ಡಿಸೆಂಬರ್ 15 ರೊಳಗೆ ಕೊನೆಯ ಹಾಗೂ 36ನೇ ರಫೇಲ್ ಯುದ್ಧ ವಿಮಾನ ಭಾರತಕ್ಕೆ

ಫ್ರಾನ್ಸ್ ಜೊತೆ ಮಾಡಿಕೊಂಡಿರುವ ಯುದ್ಧ ವಿಮಾನ ಖರೀದಿ ಒಪ್ಪಂದದ ಅನ್ವಯ ಭಾರತಕ್ಕೆ ತನ್ನ 36ನೇ ಮತ್ತು ಅಂತಿಮ ರಫೇಲ್ ಯುದ್ಧ ವಿಮಾನ ಡಿಸೆಂಬರ್ 15 ರೊಳಗೆ ಬಂದಿಳಿಯಲಿದೆ. ಇದು ಫ್ರಾನ್ಸ್‌ನಿಂದ ಬರಬೇಕಿದ್ದ ಕೊನೆಯ ರಫೇಲ್ ಯುದ್ಧ ವಿಮಾನವಾಗಿದೆ.
ರಫೇಲ್ ಯುದ್ಧ ವಿಮಾನ
ರಫೇಲ್ ಯುದ್ಧ ವಿಮಾನ

ನವದೆಹಲಿ: ಫ್ರಾನ್ಸ್ ಜೊತೆ ಮಾಡಿಕೊಂಡಿರುವ ಯುದ್ಧ ವಿಮಾನ ಖರೀದಿ ಒಪ್ಪಂದದ ಅನ್ವಯ ಭಾರತಕ್ಕೆ ತನ್ನ 36ನೇ ಮತ್ತು ಅಂತಿಮ ರಫೇಲ್ ಯುದ್ಧ ವಿಮಾನ ಡಿಸೆಂಬರ್ 15 ರೊಳಗೆ ಬಂದಿಳಿಯಲಿದೆ. ಇದು ಫ್ರಾನ್ಸ್‌ನಿಂದ ಬರಬೇಕಿದ್ದ ಕೊನೆಯ ರಫೇಲ್ ಯುದ್ಧ ವಿಮಾನವಾಗಿದೆ.

ಈ ಮೂಲಕ 2016 ರಲ್ಲಿ ಯುದ್ಧ ವಿಮಾನಗಳ ಖರೀದಿಗೆ ಸಹಿ ಹಾಕಿದ ನಾಲ್ಕು ವರ್ಷಗಳ ಬಳಿಕ ಜುಲೈ 29ರಂದು ಮೊದಲ ಹಂತದ ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಿದ್ದವು. ಫ್ರಾನ್ಸ್‌ನೊಂದಿಗೆ ಮಾಡಿಕೊಂಡಿರುವ ₹60,000 ಕೋಟಿ ರೂಪಾಯಿಗೂ ಹೆಚ್ಚಿನ ವೆಚ್ಚದ ರಕ್ಷಣಾ ಒಪ್ಪಂದದಂತೆ ಒಟ್ಟು 36 ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಿವೆ.

ಕೊನೆಯ ವಿಮಾನವು ಡಿಸೆಂಬರ್ 15 ರ ಸುಮಾರಿಗೆ ಭಾರತಕ್ಕೆ ಆಗಮಿಸಲಿದೆ. ರಫೇಲ್ ಯುದ್ಧ ವಿಮಾನಗಳಿಂದಾಗಿ ಭಾರತೀಯ ವಾಯುಪಡೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಈ ವಿಮಾನವನ್ನು ಬಳಸಲಾಗುತ್ತಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿಗಳು ಸುದ್ದಿಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.

36 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಭಾರತವು ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ಅವುಗಳಲ್ಲಿ 35 ಈಗಾಗಲೇ ಆಗಮಿಸಿವೆ ಮತ್ತು ಅಂಬಾಲಾ, ಹರಿಯಾಣ ಮತ್ತು ಪಶ್ಚಿಮ ಬಂಗಾಳದ ಹಶಿಮಾರಾದಲ್ಲಿ ನೆಲೆಗೊಂಡಿವೆ.

ಆರ್‌ಬಿ ಟೈಲ್ ಸಂಖ್ಯೆ ಹೊಂದಿರುವ 36ನೇ ಯುದ್ಧ ವಿಮಾನವನ್ನು ಫ್ರಾನ್ಸ್‌ನಿಂದ ಭಾರತಕ್ಕೆ ನೀಡಲಾಗಿದ್ದು, ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿರುವುದರಿಂದ ಅದರ ಎಲ್ಲಾ ಬಿಡಿಭಾಗಗಳು ಮತ್ತು ಇತರ ಭಾಗಗಳನ್ನು ಬದಲಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಫೇಲ್ 4.5 ತಲೆಮಾರಿನ ಯುದ್ಧ ವಿಮಾನವಾಗಿದೆ ಮತ್ತು ಸುಧಾರಿತ ರಾಡಾರ್ ಮತ್ತು ಎಲೆಕ್ಟ್ರಾನಿಕ್ ಯುದ್ಧ ಸಾಮರ್ಥ್ಯಗಳೊಂದಿಗೆ ದೀರ್ಘ ಶ್ರೇಣಿಯ ಏರ್-ಟು-ಏರ್ ಮತ್ತು ಏರ್-ಟು-ಗ್ರೌಂಡ್ ಕ್ಷಿಪಣಿಗಳೊಂದಿಗೆ ಭಾರತವು ಆಕಾಶದ ಮೇಲಿನ ತನ್ನ ಪ್ರಾಬಲ್ಯವನ್ನು ಮರಳಿ ಪಡೆಯಲು ಸಹಾಯ ಮಾಡಿದೆ.

ಚೀನಾದೊಂದಿಗಿನ ಸಂಘರ್ಷದ ಉತ್ತುಂಗದಲ್ಲಿ ರಫೇಲ್ ಅನ್ನು ತ್ವರಿತವಾಗಿ ಭಾರತೀಯ ವಾಯುಪಡೆಗೆ ಸೇರಿಸಲಾಯಿತು ಮತ್ತು ದೇಶಕ್ಕೆ ಆಗಮಿಸಿದ ಒಂದು ವಾರದಲ್ಲಿಯೇ ಲಡಾಖ್‌ನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

ರಷ್ಯಾದಿಂದ ಸುಖೊಯ್ ಖರೀದಿಸಿದ 23 ವರ್ಷಗಳ ಬಳಿಕ ಭಾರತ ಮಾಡಿಕೊಂಡಿರುವ ಅತಿ ದೊಡ್ಡ ಒಪ್ಪಂದ ಇದಾಗಿದೆ. ರಫೇಲ್ ಯುದ್ಧ ವಿಮಾನಗಳು ಕ್ಷಿಪಣಿ ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com