ಪಾದಚಾರಿ ಮೇಲ್ಸೇತುವೆ ಇಲ್ಲದೆ ಹಳಿ ದಾಟುವಾಗ ರೈಲಿಗೆ ಸಿಲುಕಿದ ಪ್ರಯಾಣಿಕರು ಪರಿಹಾರಕ್ಕೆ ಅರ್ಹರು: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು

ಪಾದಚಾರಿ ಮೇಲ್ಸೇತುವೆ ಇಲ್ಲದೆ ಹಳಿ ದಾಟುವಾಗ ರೈಲಿಗೆ ಸಿಲುಕಿದ ಪ್ರಯಾಣಿಕರು ಪರಿಹಾರಕ್ಕೆ ಅರ್ಹರು ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಪಾದಚಾರಿ ಮೇಲ್ಸೇತುವೆ ಇಲ್ಲದೆ ಹಳಿ ದಾಟುವಾಗ ರೈಲಿಗೆ ಸಿಲುಕಿದ ಪ್ರಯಾಣಿಕರು ಪರಿಹಾರಕ್ಕೆ ಅರ್ಹರು ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಪಾದಚಾರಿ ಮೇಲ್ಸೇತುವೆ ಇಲ್ಲದ ಕಾರಣ ನಿಲ್ದಾಣದಿಂದ ನಿರ್ಗಮಿಸುವುದಕ್ಕಾಗಿ ವಿಧಿಯಿಲ್ಲದೆ ರೈಲು ಹಳಿ ದಾಟಿ ಅಪಘಾತಕ್ಕೀಡಾದರೆ ಅಂತಹ ಪ್ರಯಾಣಿಕರು ರೈಲ್ವೆ ಕಾಯಿದೆಯಡಿ ಪರಿಹಾರ ಪಡೆಯಲು ಅರ್ಹರು ಎಂದು ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದೆ. ಅಂತಹ ಪ್ರಯಾಣಿಕರನ್ನು ನಿರ್ಲಕ್ಷ್ಯ ತೋರಿದ ಪ್ರಯಾಣಿಕ ಎನ್ನಲಾಗದು ಎಂದು ಬಾಂಬೆ ಹೈಕೋರ್ಟ್‌ ನಾಗಪುರ ಪೀಠದ ಏಕಸದಸ್ಯ ನ್ಯಾಯಮೂರ್ತಿ ಅಭಯ್‌ ಅಹುಜಾ ತಿಳಿಸಿದ್ದಾರೆ.

"ಹಳ್ಳಿಯೊಂದರಿಂದ ಉದ್ಯೋಗ ಅರಸಿ ಬರುವ ವ್ಯಕ್ತಿಯೊಬ್ಬ, ಅಧಿಕೃತ ಟಿಕೆಟ್‌ ಪಡೆದು ಪ್ಯಾಸೆಂಜರ್ ರೈಲಿನಲ್ಲಿ ಪಯಣಿಸಿ, ಮೇಲ್ಸೇತುವೆ ಇಲ್ಲದ ಕಾರಣ ರೈಲು ನಿಲ್ದಾಣದಿಂದ ನಿರ್ಗಮಿಸಲು ಯತ್ನಿಸುವಾಗ ಹಳಿಗಳ ಮೇಲೆ ವಿಧಿಯಿಲ್ಲದೆ ನಡೆಯುವಂತಾಗಿ ರೈಲೊಂದು ಡಿಕ್ಕಿ ಹೊಡೆದು ಸತ್ತರೆ ಆತ ಉದ್ದೇಶ ಪೂರ್ವಕವಾಗಿ ಅಸಡ್ಡೆ ಅಥವಾ ನಿರ್ಲಕ್ಷ್ಯ ತೋರಿದ ಎನ್ನಲಾಗದು” ಎಂದು ನ್ಯಾಯಮೂರ್ತಿಗಳು ಅಕ್ಟೋಬರ್ 10ರಂದು ನೀಡಿದ ಆದೇಶದಲ್ಲಿ ವಿವರಿಸಿದ್ದಾರೆ.
 
ಈ ಮೂಲಕ, ʼಅಧಿಕೃತ ಟಿಕೆಟ್‌ನೊಂದಿಗೆ ಪಯಣಿಸಿದ್ದ ಪ್ರಯಾಣಿಕರು ರೈಲು ಹಳಿ ಮೇಲೆ ನಿರ್ಲಕ್ಷ್ಯದಿಂದ ವರ್ತಿಸಿದರೆ ಅವರು ಅಸಲಿ ಪ್ರಯಾಣಿಕರಾಗಿ ಉಳಿಯುವುದಿಲ್ಲʼ ಎಂದು ರೈಲ್ವೆ ಪರಿಹಾರ ನ್ಯಾಯಮಂಡಳಿ ಹೊರಡಿಸಿದ್ದ ಆದೇಶವನ್ನು ಪೀಠ ರದ್ದುಗೊಳಿಸಿತು. ರೈಲು ಅಪಘಾತದಲ್ಲಿ ಸಾವನ್ನಪ್ಪಿದ ಮೃತ ಮನೋಹರ್ ಗಜ್ಭಿಯೆ ಅವರ ಪತ್ನಿ, ಮಗ ಹಾಗೂ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಮನೋಹರ್‌ ಸಾಮಾನ್ಯ ಪ್ಯಾಸೆಂಜರ್‌ ರೈಲಿನಲ್ಲಿ ರೈಲಿನಲ್ಲಿ ಗೊಂಡಿಯಾದಿಂದ ರೆವ್ರಾಲ್ಗೆ ಪ್ರಯಾಣಿಸಿದ್ದರು.  

ಹಳಿ ದಾಟುತ್ತಿದ್ದಾಗ ಮನೋಹರ್ ಅವರಿಗೆ ರೈೆಲು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದರು. ಬೇರೆ ವ್ಯಕ್ತಿಗಳಿಗೂ ಗಾಯವಾಗಿತ್ತು. ಆದರೂ ಹಳಿ ದಾಟುತ್ತಿದ್ದ ಪ್ರಯಾಣಿಕರ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದ್ದು ರೈಲ್ವೆ ಕಾಯಿದೆಯಡಿ ಪರಿಹಾರ ಒದಗಿಸಲಾಗದು ಎಂದು ರೈಲ್ವೆ ಪರಿಹಾರ ನ್ಯಾಯಮಂಡಳಿ ಆದೇಶ ನೀಡಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com