ಬೇರೊಬ್ಬನೊಂದಿಗೆ ಪ್ರಿಯತಮೆ ವಿವಾಹ: ಮುಹೂರ್ತದ ವೇಳೆ ತಾಳಿ ಕಸಿದು ತಾನೇ ಕಟ್ಟಲು ಮುಂದಾದ ಪ್ರೇಮಿ! ಮುಂದಾಗಿದ್ದೇ ಅಚ್ಚರಿ!!

ಬೇರೊಬ್ಬನೊಂದಿಗೆ ವಿವಾಹವಾಗುತ್ತಿದ್ದ ಪ್ರಿಯತಮೆಗೆ ವ್ಯಕ್ತಿಯೋರ್ವ ತಾನೇ ತಾಳಿ ಕಟ್ಟಲು ಮುಂದಾದ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಬೇರೊಬ್ಬನೊಂದಿಗೆ ವಿವಾಹವಾಗುತ್ತಿದ್ದ ಪ್ರಿಯತಮೆಗೆ ವ್ಯಕ್ತಿಯೋರ್ವ ತಾನೇ ತಾಳಿ ಕಟ್ಟಲು ಮುಂದಾದ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.

ತಮಿಳುನಾಡಿನ ರಾಜಧಾನಿ ಚೆನ್ನೈನ ತೊಂಡಿಯಾರ್‌ಪೇಟ್‌ನ ನೇತಾಜಿ ನಗರದ ಮದುವೆ ಮಂಟಪದಲ್ಲಿ ಈ ಘಟನೆ ನಡೆದಿದ್ದು, ತಾಳಿ ಕಟ್ಟುವ ವೇಳೆ ತಾನೇ ತಾಳಿ ಕಸಿದು ವಧುವಿಗೆ ತಾಳಿ ಕಟ್ಟಲು ಹೋಗಿದ್ದ ಯುವಕನನ್ನು ಸಂಬಂಧಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ತಾಳಿಕಟ್ಟಲು ಮುಂದಾದ ಯುವಕನನ್ನು 24 ವರ್ಷದ ಸತೀಶ್ ಕುಮಾರ್ ಎಂದು ಹೇಳಲಾಗಿದ್ದು, ಈತ ಮತ್ತು ವಧು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿಗೆ ಬೇರೊಬ್ಬ ಯುವಕನೊಂದಿಗೆ ಮದುವೆ ಫಿಕ್ಸ್ ಆಗಿತ್ತು. ಆದರೆ ಈ ಮದುವೆ ಇಷ್ಟವಿಲ್ಲದ ಯುವತಿ ಮದುವೆ ಮಂಟಪಕ್ಕೆ ಬಂದು ತನ್ನನ್ನು ಕರೆದುಕೊಂಡು ಹೋಗುವಂತೆ ಕೇಳಿದ್ದಳು. 

ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಚೆನ್ನೈನ ತೊಂಡಿಯಾರ್‌ ಪೇಟ್‌ನ ನೇತಾಜಿ ನಗರದ ಮದುವೆ ಮಂಟಪದಲ್ಲಿ ಮದುವೆ ನಡೆಯುತ್ತಿತ್ತು. ಯುವತಿ ಯೋಜನೆಯಂತೆ ಮದುವೆ ಮಂಟಪಕ್ಕೆ ಬಂದ ಸತೀಶ್ ಕುಮಾರ್, ತಾನು ವಧುವಿನ ಸ್ನೇಹಿತ ಎಂದು ಪರಿಚಯಿಸಿಕೊಂಡು ಮದುವೆ ಮಂಟಪದಲ್ಲಿ ಕೆಲಸ ಮಾಡಿಕೊಂಡು ಓಡಾಡಿಕೊಂಡಿದ್ದ. ಮಹೂರ್ತ ಸಮೀಪವಾಗುತ್ತಿದ್ದಂತೆಯೇ ಮಂಟಪದ ಬಳಿ ಧಾವಿಸಿದ್ದ ಸತೀಶ್ ಕುಮಾರ್ ವರ ವಧುವಿಗೆ ತಾಳಿ ಕಟ್ಟಲು ಮುಂದಾಗುತ್ತಿದ್ದಂತೆಯೇ ತಾಳಿ ಕಸಿದುಕೊಂಡು ತಾನೇ ಕಟ್ಟಲು ಮುಂದಾದ. ಈ ವೇಳೆ ಆಗಹುದಾಗಿದ್ದ ಅಚಾತುರ್ಯ ಗ್ರಹಿಸಿದ್ದ ಸಂಬಂಧಿಕರು ಕೂಡಲೇ ಆತನನ್ನು ತಡೆದು ತಾಳಿ ಕಟ್ಟದಂತೆ ತಡೆದು ತಾಳಿ ಕಸಿದು ಥಳಿಸಿದ್ದಾರೆ.

ಬಳಿಕ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಸತೀಶ್ ಕುಮಾರ್ ನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ತನಿಖೆ ನಡೆಸಿದ ಪೊಲೀಸರಿಗೆ ವಧು ಮತ್ತು ಸತೀಶ್ ಇಬ್ಬರು ಪರಸ್ಪರ ಪ್ರೇಮಿಗಳು ಎಂಬುದು ತಿಳಿದುಬಂದಿದೆ. ಸಹೋದ್ಯೋಗಿಗಳಾಗಿದ್ದ ಇಬ್ಬರೂ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಪ್ರೀತಿ ವಿಚಾರ ಮನೆಯಲ್ಲಿ ಹೇಳಲು ಹಿಂಜರಿದಿದ್ದರು. ಆದರೆ ಯುವತಿಗೆ ಮದುವೆ ಫಿಕ್ಸ್ ಆದ ಹಿನ್ನಲೆಯಲ್ಲಿ ಅದನ್ನು ತಡೆಯಲು ಆರೋಪಿ ಸತೀಶ್ ಹೀಗೆ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಸತೀಶ್ ನೊಂದಿಗೇ ಯುವತಿ ಮದುವೆ
ಇನ್ನು ಮದುವೆ ಮಂಟದಲ್ಲಿ ನಡೆದ ಹೈಡ್ರಾಮಾ ಬಳಿಕ ಯುವತಿಯನ್ನು ಮದುವೆಯಾಗಬೇಕಿದ್ದ ವರನ ಕುಟುಂಬಸ್ಥರು ಮದುವೆಯಿಂದ ಹಿಂದೆ ಸರಿದಿದ್ದು, ಇದೀಗ ಪೊಲೀಸ್ ಸಂಧಾನದ ಮೇರೆಗೆ ಹೈಡ್ರಾಮಾಕ್ಕೆ ಕಾರಣವಾಗಿದ್ದ ಮತ್ತು ಯುವತಿ ಪ್ರೀತಿಸಿದ್ದ ಸತೀಶ್ ನೊಂದಿಗೆ ಮದುವೆ ಮಾಡಲು ಯುವತಿ ಪೋಷಕರು ಮಾತುಕತೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com