ಚತ್ತೀಸ್ ಗಢ: ಸುಣ್ಣದ ಗಣಿ ಕುಸಿದು 7 ಸಾವು

ಚತ್ತೀಸ್ ಗಢದಲ್ಲಿ ಸುಣ್ಣದ ಗಣಿ ಕುಸಿದು 7 ಮಂದಿ ಸಾವನ್ನಪ್ಪಿದ್ದಾರೆ. ಬಸ್ತಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಾವನ್ನಪ್ಪಿದವರ ಪೈಕಿ 6 ಮಂದಿ ಮಹಿಳೆಯರಾಗಿದ್ದಾರೆ.
ಚತ್ತೀಸ್ ಗಢ: ಸುಣ್ಣದ ಗಣಿ ಕುಸಿದು 7 ಸಾವು
ಚತ್ತೀಸ್ ಗಢ: ಸುಣ್ಣದ ಗಣಿ ಕುಸಿದು 7 ಸಾವು
Updated on: 

ಜಗ್ದಲ್ಪುರ: ಚತ್ತೀಸ್ ಗಢದಲ್ಲಿ ಸುಣ್ಣದ ಗಣಿ ಕುಸಿದು 7 ಮಂದಿ ಸಾವನ್ನಪ್ಪಿದ್ದಾರೆ. ಬಸ್ತಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಾವನ್ನಪ್ಪಿದವರ ಪೈಕಿ 6 ಮಂದಿ ಮಹಿಳೆಯರಾಗಿದ್ದಾರೆ.
 
ಮಾಲ್ಗಾಂವ್ ಗ್ರಾಮದಲ್ಲಿ ಈ ಅನಾಹುತ ನಡೆದಿದ್ದು, ಸಂತ್ರಸ್ತರು ಗಣಿಯಲ್ಲಿ ಮಣ್ಣು ಅಗೆಯುತ್ತಿದ್ದರು. ಈ ವೇಳೆ ಮಣ್ಣು ಕುಸಿತವಾಗಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.
 
ಈ ಘಟನೆಯ ಬಗ್ಗೆ ಸುದ್ದಿ ತಿಳಿಸುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳು ಧಾವಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಘಟನಾ ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
 
ಪ್ರಾಥಮಿಕ ವರದಿಗಳ ಪ್ರಕಾರ, 7 ಮಂದಿ ಕಾರ್ಮಿಕರು ಮಣ್ಣು ಅಗೆಯುತ್ತಿದ್ದರು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com