ಕೂಲಿ ಕೇಳಿದ್ದಕ್ಕೆ ಕಾರ್ಮಿಕನ ಕೈ ಕತ್ತರಿಸಿದ ಮಾಲೀಕ, ಮಧ್ಯ ಪ್ರದೇಶದಲ್ಲಿ ಮೂವರ ಬಂಧನ

ಕಾರ್ಮಿಕನೊಬ್ಬ ತನ್ನ ಬಾಕಿ ಕೂಲಿಯನ್ನು ಕೇಳಿದ್ದಕ್ಕೆ ಆಕ್ರೋಶಗೊಂಡ ಮಾಲೀಕ ಆತನ ಕೈಯನ್ನೇ ಕತ್ತರಿಸಿ ಹಾಕಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭೋಪಾಲ್: ಕಾರ್ಮಿಕನೊಬ್ಬ ತನ್ನ ಬಾಕಿ ಕೂಲಿಯನ್ನು ಕೇಳಿದ್ದಕ್ಕೆ ಆಕ್ರೋಶಗೊಂಡ ಮಾಲೀಕ ಆತನ ಕೈಯನ್ನೇ ಕತ್ತರಿಸಿ ಹಾಕಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ರೇವಾ ಜಿಲ್ಲಾ ಕೇಂದ್ರದಿಂದ 40 ಕಿ.ಮೀ. ದೂರದಲ್ಲಿರುವ ಸಿರ್ಮೌರ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಡೊಲ್ಮಾವು ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಕಾರ್ಮಿಕನೊಬ್ಬ ತನ್ನ ಬಾಕಿ ಕೂಲಿಯನ್ನು ಕೇಳಿದ್ದಕ್ಕೆ ಮಾಲೀಕರು ಆತನ ಕೈ ಕತ್ತರಿಸಿದ್ದಾರೆ. ಸಂತ್ರಸ್ತ ಕೂಲಿ ಕಾರ್ಮಿಕ ಅಶೋಕ್‌ ಸಾಕೇತ್‌, ಪಾಡ್ರಿ ಗ್ರಾಮದ ನಿವಾಸಿಯಾಗಿದ್ದು ಈ ಮೊದಲು ಡೊಲ್ಮಾವು ಗ್ರಾಮದ ಗಣೇಶ ಮಿಶ್ರಾ ಅವರ ನಿರ್ಮಾಣ ಕೆಲಸದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದರು. ಬಾಕಿ ಕೂಲಿಯ ಸಂಬಂಧ ಸಾಕೇತ್‌ ಮತ್ತು ಮಿಶ್ರಾ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ಮಾತು ವಿಕೋ‍ಪಕ್ಕೆ ತಿರುಗಿ ಮಿಶ್ರಾ ಮತ್ತು ಆತನ ಕಡೆಯವರು ಹರಿತ ಆಯುಧದಿಂದ ಸಾಕೇತ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಮಾಲೀಕ ಮಿಶ್ರಾ ಹರಿತವಾದ ಆಯುಧದಿಂದ ಸಾಕೇತ್‌ ಕೈ ಕತ್ತರಿಸಿದ್ದಾರೆ ಎನ್ನಲಾಗಿದೆ.

ಇನ್ನು ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಘಟನೆ ನಡೆದ ಸ್ವಲ್ಪ ಸಮಯದಲ್ಲೇ ಗಾಯಗೊಂಡ ಕಾರ್ಮಿಕನನ್ನು ಪೊಲೀಸರು ಸಂಜಯ ಗಾಂಧಿ ಸ್ಮಾರಕ ಆಸ್ಪತ್ರೆಗೆ ರವಾನಿಸಿದರು. ಅಲ್ಲಿ ವೈದ್ಯರ ತಂಡವೊಂದು ಶಸ್ತ್ರಚಿಕಿತ್ಸೆಯ ಮೂಲಕ ಕಾರ್ಮಿಕನಿಗೆ ಕೈಯನ್ನು ಮರುಜೋಡಿಸಿದ್ದಾರೆ. ಬಹಳ ರಕ್ತ ಹೋಗಿದ್ದರಿಂದ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ ಎಂದು ಸಹಾಯಕ ಪೊಲೀಸ್‌ ಅಧೀಕ್ಷಕ ಶಿವಕುಮಾರ್‌ ವರ್ಮಾ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com