ಪುಣೆಯಲ್ಲಿ 19 ವರ್ಷದ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಕ್ಕಾಗಿ ಫುಡ್ ಡೆಲಿವರಿ ವ್ಯಕ್ತಿಯ ಬಂಧನ

ಮಹಾರಾಷ್ಟ್ರದ ಪುಣೆ ನಗರದಲ್ಲಿ 19 ವರ್ಷದ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದ ಮೇಲೆ 40 ವರ್ಷದ ಫುಡ್ ಡೆಲಿವರಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಪುಣೆ: ಮಹಾರಾಷ್ಟ್ರದ ಪುಣೆ ನಗರದಲ್ಲಿ 19 ವರ್ಷದ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದ ಮೇಲೆ 40 ವರ್ಷದ ಫುಡ್ ಡೆಲಿವರಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಎಂಜಿನಿಯರಿಂಗ್ ವಿದ್ಯಾರ್ಥಿ ಆನ್‌ಲೈನ್ ಫುಡ್ ಅಗ್ರಿಗೇಟರ್ ಆ್ಯಪ್ ಮೂಲಕ ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್ ಮಾಡಿದ ನಂತರ ಘಟನೆ ಸೆಪ್ಟೆಂಬರ್ 17 ರಂದು ಕೊಂಡ್ವಾ ಪ್ರದೇಶದಲ್ಲಿ ನಡೆದಿದೆ.

ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಮಹಿಳೆಗೆ ಪಾರ್ಸೆಲ್ ತಲುಪಿಸಿದ ನಂತರ ಆರೋಪಿ ರಯೀಸ್ ಶೇಖ್ ಎಂಬಾತ ಕುಡಿಯಲು ನೀರು ಕೇಳಿದ್ದಾನೆ. ನೀರು ಕುಡಿಯುತ್ತಾ ವಿದ್ಯಾರ್ಥಿನಿಯೊಂದಿಗೆ ಸಂಭಾಷಣೆ ನಡೆಸಿ ಆಕೆಯ ಸ್ಥಳೀಯ ಸ್ಥಳ ಮತ್ತು ಕಾಲೇಜಿನ ಬಗ್ಗೆ ವಿವರಗಳನ್ನು ಕೇಳಿದ್ದಾನೆ ಎಂದು ಕೊಂಡ್ವಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾನು ನಿನ್ನ ತಿಕ್ಕಪ್ಪನಂತೆ ಮತ್ತು ಏನಾದರೂ ಸಹಾಯ ಬೇಕಾದರೂ ಹೇಳುವಂತೆ ಆರೋಪಿಯು ಯುವತಿಗೆ ಹೇಳಿದ್ದಾನೆ. ಬಳಿಕ ಆಕೆಗೆ ಫೋನ್‌ನಲ್ಲಿ ಸಂದೇಶ ಕಳಿಸಿದ್ದಾನೆ. ಬಳಿಕ ಕೂಡಲೇ ಡಿಲೀಟ್ ಮಾಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ನಂತರ ಆತ ಮತ್ತೊಂದು ಲೋಟ ನೀರು ಕೇಳಿದ್ದಾನೆ. ಆಕೆ ಆತನಿಗೆ ನೀರು ಕೊಟ್ಟಾಗ ಅವಳ ಕೈ ಹಿಡಿದು ಕಿರುಕುಳ ನೀಡಿದ್ದಾನೆ. ಯುವತಿ ಎಚ್ಚರಿಕೆ ನೀಡಿದಾಗ, ಆರೋಪಿ ಓಡಿಹೋಗಲು ಪ್ರಯತ್ನಿಸಿದನು. ಆದರೆ, ಹೌಸಿಂಗ್ ಸೊಸೈಟಿಯ ಕೆಲವರು ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ' ಎಂದು ಅವರು ಹೇಳಿದರು.

ನಂತರ ಯುವತಿ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಂತರ ಜಾಮೀನಿನ ಆತನನ್ನು ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com