ಐಎಸ್‌ಐನಿಂದ ಹನಿಟ್ರ್ಯಾಪ್: ರಹಸ್ಯ ಮಾಹಿತಿ ರವಾನಿಸಿದ್ದ ಮಾಜಿ ರಕ್ಷಣಾ ಸಿಬ್ಬಂದಿಯನ್ನು ಬಂಧಿಸಿದ ಬಿಹಾರದ ಪೊಲೀಸರು

ಪಾಕಿಸ್ತಾನದ ಐಎಸ್ಐನ ಮಹಿಳಾ ಏಜೆಂಟ್‌ಗೆ ವರ್ಗೀಕೃತ ತಾಂತ್ರಿಕ ಮಾಹಿತಿ ಮತ್ತು ಯಂತ್ರಗಳ ಪೋಟೊಗಳನ್ನು ನೀಡಿದ ಆರೋಪದ ಮೇಲೆ ಅವದಿ (ಚೆನ್ನೈ) ಹೆವಿ ವೆಹಿಕಲ್ಸ್ ಫ್ಯಾಕ್ಟರಿಯ ಮಾಜಿ ಗುಮಾಸ್ತರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಪಾಟ್ನಾ: ವಿಶೇಷವಾಗಿ ಸಶಸ್ತ್ರ ಪಡೆಗಳ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪಿಂಗ್ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಪಾಕಿಸ್ತಾನದ ಐಎಸ್ಐನ ಮಹಿಳಾ ಏಜೆಂಟ್‌ಗೆ ವರ್ಗೀಕೃತ ತಾಂತ್ರಿಕ ಮಾಹಿತಿ ಮತ್ತು ಯಂತ್ರಗಳ ಪೋಟೊಗಳನ್ನು ನೀಡಿದ ಆರೋಪದ ಮೇಲೆ ಅವದಿ (ಚೆನ್ನೈ) ಹೆವಿ ವೆಹಿಕಲ್ಸ್ ಫ್ಯಾಕ್ಟರಿಯ ಮಾಜಿ ಗುಮಾಸ್ತರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಉತ್ತರ ಬಿಹಾರದ ಮುಜಾಫರ್‌ಪುರದ ರವಿ ಚೌರಾಸಿಯಾ ಎಂದು ಗುರುತಿಸಲಾಗಿದೆ. ಕೇಂದ್ರ ಗುಪ್ತಚರ ಸಂಸ್ಥೆಗಳು ನೀಡಿದ ಸುಳಿವಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚೌರಾಸಿಯಾ ಅವರು ಸದ್ಯ ಮುಜಾಫರ್‌ಪುರ ಜಿಲ್ಲೆಯ ಕತ್ರಾದಲ್ಲಿರುವ ಉಪ-ನೋಂದಣಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದಾರೆ.

ಅವದಿಯಲ್ಲಿರುವ ಪ್ರಮುಖ ರಕ್ಷಣಾ ವಿಭಾಗಗಳೆಂದರೆ ಐಎಎಫ್, ಸೇನೆ, ಹೆವಿ ವೆಹಿಕಲ್ಸ್ ಫ್ಯಾಕ್ಟರಿ, ಯುದ್ಧ ವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ, ಸಿಆರ್‌ಪಿಎಫ್, ಭಾರತೀಯ ನೌಕಾಪಡೆ, ಕೇಂದ್ರ ವಾಹನ ಡಿಪೋ, ಬಂದೂಕು ಡಿಪೋ ಮತ್ತು ಆರ್ಡಿನೆನ್ಸ್ ಬಟ್ಟೆ ಕಾರ್ಖಾನೆಗಳಾಗಿವೆ.

ಮುಜಾಫರ್‌ಪುರ ಎಸ್ಎಸ್‌ಪಿ ಜಯಂತ್ ಕಾಂತ್ ಮಾತನಾಡಿ, ರವಿ ಫೇಸ್‌ಬುಕ್ ಮೂಲಕ 'ಕರ್ನಲ್'ನ ಮಗಳು ಶಾನ್ವಿ ಶರ್ಮಾ ಎಂದು ಹೇಳಿಕೊಂಡ ಮಹಿಳಾ ಐಎಸ್ಐ ಹ್ಯಾಂಡ್ಲರ್‌ ಜತೆ ಸ್ನೇಹ ಬೆಳೆಸಿದ್ದಾರೆ. ನಂತರ, ತಾನು ಎನ್‌ಡಿಎಗೆ ಸೇರಲು ಬಯಸುವುದಾಗಿ ಹೇಳಿದ ಮಹಿಳೆ, ಹೆವಿ ವೆಹಿಕಲ್ಸ್ ಫ್ಯಾಕ್ಟರಿಯಲ್ಲಿ ತಯಾರಾಗುತ್ತಿರುವ ಶಸ್ತ್ರಸಜ್ಜಿತ ಯುದ್ಧ ವಾಹನಗಳ ತಾಂತ್ರಿಕ ವಿವರಗಳು ಮತ್ತು ಅವುಗಳ ಛಾಯಾಚಿತ್ರಗಳ ಅಗತ್ಯವಿದೆ ಎಂದು ರವಿಗೆ ಹೇಳಿದ್ದಾರೆ. ಈ ಸೂಕ್ಷ್ಮ ಮಾಹಿತಿಗಾಗಿ ಆನ್‌ಲೈನ್‌ನಲ್ಲಿ ಕಳುಹಿಸಿದ ಹಣವನ್ನೂ ರವಿ ಸ್ವೀಕರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರವಿ ಬಿಹಾರದ ಮುಂಗೇರ್ ಜಿಲ್ಲೆಯ ನಯಾ ಗಾಂವ್, ಜಮಾಲ್‌ಪುರದವರು. ಐಎಸ್‌ಐ ಏಜೆಂಟ್ ಒಮ್ಮೆ ರವಿಯನ್ನು ಭೇಟಿಯಾಗಲು ಮುಜಾಫರ್‌ಪುರಕ್ಕೆ ಭೇಟಿ ನೀಡಿದ್ದರು ಎಂದು ಆರೋಪಿಸಲಾಗಿದೆ. ತಾನು ಹನಿಟ್ರ್ಯಾಪ್‌ಗೆ ಒಳಗಾಗಿದ್ದೇನೆ ಎಂಬುದನ್ನು ಅರಿತುಕೊಂಡ ರವಿ, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಐಎಸ್‌ಐ ಏಜೆಂಟ್‌ನಿಂದ ಪಾರಾಗಲು ಯತ್ನಿಸಿದ್ದ. ಇದಕ್ಕಾಗಿ ಹೇಳದೆ ಕೇಳದೆ ತನ್ನ ಕೆಲಸವನ್ನು ತೊರೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರಕ್ಷಣಾ ಸಿಬ್ಬಂದಿಯನ್ನು ಬಲೆಗೆ ಬೀಳಿಸುವ ಹೊಸ ಟ್ರೆಂಡ್ ಇದಾಗಿದೆ. 2019 ರಿಂದೀಚೆಗೆ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ 35 ಜನರು ಹನಿ ಟ್ರ್ಯಾಪ್‌ಗೆ ಒಳಗಾಗಿದ್ದಾರೆ ಎಂದು ರಾಜಸ್ಥಾನ ಪೊಲೀಸ್ ಅಂಕಿಅಂಶಗಳು ಸೂಚಿಸುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com