ಭಾರತೀಯ ಸೇನೆಯ ಉನ್ನತ ಕಮಾಂಡರ್ ಗಳಿಂದ ದೇಶದ ಭದ್ರತಾ ಸವಾಲುಗಳ ಪರಿಶೀಲನೆ

ಹಿರಿಯ ಕಮಾಂಡರ್ ಗಳನ್ನು ಒಳಗೊಂಡ 4 ದಿನಗಳ ಈ ಸಭೆ ಸೋಮವಾರ ಅಕ್ಟೋಬರ್ 25ರಂದು ಶುರುವಾಗಲಿದೆ. ಸಭೆಯಲ್ಲಿ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಕೂಡಾ ಪಾಲ್ಗೊಳ್ಳಲಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದ ಭದ್ರತಾ ಸವಾಲುಗಳ ಕುರಿತು ಭಾರತೀಯ ಸೇನೆಯ ಉನ್ನತ ಮಟ್ಟದ ಕಮಾಂಡರ್ ಗಳು ಸಭೆ ನಡೆಸಿ ಕೂಲಂಕಷವಾಗಿ ಪರಿಶೀಲನೆ ನಡೆಸಲಿದ್ದಾರೆ. ಪೂರ್ವ ಲಡಾಖ್ ಸೇರಿದಂತೆ ಚೀನಾದ ಗಡಿಯಲ್ಲಿನ ಎಲ್ ಎ ಸಿ ಪ್ರದೇಶವನ್ನೂ ಒಳಗೊಂಡಂತೆ ಕಮಾಂಡರ್ ಗಳು ಪರಿಶೀಲನೆ ಕೈಗೊಳ್ಳಲಿದ್ದಾರೆ.

ಹಿರಿಯ ಕಮಾಂಡರ್ ಗಳನ್ನು ಒಳಗೊಂಡ 4 ದಿನಗಳ ಈ ಸಭೆ ಸೋಮವಾರ ಅಕ್ಟೋಬರ್ 25ರಂದು ಶುರುವಾಗಲಿದೆ. ಸಭೆಯಲ್ಲಿ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಕೂಡಾ ಪಾಲ್ಗೊಳ್ಳಲಿದ್ದಾರೆ. 

ಚೀನಾದೊಂದಿಗೆ 17 ತಿಂಗಳುಗಳ ಕಾಲ ಸಂಘರ್ಷ ಏರ್ಪಟ್ಟ ಪೂರ್ವ ಲಡಾಖ್ ಭಾಗದಲ್ಲಿ ಸೇನೆಯನ್ನು ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಕಾಯ್ದುಕೊಳ್ಳುವುದು ಸೇರಿದಂತೆ ಹಲವು ವಿಚಾರಗಲ ಕುರಿತು ಸಭೆಯಲ್ಲಿ ಮಾತುಕತೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com