ತಾನೂ ಮದ್ಯಸೇವಿಸಿ, ರೋಗಿಗೂ ಮದಿರೆಯ ಮತ್ತೇರಿಸಿದ ಆಂಬುಲೆನ್ಸ್ ಚಾಲಕ

ಆಂಬುಲೆನ್ಸ್ ಚಾಲಕನೋರ್ವ ತಾನೂ ಮದ್ಯ ಸೇವನೆ ಮಾಡಿ, ರೋಗಿಗೂ ಮದಿರೆಯ ಮತ್ತೇರಿಸಿದ ಘಟನೆ ಒಡಿಶಾದ ಕಟಕ್ ನಲ್ಲಿ ವರದಿಯಾಗಿದೆ.
ಆಂಬುಲೆನ್ಸ್
ಆಂಬುಲೆನ್ಸ್

ಭುವನೇಶ್ವರ್: ಆಂಬುಲೆನ್ಸ್ ಚಾಲಕನೋರ್ವ ತಾನೂ ಮದ್ಯ ಸೇವನೆ ಮಾಡಿ, ರೋಗಿಗೂ ಮದಿರೆಯ ಮತ್ತೇರಿಸಿದ ಘಟನೆ ಒಡಿಶಾದ ಕಟಕ್ ನಲ್ಲಿ ವರದಿಯಾಗಿದೆ. ಟಿರ್ಟೋಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ. 

ವ್ಯಕ್ತಿಯೋರ್ವನಿಗೆ ಕಾಲು ಮುರಿದು ಆತನಿಗೆ ಚಿಕಿತ್ಸೆ ಕೊಡಿಸಲು ಪರದೀಪ್ ನಿಂದ ಖಾಸಗಿ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯುವಾಗ  ಆಂಬುಲೆನ್ಸ್ ಚಾಲಕ ತಾನೂ ಮದ್ಯ ಸೇವನೆ ಮಾಡಿದ್ದಾನೆ, ಜೊತೆಗೆ ರೋಗಿಗೂ ಮದ್ಯ ಕುಡಿಸಿದ್ದಾನೆ. ವಿಚಾರಣೆ ವೇಳೆ ಈ ಮಾಹಿತಿಯನ್ನು ಸ್ವತಃ ಚಾಲಕ ಒಪ್ಪಿಕೊಂಡಿದ್ದಾನೆ. 

ಹೆದ್ದಾರಿಯ ನಿರ್ಜನ ಪ್ರದೇಶದಲ್ಲಿ ರೋಗಿ ಒಂದು ಪೆಗ್ ನೀಡುವಂತೆ ಕೇಳಿಕೊಂಡ, ಆದ್ದರಿಂದ ಅವನಿಗೆ ನೀಡಿದೆ, ಜೊತೆಗೆ ನಾನೂ ಕುಡಿದೆ ಎಂದು ಚಾಲಕ ಹೇಳಿಕೆ ನೀಡಿದ್ದಾನೆ. ಆಂಬುಲೆನ್ಸ್ ನಲ್ಲಿ ಮಗು ಮತ್ತು ಮಹಿಳೆಯೂ ಇದ್ದರು. 

ಆಂಬುಲೆನ್ಸ್ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಪ್ರತ್ಯೇಕ ತಂಡವೊಂದನ್ನು ನೇಮಕ ಮಾಡಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ನಿರ್ಮಲ್ ಕುಮಾರ್ ಮೊಹಂತಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com