ಸಮುದ್ರದ ನಡುವೆ ತೇಲುವ ನಗರ: ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ 'ಐಎನ್ಎಸ್ ವಿಕ್ರಾಂತ್' ವಿಶೇಷತೆಗಳು

ಐಎನ್ಎಸ್ ವಿಕ್ರಾಂತ್.. ಇದು ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಎಂಬ ಹೆಗ್ಗಳಿಕಿಗೆ ಪಾತ್ರವಾಗಿದ್ದು, ಅಕ್ಷರಶಃ ಇದೊಂದು ತೇಲುವ ನಗರವಾಗಿದೆ.
ಐಎನ್ಎಸ್ ವಿಕ್ರಾಂತ್
ಐಎನ್ಎಸ್ ವಿಕ್ರಾಂತ್

ಕೊಚ್ಚಿ: ಐಎನ್ಎಸ್ ವಿಕ್ರಾಂತ್.. ಇದು ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಎಂಬ ಹೆಗ್ಗಳಿಕಿಗೆ ಪಾತ್ರವಾಗಿದ್ದು, ಅಕ್ಷರಶಃ ಇದೊಂದು ತೇಲುವ ನಗರವಾಗಿದೆ.

ಒಮ್ಮೆ ಈ ಐಎನ್ಎಸ್ ವಿಕ್ರಾಂತ್ ಕಾರ್ಯಾರಂಭಗೊಂಡರೆ, ಇದು ಭಾರತದ ಕಡಲ ರಕ್ಷಣೆಯ ಆಧಾರಸ್ತಂಭವಾಗಲಿದೆ. ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ನಿಜಕ್ಕೂ ಭಾರತೀಯ ನೌಕಾಪಡೆ ಪಾಲಿಗೆ ಗೇಮ್ ಚೇಂಜರ್ ಎಂದೇ ಹೇಳಬಹುದು. ಅದರ ಸೇರ್ಪಡೆಗೆ ಹತ್ತು ದಿನಗಳ ಮುಂಚಿತವಾಗಿ, ಭಾರತೀಯ ನೌಕಾಪಡೆ ಮತ್ತು ಕೊಚ್ಚಿನ್ ಶಿಪ್‌ಯಾರ್ಡ್ TNIE ಗೆ ವಿಮಾನವಾಹಕ ನೌಕೆಯಲ್ಲಿನ ಸೌಲಭ್ಯಗಳು ಮತ್ತು ಅದ್ಭುತ ತಂತ್ರಜ್ಞಾನಗಳನ್ನು ಅನುಭವಿಸುವ ಅವಕಾಶವನ್ನು ಒದಗಿಸಿದೆ. ನೌಕೆಯಲ್ಲಿನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸೌಲಭ್ಯಗಳ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ.

"ಸ್ಥಳೀಯ ವಿಮಾನವಾಹಕ ನೌಕೆಯು ಸಮುದ್ರದಲ್ಲಿ ಏರ್‌ಫೀಲ್ಡ್ ಅನ್ನು ಒದಗಿಸುತ್ತದೆ.. ಇದು ನೈಸರ್ಗಿಕ ಅಡೆತಡೆಗಳನ್ನು ಮೀರಿ ನಮ್ಮ ವಾಯು ಶಕ್ತಿಯನ್ನು ವಿಸ್ತರಿಸಲು ಅನುಕೂಲವಾಗುತ್ತದೆ" ಎಂದು ಲೆಫ್ಟಿನೆಂಟ್ ಕಮಾಂಡರ್ ಚೈತನ್ಯ ಮಲ್ಹೋತ್ರಾ ಅವರು ಟಿಎನ್ಐಗೆ ಮಾಹಿತಿ ನೀಡಿದ್ದಾರೆ.

