧನ ಬಳಕೆಯಾಗುವ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆ ಟಿಕೆಟ್ ದರ ಹೆಚ್ಚಿಸಬೇಕಾದ ಅನಿವಾರ್ಯತೆಗೆ ಸಿಲುಕುತ್ತದೆ. ಅಲ್ಲದೆ, ತಡೆರಹಿತ ಸೇವೆಯಲ್ಲೂ ವ್ಯತ್ಯಯ ಉಂಟಾಗಬಹುದು. ಆದ್ದರಿಂದ, ಈ ಮಾರ್ಗದ ಪ್ರಯಾಣಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ‘ಗೋ ಫರ್ಸ್ಟ್‌’ ವಿಮಾನಕ್ಕೆ ಅನುಮತಿ ನೀಡುವಂತೆ ಭಾರತವು ರಾಜತಾಂತ್ರಿಕ ಮಾರ್ಗಗಳ ಮೂಲಕ ಪಾಕಿಸ್ತಾನಕ್ಕೆ ಮನವಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನಕ್ಕೆ ಅನುಮತಿ ನಿರಾಕರಿಸಿದ್ದಕ್ಕೆ ಪಾಕಿಸ್ತಾನ ಸರ್ಕಾರ ಇನ್ನೂ ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com