ಗುಜರಾತ್ ಬಿಜೆಪಿಯ ಸಿಆರ್ ಪಾಟೀಲ್ ದೀರ್ಘಕಾಲದಿಂದಲೂ ಏಕನಾಥ್ ಶಿಂಧೆ ಜೊತೆ ಸಂಪರ್ಕದಲ್ಲಿದ್ದರು: ಮೂಲಗಳು

ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಬಿರುಕು ಮೂಡಿದ್ದು ಶಿವಸೇನೆಯ ಬಂಡಾಯ ಶಾಸಕರು ಗುಜರಾತ್ ಸೂರತ್ ನಲ್ಲಿ ಬೀಡುಬಿಟ್ಟಿದ್ದಾರೆ.
ಸಿಆರ್ ಪಾಟೀಲ್
ಸಿಆರ್ ಪಾಟೀಲ್

ಸೂರತ್: ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಬಿರುಕು ಮೂಡಿದ್ದು ಶಿವಸೇನೆಯ ಬಂಡಾಯ ಶಾಸಕರು ಗುಜರಾತ್ ಸೂರತ್ ನಲ್ಲಿ ಬೀಡುಬಿಟ್ಟಿದ್ದಾರೆ.

ಅತೃಪ್ತ ಶಿವಸೇನೆ ನಾಯಕ ಏಕನಾಥ್ ಶಿಂಧೆ ಮತ್ತು 21 ಶಿವಸೇನೆ ಶಾಸಕರು ಸೂರತ್‌ನ ಹೋಟೆಲ್ ಲೆ ಮೆರಿಡಿಯನ್‌ನಲ್ಲಿ ಬೀಡುಬಿಟ್ಟಿದ್ದಾರೆ. ಉದ್ಧವ್ ಠಾಕ್ರೆ ವಿರುದ್ಧ ಶಿಂಧೆ ಬಂಡಾಯದ ಹಿಂದೆ ಗುಜರಾತ್ ಬಿಜೆಪಿ ಘಟಕದ ಸಿಆರ್ ಪಾಟೀಲ್ ಪ್ರಮುಖ ವ್ಯಕ್ತಿ ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದಲ್ಲಿ 'ಆಪರೇಷನ್ ಕಮಲ' ನಡೆಸಲು ಸಿಆರ್ ಪಾಟೀಲ್ ಅವರು ಶಿಂಧೆ ಅವರೊಂದಿಗೆ ಬಹಳ ಸಮಯದಿಂದ ಸಂಪರ್ಕದಲ್ಲಿದ್ದಾರೆ. ಜಲಗಾಂವ್ ಮೂಲದ ಪಾಟೀಲ್ ಅವರು ಶಿವಸೇನೆಯ ಕೆಲವು ಶಾಸಕರ ಸಂಪರ್ಕದಲ್ಲಿದ್ದಾರೆ. ಈ ಶಾಸಕರಲ್ಲಿ ಪರೋಲಾದಿಂದ ಚಿಮನರಾವ್ ಪಾಟೀಲ್ ಮತ್ತು ಮರಾಠ ಸಮುದಾಯಕ್ಕೆ ಸೇರಿದ ಪಚೋರಾದಿಂದ ಕಿಶೋರ್ ಪಾಟೀಲ್ ಸೇರಿದ್ದಾರೆ.

ಈ ಸಂಪರ್ಕ ಶಿಂಧೆ ಮತ್ತು ಸೇನೆಯ ಇತರ ಅತೃಪ್ತ ಶಾಸಕರೊಂದಿಗೆ ಸಂಪರ್ಕ ಸಾಧಿಸಲು ಪಾಟೀಲ್‌ಗೆ ಸಹಾಯ ಮಾಡಿತು. ಶಿವಸೇನೆಯ ಮತಗಳನ್ನು ಬಿಜೆಪಿಗೆ ವರ್ಗಾಯಿಸುವ ಮೂಲಕ ರಾಜ್ಯಸಭಾ ಚುನಾವಣೆ ಮತ್ತು ಮಹಾರಾಷ್ಟ್ರ ರಾಜ್ಯ ವಿಧಾನ ಪರಿಷತ್ತಿನ ಚುನಾವಣೆಗಳಿಗೆ ಮುಂಚಿತವಾಗಿ ಇದನ್ನು ಯೋಜಿಸಲಾಗಿತ್ತು ಎಂದು ಹೆಸರು ಹೇಳಲಿಚ್ಛಿಸದ ಮೂಲವೊಂದು ತಿಳಿಸಿದೆ.