INS ವಿಕ್ರಾಂತ್‌ನ ಫ್ಲೈಟ್ ಡೆಕ್ (ವಿಮಾನ ವಾಹಕ) ಎರಡೂವರೆ ಹಾಕಿ ಮೈದಾನಗಳಿಗೆ ಸಮನಾದ ಪ್ರದೇಶವನ್ನು ಹೊಂದಿದೆ. ಅಂದರೆ ಇದು ಸರಿಸುಮಾರು 12,500 ಚದರ ಮೀಟರ್‌ ನಷ್ಟು ವ್ಯಾಪ್ತಿ ಹೊಂದಿದೆ. ಒಂದು ಸಣ್ಣ ರನ್‌ವೇ ಮತ್ತು ಸ್ಕೀ-ಜಂಪ್‌ನೊಂದಿಗೆ ಸುಸಜ್ಜಿತವಾದ ದೀರ್ಘ ರನ್‌ವೇ ಇದರಲ್ಲಿದೆ. ಕೆಂಪು ರೇಖೆಯು ಕಾರ್ಯಾಚರಣೆಯ ಪ್ರದೇಶ ಮತ್ತು ತಾಂತ್ರಿಕ ಪ್ರದೇಶವನ್ನು ಗುರುತಿಸುತ್ತದೆ. ಈ ನೌಕೆಯಲ್ಲಿ ಆರು ಹೆಲಿಕಾಪ್ಟರ್‌ಗಳು ಮತ್ತು 12 ಫೈಟರ್ ಜೆಟ್‌ಗಳನ್ನು ಡೆಕ್‌ನಲ್ಲಿ ನಿಲ್ಲಿಸಬಹುದು ಮತ್ತು ಒರಟಾದ ವಾತಾವರಣದಲ್ಲಿ ಅದನ್ನು ಹಿಡಿದಿಡಲು ವಿಮಾನವನ್ನು ಲಾಚ್ ಮಾಡಲಾಗುತ್ತದೆ. ಡೆಕ್‌ನ ಕೆಳಗೆ ಇರುವ ಹ್ಯಾಂಗರ್‌ಗೆ ಜೆಟ್‌ಗಳನ್ನು ಸರಿಸಲು ಎರಡು ಎಲಿವೇಟರ್‌ಗಳಿವೆ ಎಂದು ಅವರು ಹೇಳಿದ್ದಾರೆ.

"ಉದ್ದವಾದ, ಸಮತಟ್ಟಾದ ಡೆಕ್ ಸಣ್ಣ ಟೇಕ್‌ಆಫ್ ಮತ್ತು ವಿಮಾನದ ಬಂಧನವನ್ನು ಸುಗಮಗೊಳಿಸುತ್ತದೆ. ವಿಮಾನದಲ್ಲಿ ಲ್ಯಾಂಡಿಂಗ್ ಜೆಟ್‌ಗಳನ್ನು ಮರುಪಡೆಯಲು 3 ಅರೆಸ್ಟರ್ ವೈರ್‌ಗಳ ಸೆಟ್ ಇದೆ ಎಂದು ಲೆಫ್ಟಿನೆಂಟ್ ಸ್ಕಂದ ಹೇಳಿದರು.

