ಚೀನಾದಿಂದ ಕೊಯಮತ್ತೂರಿಗೆ ವಾಪಸ್ಸಾದ ಸೇಲಂ ಉದ್ಯಮಿಗೆ ಕೋವಿಡ್ ಪಾಸಿಟಿವ್

ಚೀನಾದಿಂದ ಸಿಂಗಾಪುರದ ಮೂಲಕ ಇಲ್ಲಿಗೆ ಆಗಮಿಸಿದ ಸೇಲಂ ಹತ್ತಿರದ ಉದ್ಯಮಿಯೊಬ್ಬರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on: 

ಕೊಯಮತ್ತೂರು: ಚೀನಾದಿಂದ ಸಿಂಗಾಪುರದ ಮೂಲಕ ಇಲ್ಲಿಗೆ ಆಗಮಿಸಿದ ಸೇಲಂ ಹತ್ತಿರದ ಉದ್ಯಮಿಯೊಬ್ಬರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.

ಬುಧವಾರ ಸಂಪರ್ಕ ವಿಮಾನದ ಮೂಲಕ ನಗರಕ್ಕೆ ಆಗಮಿಸಿದ 37 ವರ್ಷದ ವ್ಯಕ್ತಿಗೆ ವಿಮಾನ ನಿಲ್ದಾಣದಲ್ಲಿ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದೆ ಎಂದು ಮೂಲಗಳು ತಿಳಿಸಿವೆ.

ಸೇಲಂ ಬಳಿಯ ಇಳಂಪಿಲ್ಲೈ ಮೂಲದ ಜವಳಿ ಉದ್ಯಮಿ, ಲಕ್ಷಣರಹಿತ ಮತ್ತು ಆರೋಗ್ಯ ಅಧಿಕಾರಿಗಳ ಕಣ್ಗಾವಲಿನಲ್ಲಿದ್ದಾರೆ ಮತ್ತು ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಹೇಳಿದರು.

ಸೇಲಂನ ಉದ್ಯಮಿ ಕೋವಿಡ್‌ ಪಾಸಿಟಿವ್ ಆದ ರಾಜ್ಯದ ಐದನೇ ವ್ಯಕ್ತಿಯಾಗಿದ್ದಾರೆ. ಇದಕ್ಕೂ ಮೊದಲು, ದುಬೈ ಮತ್ತು ಕಾಂಬೋಡಿಯಾದಿಂದ ಬುಧವಾರ ಚೆನ್ನೈಗೆ ಹಿಂದಿರುಗಿದ ಇಬ್ಬರು ಪ್ರಯಾಣಿಕರು ಮತ್ತು ಚೀನಾದಿಂದ ಕೊಲಂಬೊ ಮೂಲಕ ಮಧುರೈಗೆ ಬಂದ ಮಹಿಳೆ ಮತ್ತು ಅವರ ಆರು ವರ್ಷದ ಮಗಳಿಗೆ ಕೋವಿಡ್ ಪಾಸಿಟಿವ್ ಆಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com