ಕುತೂಹಲಕಾರಿ ಸಂಗತಿಯೆಂದರೆ, ಶಿಂಧೆ ಮತ್ತು ಅವರ ಬೆಂಬಲಿಗ ಶಾಸಕರ ಆಗಮನದ ನಂತರ, ಪಾಟೀಲ್ ತಮ್ಮ ಎಲ್ಲಾ ನಿಗದಿತ ಸಭೆಗಳನ್ನು ರದ್ದುಗೊಳಿಸಿ ಅಹಮದಾಬಾದ್‌ನಲ್ಲಿದ್ದ ಅವರು ಸೂರತ್‌ಗೆ ಧಾವಿಸಿದರು. ಅಲ್ಲದೆ, ಶಿವಸೇನೆ ಶಾಸಕರು ಬೀಡುಬಿಟ್ಟಿರುವ ಹೋಟೆಲ್‌ಗೆ ಗುಜರಾತ್ ಪೊಲೀಸರು ಭಾರೀ ಭದ್ರತೆಯನ್ನು ನಿಯೋಜಿಸಿದ್ದಾರೆ.

ನೂತನ ಸರ್ಕಾರದಲ್ಲಿ ಸಚಿವ ಸ್ಥಾನದ ಭರವಸೆ ನೀಡಲಾಗಿದೆ ಎಂದು ಶಿವಸೇನೆಯ ಬಂಡಾಯ ಶಾಸಕರೊಬ್ಬರು ಹೇಳಿದ್ದಾರೆ. ಕೇಂದ್ರೀಯ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿರುವ ಪಕ್ಷದ ಮುಖಂಡರು ಮತ್ತು ಶಾಸಕರು ಶಿವಸೇನೆ ನಾಯಕತ್ವದ ವಿರುದ್ಧ ಈ ಕ್ರಮ ಕೈಗೊಳ್ಳಲು ಮತ್ತು ಬಿಜೆಪಿಯೊಂದಿಗೆ ಸರ್ಕಾರ ರಚಿಸಲು ಶಿಂಧೆ ಅವರನ್ನು ಪ್ರೋತ್ಸಾಹಿಸಿದ್ದಾರೆ ಎಂದು ಶಿವಸೇನೆಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಬಿಜೆಪಿ ನಾಯಕರು ಮತ್ತು ಶಿಂಧೆ ಅವರೊಂದಿಗೆ ಸಮನ್ವಯ ಸಾಧಿಸಲು ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಮತ್ತು ಬಿಎಂಸಿ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಯಶವಂತ್ ಜಾಧವ್ ದೆಹಲಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿವಸೇನೆಯ ಗ್ರಾಮೀಣ ಶಾಸಕರು ಮತ್ತು ನಗರ ಶಾಸಕರ ನಡುವಿನ ಸಂವಹನ ಅಂತರವು ಹೆಚ್ಚಾಯಿತು. ಅಧಿಕಾರವು ನಗರದ ಶಾಸಕರಿಗೆ ಕೇಂದ್ರೀಕೃತವಾಗಿತ್ತು. ಇದು ಗ್ರಾಮೀಣ ಶಿವಸೇನೆ ಶಾಸಕರ ಇರಿಸುಮುರಿಸಿಗೆ ಕಾರಣವಾಗಿತ್ತು. ಇದಲ್ಲದೆ, ಉದ್ಧವ್ ಠಾಕ್ರೆ ಅವರನ್ನು ಸುಲಭವಾಗಿ ಸಂಪರ್ಕಿಸಲು ಮತ್ತು ಪ್ರವೇಶಿಸಲು ಸಾಧ್ಯವಾಗಲಿಲ್ಲ. ನಿಧಿ ಹಂಚಿಕೆಯ ಸಮಯದಲ್ಲಿ, ಎನ್‌ಸಿಪಿ ನಾಯಕ ಅಜಿತ್ ಪವಾರ್ ನಿರ್ಧಾರ ತೆಗೆದುಕೊಳ್ಳುವಲ್ಲಿ ಪ್ರಾಬಲ್ಯ ಹೊಂದಿದ್ದರು. ಇದು ಶಿವಸೇನೆಯ ಶಾಸಕರಿಗೆ ಸರಿ ಕಾಣಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com