ವಿಮಾನ ವಾಹಕ ನೌಕೆಯಲ್ಲಿನ ಡೆಕ್‌ನ ಕೆಳಗೆ ಕ್ಯಾಬಿನ್‌ಗಳು ಮತ್ತು ಕಾರಿಡಾರ್‌ಗಳಿದ್ದು, ಇವು 10 ಹಂತಗಳಲ್ಲಿ ಕಾರ್ಯಾಚರಣೆ ನಡೆಸುತ್ತವೆ. ಇದು ನೌಕೆಯನ್ನು ಚಿಕ್ಕ ನಗರದಂತೆ ಕಾಣಲು ಕಾರಣವಾಗಿದ್ದು, ಇದು ಆಸ್ಪತ್ರೆ ಇದ್ದು ಇಲ್ಲಿ 64-ಸ್ಲೈಸ್ CT ಸ್ಕ್ಯಾನ್ ಸೌಲಭ್ಯವಿದೆ. ಆಧುನಿಕ ಅಡುಗೆಮನೆಯೊಂದಿಗೆ ಕ್ಯಾಂಟೀನ್, ಮನರಂಜನಾ ಸೌಲಭ್ಯ, ಫಿಟ್‌ನೆಸ್ ಕೇಂದ್ರ, ಸಿಬ್ಬಂದಿ ವಾಸಿಸುವ ಕ್ವಾರ್ಟರ್ಸ್, ಅಗ್ನಿಶಾಮಕ ಠಾಣೆ, ಲಾಂಡ್ರಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ. ಕುಡಿಯುವ ನೀರು ಒದಗಿಸಲು ನೀರಿನ ಸ್ಥಾವರ ಮತ್ತು RO ಪ್ಲಾಂಟ್ ಕೂಡ ಇದೆ. ಇದಲ್ಲದೆ ಐಎನ್ಎಸ್ ವಿಕ್ರಾಂತ್ ಡ್ಯಾಮೇಜ್ ಕಂಟ್ರೋಲ್ ಪ್ರಧಾನ ಕಛೇರಿಯನ್ನು ಹೊಂದಿದ್ದು, ಅದು 3,000 ಅಗ್ನಿ ಸಂವೇದಕಗಳು ಮತ್ತು 700 ಪ್ರವಾಹ ಸಂವೇದಕಗಳಿಂದ ಸಂಕೇತಗಳನ್ನು ಪಡೆಯುತ್ತದೆ ಎನ್ನಲಾಗಿದೆ.

ಅಂತೆಯೇ "ಮೇಲ್ವಿಚಾರಣಾ ವ್ಯವಸ್ಥೆಯನ್ನು BHEL ಅಭಿವೃದ್ಧಿಪಡಿಸಿದ್ದು, ಇದು ಬೆಂಕಿ ಅಥವಾ ಪ್ರವಾಹದ ಸಂದರ್ಭದಲ್ಲಿ ನಮ್ಮನ್ನು ಎಚ್ಚರಿಸುತ್ತದೆ. ಇವುಗಳ ಹೊರತಾಗಿ ವಿಕ್ರಾಂತ್ ನಲ್ಲಿ ಇಂಟಿಗ್ರೇಟೆಡ್ ಪ್ಲಾಟ್‌ಫಾರ್ಮ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಇದ್ದು, ಇದು ವಿದ್ಯುತ್ ಉತ್ಪಾದನೆ ಮತ್ತು ಪ್ರೊಪಲ್ಷನ್ ಸೇರಿದಂತೆ ಯಾವುದೇ ಉಪಕರಣವನ್ನು ಆನ್‌ಬೋರ್ಡ್‌ನಲ್ಲಿ ಪ್ರಾರಂಭಿಸಬಹುದು ಮತ್ತು ನಿಲ್ಲಿಸಬಹುದು ಎಂದು ವಿಂಗ್‌ನ ಮುಖ್ಯಸ್ಥರಾಗಿರುವ ಲೆಫ್ಟಿನೆಂಟ್ ಕಮಾಂಡರ್ ಅಖಿಲ್ ಹೇಳಿದ್ದಾರೆ.

ಈ ನೌಕೆ, 2,600 ಕಿಮೀ ಉದ್ದದ ಸಂಕೀರ್ಣ ಆಪ್ಟಿಕಲ್ ಕೇಬಲ್ ಜಾಲವನ್ನು ಹೊಂದಿದೆ. ಪ್ಲಾಟ್‌ಫಾರ್ಮ್ ನಮಗೆ ಸೇತುವೆಯಿಂದಲೇ 100 ಮೀ ದೂರದಲ್ಲಿರುವ ಎಂಜಿನ್ ಅನ್ನು ಆನ್ ಮಾಡುವ ಸೌಲಭ್ಯವನ್ನು ನೀಡುತ್ತದೆ. ಹಡಗಿನಲ್ಲಿರುವ ಕುಡಿಯುವ ನೀರಿನ ಆರ್‌ಒ ಸ್ಥಾವರದಿಂದ 4 ಲಕ್ಷ ಲೀಟರ್ ಶುದ್ಧ ನೀರನ್ನು ಉತ್ಪಾದಿಸಬಹುದಾಗಿದೆ. ಹಡಗು ಉತ್ಪಾದಿಸುವ ಶಕ್ತಿಯು ಒಂದು ಸಣ್ಣ ಪಟ್ಟಣವನ್ನು ಬೆಳಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮಲ್ಹೋತ್ರಾ ಹೇಳಿದರು.

