ಭಾರತ್ ಜೋಡೋ ಯಾತ್ರೆ 2024ರ ಲೋಕಸಭಾ ಚುನಾವಣೆಯ ಗೆಲುವಿನ ಹಾದಿಯನ್ನು ಸುಗಮಗೊಳಿಸುತ್ತದೆ: ಕೆ.ಸಿ. ವೇಣುಗೋಪಾಲ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ ಯಾತ್ರೆ’ಯು, 2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ದಾರಿ ಮಾಡಿಕೊಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸುವ ಮೂಲಕ ಇನ್ನಷ್ಟು ಜನಾಂದೋಲನಗಳು ನಡೆಯಲಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಶನಿವಾರ ಹೇಳಿದ್ದಾರೆ.
ಕೆಸಿ ವೇಣುಗೋಪಾಲ್
ಕೆಸಿ ವೇಣುಗೋಪಾಲ್
Updated on: 

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ ಯಾತ್ರೆ’ಯು, 2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ದಾರಿ ಮಾಡಿಕೊಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸುವ ಮೂಲಕ ಇನ್ನಷ್ಟು ಜನಾಂದೋಲನಗಳು ನಡೆಯಲಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಶನಿವಾರ ಹೇಳಿದ್ದಾರೆ.

ಯಾತ್ರೆಯು ದೆಹಲಿ ತಲುಪಿರುವ ಹಿನ್ನೆಲೆಯಲ್ಲಿಯೇ, ವೇಣುಗೋಪಾಲ್ ಸಣ್ಣ ಸಂವಾದದಲ್ಲಿ ಮಾತನಾಡಿ, ಇಂತಹ ಹೆಚ್ಚಿನ ಚಳುವಳಿಗಳನ್ನು ಅನುಸರಿಸಲಾಗುವುದು ಎಂದರು. ಇದು ಪಶ್ಚಿಮದಿಂದ ಪೂರ್ವಕ್ಕೆ ಪ್ರಾರಂಭವಾಗಲಿದೆಯೇ ಎಂದು ಕೇಳಿದಾಗ, ಈ ನಿಟ್ಟಿನಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಆದಾಗ್ಯೂ, ಹೆಚ್ಚಿನ ಯಾತ್ರೆಗಳನ್ನು ನಿರೀಕ್ಷಿಸಬಹುದು ಎಂದು ಹೇಳಿದರು.

ಭಾರತ್ ಜೋಡೋ ಯಾತ್ರೆಯನ್ನು ಅನುಸರಿಸಿ ಇನ್ನಷ್ಟು ಚಳುವಳಿಗಳು ನಡೆಯಲಿವೆ ಎಂದ ಅವರು, ಯಾತ್ರೆ ಈಗಾಗಲೇ ಯಶಸ್ವಿಯಾಗಿದೆ ಎಂದರು. ಯಾತ್ರೆಯಲ್ಲಿ ನೆರೆದಿದ್ದ ಜನಸ್ತೋಮವನ್ನು ಮತಗಳಾಗಿ ಪರಿವರ್ತಿಸುವ ಸಾಧ್ಯತೆಯ ಬಗ್ಗೆ, ಈ ನಿಟ್ಟಿನಲ್ಲಿ ಪಕ್ಷವು ಯಾವುದೇ ನಿರ್ದಿಷ್ಟ ಲೆಕ್ಕಾಚಾರಗಳನ್ನು ಮಾಡಿಲ್ಲ ಎಂದು ಹೇಳಿದರು.

ಭಾರತ್ ಜೋಡೋ ಯಾತ್ರೆಯು ಪಕ್ಷದೊಳಗೆ ಕೆಳಗಿನಿಂದ ಮೇಲಿನವರೆಗೂ ವಿದ್ಯುತ್ ಸಂಚರಿಸಿದ ಅನುಭವವನ್ನು ಸೃಷ್ಟಿಸಿದೆ ಮತ್ತು ಇದು 2024ರ ಚುನಾವಣಾ ತಂತ್ರಕ್ಕೆ ಉತ್ತಮವಾಗಿದೆ ಎಂದು ಅವರು ಹೇಳಿದರು.

ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 68 ಸ್ಥಾನಗಳ ಪೈಕಿ 40 ಕ್ಷೇತ್ರಗಳಲ್ಲಿ ಹೆಲ್ಲುವ ಮೂಲಕ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಿತು. ಇದು ಪಕ್ಷದ ಕಾರ್ಯಕರ್ತರ 'ಚೈತನ್ಯದಾಯಕ ಸಾಮರ್ಥ್ಯದ' ಫಲಿತಾಂಶವಾಗಿದೆ ಮತ್ತು ಇದನ್ನು ನಿರೀಕ್ಷಿಸಲಾಗಿತ್ತು ಎಂದರು.

ಕೋವಿಡ್ ದೃಷ್ಟಿಯಿಂದ ಬಾರತ್ ಜೋಡೋ ಯಾತ್ರೆಯಲ್ಲಿ ಕೋವಿಡ್ ಮಾನದಂಡಗಳನ್ನು ಅನುಸರಿಸಿ ಅಥವಾ ಯಾತ್ರೆಯನ್ನು ಮೊಟಕುಗೊಳಿಸಿ ಎಂಬ ಕೇಂದ್ರ ಸರ್ಕಾರದ ಒತ್ತಡದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಏನಾದರೂ ವೈಜ್ಞಾನಿಕ ಬೆಂಬಲವಿದ್ದರೆ ನಾವು ಅವರ ಮಾತನ್ನು ಕೇಳುತ್ತೇವೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com