ಗುಜರಾತ್: ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ಮಹಿಳೆ ಸಾವು!

ಗುಜರಾತ್‌ನ ಆನಂದ್ ರೈಲು ನಿಲ್ದಾಣದ ಬಳಿ ಮುಂಬೈಗೆ ತೆರಳುತ್ತಿದ್ದ ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ 54 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ವಂದೇ ಎಕ್ಸ್ ಪ್ರೆಸ್ ರೈಲು
ವಂದೇ ಎಕ್ಸ್ ಪ್ರೆಸ್ ರೈಲು

ಆನಂದ್: ಗುಜರಾತ್‌ನ ಆನಂದ್ ರೈಲು ನಿಲ್ದಾಣದ ಬಳಿ ಮುಂಬೈಗೆ ತೆರಳುತ್ತಿದ್ದ ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ 54 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಮೃತ ಮಹಿಳೆಯನ್ನು ಬೀಟ್ರಿಸ್ ಆರ್ಚಿಬಾಲ್ಡ್ ಪೀಟರ್ ಎಂದು ಗುರುತಿಸಲಾಗಿದೆ. ಸಂಜೆ 4.37ರ ಸುಮಾರಿಗೆ ಅಪಘಾತ ಸಂಭವಿಸಿದಾಗ ಹಳಿ ದಾಟುತ್ತಿದ್ದರು ಎಂದು ಇಲ್ಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಹಮದಾಬಾದ್‌ನ ನಿವಾಸಿಯಾದ ಪೀಟರ್, ಆನಂದ್‌ನಲ್ಲಿರುವ ಸಂಬಂಧಿಕರನ್ನು ಭೇಟಿಯಾಗಲು ಬಂದಿದ್ದರು. ರೈಲು ಗಾಂಧಿನಗರ ರಾಜಧಾನಿ ನಿಲ್ದಾಣದಿಂದ ಮುಂಬೈ ಸೆಂಟ್ರಲ್‌ಗೆ ತೆರಳುತ್ತಿತ್ತು. ಆನಂದ್‌ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ನಿಲುಗಡೆ ಇರಲಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 30ರಂದು ರೈಲಿನ ಉದ್ಘಾಟನಾ ಸಂಚಾರಕ್ಕೆ ಚಾಲನೆ ನೀಡಿದ್ದರು. ಕಳೆದ ಒಂದು ತಿಂಗಳಲ್ಲಿ ರೈಲಿಗೆ ಸಿಲುಕಿ ದನಕರುಗಳು ಸಾವನ್ನಪ್ಪಿದ ಘಟನೆಗಳು ಮೂರು ಬಾರಿ ನಡೆದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com