ಫ್ಲೈಟ್ ಡೆಕ್ 270 ಲೈಟ್‌ಗಳನ್ನು ಹೊಂದಿದ್ದು, ರಾತ್ರಿ ಇಳಿಯುವ ಸಮಯದಲ್ಲಿ ಫೈಟರ್ ಜೆಟ್‌ಗಳು ಮತ್ತು ಹೆಲಿಕಾಪ್ಟರ್‌ಗಳಿಗೆ ಮಾರ್ಗದರ್ಶನ ನೀಡುತ್ತದೆ. ಇದು 380-ವ್ಯಾಟ್ ವ್ಯವಸ್ಥೆಯಿಂದ ಚಾಲಿತವಾಗಿದೆ. 

INS ವಿಕ್ರಾಂತ್ ಬೋರ್ಡ್
ವೈದ್ಯಕೀಯ ಸಂಕೀರ್ಣವು ಮೂರು ಡೆಕ್‌ಗಳ ಮೂಲಕ ಚಲಿಸುವ 45 ವಿಭಾಗಗಳಲ್ಲಿ ಹರಡಿದೆ. ಇಲ್ಲಿ ಐದು ವೈದ್ಯಕೀಯ ಅಧಿಕಾರಿಗಳು ಮತ್ತು 15 ವೈದ್ಯಕೀಯ ನಾವಿಕರು ಇದ್ದಾರೆ. 64 ಸ್ಲೈಸ್ ಸಿಟಿ ಸ್ಕ್ಯಾನ್ ಸೆಂಟರ್, ಡೆಂಟಲ್ ಸೆಂಟರ್, ಎರಡು ಆಪರೇಷನ್ ಥಿಯೇಟರ್, ಎಕ್ಸ್ ರೇ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೌಲಭ್ಯ, ಪ್ರಯೋಗಾಲಯ, ರಕ್ತ ವರ್ಗಾವಣೆ ಮತ್ತು ಫಿಸಿಯೋಥೆರಪಿ ವಿಭಾಗವಿದೆ. ಅಲ್ಲದೆ 16 ಹಾಸಿಗೆಗಳ ವಾರ್ಡ್ ಇದ್ದು, ನಾವು ಅರಿವಳಿಕೆ ತಜ್ಞ ಮತ್ತು ಶಸ್ತ್ರಚಿಕಿತ್ಸಕರನ್ನು ಹೊಂದಿದೆ ಎಂದು ಹೇಳಿದರು.

