ದೆಹಲಿಯ ಬದ್ಲಿಯಲ್ಲಿ ಹಳಿ ದಾಟಲು ಯತ್ನಿಸುವಾಗ ರೈಲಿಗೆ ಸಿಲುಕಿ ಮೂವರು ಕಾರ್ಮಿಕರು ಸಾವು

ವಾಯುವ್ಯ ದೆಹಲಿಯ ಬದ್ಲಿ ಪ್ರದೇಶದಲ್ಲಿ ರೈಲಿಗೆ ಸಿಲುಕಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on: 

ನವದೆಹಲಿ: ವಾಯುವ್ಯ ದೆಹಲಿಯ ಬದ್ಲಿ ಪ್ರದೇಶದಲ್ಲಿ ರೈಲಿಗೆ ಸಿಲುಕಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಬಡ್ಲಿ ಯಾರ್ಡ್ ಮತ್ತು ಹೊಳಂಬಿ ನಡುವಿನ ಕೆ.ಎಂ.ಪೋಲ್ ನಂ 13/25 ರ ಬಳಿ ಸೋಮವಾರ ಈ ಅಪಘಾತ ಸಂಭವಿಸಿದ್ದು, ಸಂಜೆ 5.35 ರ ಸುಮಾರಿಗೆ ಈ ಬಗ್ಗೆ ಮಾಹಿತಿ ಬಂದಿದೆ ಎಂದು ಹೇಳಿದರು.

ಮೃತರನ್ನು 19 ರಿಂದ 21 ವರ್ಷ ವಯಸ್ಸಿನವರಾದ ಮೊಹಮ್ಮದ್ ಹಫೀಜ್, ಮೊಹಮ್ಮದ್ ಮತ್ತು ರಿಯಾಜುಲ್ ಎಂದು ಗುರುತಿಸಲಾಗಿದೆ. ಮೂವರೂ ಬದ್ಲಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಸಿರಸ್ಪುರ ಗ್ರಾಮದ ರಾಣಾ ಪಾರ್ಕ್‌ನಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಈ ಮೂವರೊಂದಿಗೆ ಕೆಲಸ ಮಾಡುತ್ತಿದ್ದ ಮತ್ತು ವಾಸಿಸುತ್ತಿದ್ದ ಮತ್ತೋರ್ವ ಮೊಹಮ್ಮದ್ ಎಹ್ಸಾನ್ ಸೇರಿ ನಾಲ್ವರು ಹತ್ತಿರದ ಉದ್ಯಾನವನಕ್ಕೆ ಹೋಗಿ ತಮ್ಮ ನಿವಾಸಕ್ಕೆ ಹಿಂತಿರುಗುತ್ತಿದ್ದರು. ಈವೇಳೆ ಎರಡು ಮಾರ್ಗಗಳಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಎರಡು ರೈಲುಗಳ ನಡುವೆ ನಾಲ್ವರು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ವೇಳೆ ಮೂವರು ಹಳಿಗಳನ್ನು ದಾಟಲು ಯತ್ನಿಸಲು ಹೋಗಿ ರೈಲಿಗೆ ಸಿಲುಕಿದ್ದಾರೆ. ಆದರೆ, ಎರಡು ರೈಲುಗಳ ನಡುವೆ ಕುಳಿತು ಎಹ್ಸಾನ್ ಜೀವ ಉಳಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಮೃತದೇಹಗಳನ್ನು ಸಬ್ಜಿ ಮಂಡಿ ಶವಾಗಾರಕ್ಕೆ ರವಾನಿಸಲಾಗಿದ್ದು, ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೇ ಅಕ್ರಮ ನಡೆದಿಲ್ಲ ಎಂದು ಪೊಲೀಸರು ಶಂಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com