ಜಾಹೀರಾತಿನಲ್ಲಿ ಪ್ರಧಾನಿ ಮೋದಿಗೆ ಅವಮಾನ?: ಟ್ವಿಟರ್ ನಲ್ಲಿ ಟ್ರೆಂಡ್ ಆದ 'ಬಾಯ್ಕಾಟ್ ಕ್ಯಾಡ್​​ಬರಿ'

ಜಾಹೀರಾತೊಂದರಲ್ಲಿ ಪ್ರಧಾನಿ ಮೋದಿಗೆ ಅವಮಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಇದೀಗ ಟ್ವಿಟರ್ ನಲ್ಲಿ ಬಾಯ್ಕಾಟ್ ಕ್ಯಾಡ್​​ಬರಿ ಟ್ರೆಂಡ್ ಆಗಿದೆ.
ಕ್ಯಾಡ್​​ಬರಿ ಜಾಹೀರಾತು
ಕ್ಯಾಡ್​​ಬರಿ ಜಾಹೀರಾತು
Updated on: 

ಬೆಂಗಳೂರು: ಜಾಹೀರಾತೊಂದರಲ್ಲಿ ಪ್ರಧಾನಿ ಮೋದಿಗೆ ಅವಮಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಇದೀಗ ಟ್ವಿಟರ್ ನಲ್ಲಿ ಬಾಯ್ಕಾಟ್ ಕ್ಯಾಡ್​​ಬರಿ ಟ್ರೆಂಡ್ ಆಗಿದೆ. 

ಕ್ಯಾಡ್‌ಬರಿ ದೀಪಾವಳಿಗೆ ತನ್ನ ಉತ್ಪನ್ನ ಉತ್ತೇಜಿಸುವ ಟಿವಿ ಜಾಹೀರಾತೊಂದನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ ದಾಮೋದರ ಎಂಬ ದೀಪದ ವ್ಯಾಪಾರಿಯನ್ನು ತೋರಿಸಲಾಗಿದೆ. ಈ ವಿಡಿಯೊವನ್ನು ವಿಶ್ವ ಹಿಂದು ಪರಿಷತ್‌ನ ಸಾಧ್ವಿ ಪ್ರಾಚಿ ಶೇರ್‌ ಮಾಡಿದ್ದು, ಜಾಹೀರಾತಿನಲ್ಲಿ ತೋರಿಸಿರುವ ಬಡ, ದೀಪದ ಮಾರಾಟಗಾರನ ಹೆಸರನ್ನು 'ದಾಮೋದರ್' ಎಂಬುದಾಗಿ ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

‘ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಹೆಸರನ್ನು ಹೊಂದಿರುವ ಯಾರನ್ನಾದರೂ ಬಡವನೆಂದು ತೋರಿಸಲು ಈ ಜಾಹೀರಾತು ಮಾಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

‘ಚಾಯ್‌ವಾಲೆ ಕೆ ಬಾಪ್ ದಿಯೇವಾಲಾ’ ಎಂದು ಸಾಧ್ವಿ ಪ್ರಾಚಿ ಟ್ವೀಟ್ ಮಾಡಿದ್ದು, ಜಾಹೀರಾತು ನೋಡಿದ ಹಲವರು ಇದೀಗ ಕ್ಯಾಡ್‌ಬರಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಆಗ್ರಹಿಸುತ್ತಿದ್ದಾರೆ.

2021ರಲ್ಲಿಯೂ ಇದೇ ರೀತಿ ಬಹಿಷ್ಕಾರದ ಪೋಸ್ಟ್‌ ಟ್ರೆಂಡ್‌ ಆಗಿತ್ತು. ಕ್ಯಾಡ್‌ಬರಿ ಆಸ್ಟ್ರೆಲಿಯಾದ ವೆಬ್‌ನಲ್ಲಿ ನೀಡಿರುವ ವಿವರಣೆಯನ್ನು ಬಳಸಿಕೊಂಡು ಭಾರತದಲ್ಲಿ ಟ್ರೆಂಡ್‌ ಮಾಡಲಾಗಿತ್ತು. ಆದರೆ, ಹಸಿರು ಚುಕ್ಕಿಯೊಂದಿಗೆ ಕಾಣಿಸಿಕೊಳ್ಳುವ ಕ್ಯಾಡ್‌ಬರಿ ಭಾರತದ ಉತ್ಪನ್ನ ಶೇ.100ರಷ್ಟು ಶಾಕಾಹಾರಿ ಎಂದು ಕಂಪನಿ ಸ್ಪಷ್ಟೀಕರಣ ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com