ದೇಶ

ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಕೈ ಪಂಪ್‌ನಲ್ಲಿ ಬರ್ತಿದೆ ಮದ್ಯ, ದಂಗಾದ ಪೊಲೀಸರು!

ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಕೈ ಪಂಪ್‌ನಲ್ಲಿ ಬರ್ತಿದೆ ಮದ್ಯ, ದಂಗಾದ ಪೊಲೀಸರು!
ಸಂಗ್ರಹ ಚಿತ್ರ
Published On :

ಗುನಾ(ಮಧ್ಯಪ್ರದೇಶ): ಸಾಮಾನ್ಯವಾಗಿ ಕೈ ಪಂಪ್‌ಗಳನ್ನು ಭೂಮಿ ಆಳದಿಂದ ನೀರನ್ನು ಮೇಲಕ್ಕೆತ್ತಲು ಬಳಸಲಾಗುತ್ತದೆ. ಆದರೆ ಮಧ್ಯಪ್ರದೇಶದ ಗುನಾ ಜಿಲ್ಲೆಯ ಭಾನ್‌ಪುರ ಗ್ರಾಮದಲ್ಲಿ ಕೈ ಪಂಪ್ ನಲ್ಲಿ ಮದ್ಯ ಬರುತ್ತಿತ್ತು. ಇದನ್ನು ಕಂಡು ಪೊಲೀಸರೇ ದಂಗಾಗಿದ್ದರು.

ಅಕ್ರಮ ಮದ್ಯದ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದಾಗ ಈ ವಿಷಯ ಬಯಲಿಗೆ ಬಂದಿದೆ. ಪೊಲೀಸರು ಕಳೆದ ಸೋಮವಾರ ಗ್ರಾಮದ ಮೇಲೆ ದಾಳಿ ನಡೆಸಿದರು. ಈ ವೇಳೆ ಭೂಮಿಯೊಳಗೆ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಮೇವಿನ ಅಡಿಯಲ್ಲಿ ಅಡಗಿಸಿಟ್ಟಿದ್ದ ಕಚ್ಚಾ ಮದ್ಯದಿಂದ ತುಂಬಿದ ಒಟ್ಟು ಎಂಟು ಡ್ರಮ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಭೂಮಿಯೊಳಗೆ ಅಡಗಿಸಿಟ್ಟಿದ್ದ ಕಚ್ಚಾ ಮದ್ಯದ ಡ್ರಮ್‌ಗಳಿಗೆ ಜೋಡಿಸಲಾದ ಕೈ ಪಂಪ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಸಿಬ್ಬಂದಿ ಕೈ ಪಂಪ್ ಮಾಡಿದಾಗ ಅಲ್ಲಿ ಮದ್ಯ ಹೊರಬರಲು ಪ್ರಾರಂಭಿಸಿತು ಎಂದು ಗುಣಾ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಶ್ರೀವಾಸ್ತವ ಹೇಳಿದರು.

ಜಮೀನುಗಳಲ್ಲಿನ ಮೇವಿನ ಅವಶೇಷಗಳಡಿಯಲ್ಲಿ ಬಚ್ಚಿಟ್ಟಿದ್ದ ಡ್ರಮ್‌ಗಳಲ್ಲಿ ಸಂಗ್ರಹಿಸಲಾಗಿದ್ದ ಅಪಾರ ಪ್ರಮಾಣದ ದೇಶೀ ನಿರ್ಮಿತ ಮದ್ಯವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮುಖ್ಯವಾಗಿ, ಅಕ್ರಮ ಮದ್ಯದ ವ್ಯಾಪಾರದಲ್ಲಿ ವ್ಯವಹರಿಸುವ ಜನರು ಮದ್ಯ ತುಂಬಿದ ಡ್ರಮ್‌ಗಳನ್ನು ಮರೆಮಾಡಲು ಭೂಗತ ಹೊಂಡಗಳನ್ನು ಅಗೆದಿದ್ದರು. ಈ ಡ್ರಮ್‌ಗಳಿಂದ ಮದ್ಯವನ್ನು ಹೊರ ತೆಗೆಯಲು ಹ್ಯಾಂಡ್ ಪಂಪ್ ಅನ್ನು ಬಳಸುತ್ತಿದ್ದರು. ನಂತರ ಅದನ್ನು ಪೌಚ್‌ಗಳು ಮತ್ತು ಐದು ಲೀಟರ್ ಕ್ಯಾನ್‌ಗಳಲ್ಲಿ ತುಂಬಿಸಿಕೊಳ್ಳುತ್ತಿದ್ದರು ಎಂದು ಶ್ರೀವಾಸ್ತವ ಹೇಳಿದರು.

ಈ ಸಂಬಂಧ ಎಂಟು ಜನರನ್ನು ಗುರುತಿಸಿದ್ದು ಅವರನ್ನು ಹಿಡಿಯಲು ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.