ವೈಶಿಷ್ಟ್ಯಗಳು
ಹಾಲಿ ನೌಕೆಗೆ 1971 ರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ INS ವಿಕ್ರಾಂತ್ ಎಂದೇ ಹೆಸರಿಸಲಾಗಿದೆ. ಈ ನೌಕೆಯನ್ನು ಅಂದಾಜು 20,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಸುಮಾರು 262 ಮೀ. ಉದ್ದ ಮತ್ತು 62 ಮೀ ಅಗಲವಿದ್ದು, 59 ಮೀಟರ್ ಎತ್ತರವಿದೆ. ಈ ನೌಕೆ 45,000 ಟನ್‌ ತೂಕವಿದ್ದು, 88 MW ವಿದ್ಯುತ್ ಸಾಮರ್ಥ್ಯವಿದೆ. ನೌಕೆ 4 ಗ್ಯಾಸ್ ಟರ್ಬೈನ್ಗಳ ಸಾಮರ್ಥ್ಯದ ಎಂಜಿನ್ ಹೊಂದಿದ್ದು, 2,600 ಕಿ.ಮೀ. ಕೇಬಲ್ ವ್ಯವಸ್ಥೆ ಹೊಂದಿದೆ. ನೌಕೆಯಲ್ಲಿ ಒಟ್ಟು 14 ಮಹಡಿಗಳಿದ್ದು, ಆಸ್ಪತ್ರೆಯಲ್ಲಿ 16 ಹಾಸಿಗೆಗಳು, 2 ಆಪರೇಷನ್ ಥಿಯೇಟರ್‌ಗಳ ಸಾಮರ್ಥ್ಯವಿದೆ. ನೌಕೆಯಲ್ಲಿ ಒಟ್ಟು 2,300 ಕ್ಯಾಬಿನ್ ಗಳಿದ್ದು, ಮಹಿಳಾ ಅಧಿಕಾರಿಗಳಿಗೆ ವಿಶೇಷ ಕ್ಯಾಬಿನ್ ಗಳಿವೆ. ಇಲ್ಲಿ 1,750 ನಾವಿಕರು ಕಾರ್ಯ ನಿರ್ವಹಿಸಲಿದ್ದು, ಏಕಕಾಲದಲ್ಲಿ 6 ಹೆಲಿಕಾಪ್ಟರ್‌ಗಳು ಮತ್ತು 12 ಫೈಟರ್ ಜೆಟ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆಯ ಸಾಮರ್ಥ್ಯವಿದೆ.

ರಾತ್ರಿ ಸಂದರ್ಭದಲ್ಲಿ ವಿಮಾನಗಳು ಇಳಿಯಲು 270 ದೀಪಗಳ ವ್ಯವಸ್ಥೆ ಇದೆ. ಈ ನೌಕೆಯ ಗರಿಷ್ಟ ವೇಗ ಮಿತಿ 28 ನಾಟಿಕಲ್ಸ್ ಇದ್ದು,  ಕ್ರೂಸಿಂಗ್ ವೇಗ 18 ನಾಟಿಕಲ್ಸ್ ನಷ್ಟಿವೆ. ಈ ನೌಕೆ 7,500 ನಾಟಿಕಲ್ ಮೈಲು ಸಾಮರ್ಥ್ಯವನ್ನು ಹೊಂದಿದ್ದು, 30 ವಿಮಾನಗಳನ್ನು ನಿರ್ವಹಿಸಬಹುದು. MIG 29K, LCA ನೇವಿ, Kamov 31. MH-60R ಮಲ್ಟಿರೋಲ್ ಹೆಲಿಕಾಪ್ಟರ್‌ಗಳು. ಸುಧಾರಿತ ಲಘು ಹೆಲಿಕಾಪ್ಟರ್‌ಗಳು ನೌಕೆಯಲ್ಲಿ ಕಾರ್ಯ ನಿರ್ವಹಿಸಬಲ್ಲವು. 

ನೌಕಾಪಡೆ, DRDO ಮತ್ತು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ನಡುವಿನ ಪಾಲುದಾರಿಕೆಯ ಮೂಲಕ ಯುದ್ಧನೌಕೆಗಾಗಿ ಉನ್ನತ ದರ್ಜೆಯ ಉಕ್ಕನ್ನು ಉತ್ಪಾದಿಸಲಾಗುತ್ತಿದೆ. 21,500 ಟನ್ ವಿಶೇಷ ದರ್ಜೆಯ ಉಕ್ಕನ್ನು ನೌಕೆ ನಿರ್ಮಾಣಕ್ಕೆ ಬಳಸಲಾಗಿದೆ.  ಆಗಸ್ಟ್ 2021-ಜುಲೈ 2022ರವಗೆ ನೌಕೆಯ ಸಮುದ್ರ ಪ್ರಯೋಗಗಳು ನಡೆದಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com