ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನೂತನ ಆರ್ಥಿಕ ವರ್ಷ ಆರಂಭ: ಕೇಂದ್ರದ ಬಜೆಟ್ ಘೋಷಣೆಗಳು ಇಂದಿನಿಂದ ಜಾರಿ; ಔಷಧ, ಟೋಲ್, ಗ್ಯಾಸ್ ದರ ಹೆಚ್ಚಳ

2023-24ನೇ ಹಣಕಾಸು ವರ್ಷ ಶನಿವಾರದಿಂದ ಆರಂಭವಾಗಿದ್ದು, ಹೀಗಾಗಿ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಈ ಬಾರಿ ಕೇಂದ್ರದ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಹೊಸ ನಿಯಮಗಳು ಜಾರಿಗೆಯಾಗಿವೆ.

ನವದೆಹಲಿ: 2023-24ನೇ ಹಣಕಾಸು ವರ್ಷ ಶನಿವಾರದಿಂದ ಆರಂಭವಾಗಿದ್ದು, ಹೀಗಾಗಿ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಈ ಬಾರಿ ಕೇಂದ್ರದ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಹೊಸ ನಿಯಮಗಳು ಜಾರಿಗೆಯಾಗಿವೆ.

ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಬದಲಾವಣೆ, ಆದಾಯ ತೆರಿಗೆ ಮಿತಿ ಏರಿಕೆ, ಕೆಲವು ಮ್ಯೂಚುವಲ್‌ ಫಂಡ್‌ಗಳ ಮೇಲಿನ ಲಾಭದಲ್ಲಿ ಬದಲಾವಣೆ ಸೇರಿದಂತೆ ಈ ಬಾರಿ ಹಲವು ಹೊಸ ನಿಯಮಗಳನ್ನು ಸರ್ಕಾರ ಘೋಷಿಸಿದೆ.

ಹಾಗಾಗಿ ಆದಾಯ ತೆರಿಗೆ ಪಾವತಿದಾರರು ಈ ಬಾರಿ ಬಹಳಷ್ಟು ಹೊಸದನ್ನು ಅರಿತುಕೊಳ್ಳಬೇಕಿದೆ. ಚಿನ್ನಕ್ಕೆ ಹಾಲ್‌ಮಾರ್ಕ್ ನಂಬರ್‌ ಕಡ್ಡಾಯ ಮಾಡಲಾಗಿದ್ದು, ಫೋನ್‌ ವ್ಯಾಲೆಟ್‌ಗಳಿಗೆ ಅಂತರ್ಬಳಕೆ ಶುಲ್ಕ, ವಾಹನಗಳು ತುಟ್ಟಿ ಸೇರಿ ಮತ್ತಷ್ಟು ಬದಲಾವಣೆಯಾಗಲಿದೆ.

2020ರಲ್ಲಿ ಜಾರಿಗೆ ತಂದ ಹೊಸ ತೆರಿಗೆ ಪದ್ಧತಿ ಈವರೆಗೆ ಐಚ್ಛಿಕವಾಗಿತ್ತು. ಇಂದಿನಿಂದ ಬೈಡೀಫಾಲ್ಟ್ ಜಾರಿಯಾಗಿದೆ. ಇದರಡಿಯಲ್ಲಿ ತೆರಿಗೆದಾರ ಮಾಡುವ ಹೂಡಿಕೆಗಳನ್ನು ವಿನಾಯಿತಿಗೆ ಪರಿಗಣಿಸುವುದಿಲ್ಲ. ಪಿಎಫ್‌, ಎಲ್‌ಐಸಿ, ಶಾಲಾ ಫೀಸು, ಮನೆ ಸಾಲದ ಮೇಲಿನ ಬಡ್ಡಿ ಮುಂತಾದವುಗಳನ್ನು ಅದಾಯದಿಂದ ಕಡಿತಗೊಳಿಸಲು ಅವಕಾಶವಿಲ್ಲ. ಈ ಮೊದಲು ಈ ಹೊಸ ಪದ್ಧತಿಯನ್ನು ನಾವು ಆಯ್ಕೆ ಮಾಡಿಕೊಳ್ಳಬೇಕಿತ್ತು. ಆದರೆ ಈ ಸಾಲಿನಿಂದ ಬೇಕಿದ್ದರೆ ತೆರಿಗೆದಾರ ಹಳೆ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಹೊಸ ಪದ್ಧತಿಯಲ್ಲಿ ತನ್ನಿಂತಾನೇ ತೆರಿಗೆ ಲೆಕ್ಕಾಚಾರವಾಗುತ್ತದೆ.

  • ಕಚ್ಚಾವಸ್ತು ದುಬಾರಿ ಹಾಗೂ ಸರ್ಕಾರದ ನಿಯಮಗಳ ಪರಿಣಾಮ ಮಾರುತಿ, ಹೋಡಾ, ಟೊಯೋಟಾ, ಹ್ಯುಂಡೈ, ಟಾಟಾ, ಮರ್ಸಿಡಸ್ ಬೆಂಜ್, ಆಡಿ ಕಂಪಿಗಳ ಕಾರುಗಳ ದರದಲ್ಲಿ ಏರಿಕೆಯಾಗಲಿವೆ.
  • ದರ ನಿಯಂತ್ರಣ ಪಟ್ಟಿಯಲ್ಲಿರುವ 380ಕ್ಕೂ ಹೆಚ್ಚು ಅಗತ್ಯ ಔಷಧಗಳ ಬೆಲೆ ಶೇ.12ರಷ್ಟು ಏರಿಕೆಯಾಗಲಿವೆ. ನೋವು ನಿವಾರಕ, ಆ್ಯಂಟಿಬಯಾಟಿಕ್ಸ್, ಸೋಂಕು ನಿವಾರಕ ಸೇರಿದಂತೆ ಹಲವು ಔಷಧಗಳು ದುಬಾರಿಯಾಗಲಿವೆ.
  • ಗರಿಷ್ಠ ಬಡ್ಡಿ ದರ ಲಭಿಸುವ ಹಿರಿಯರ ಉಳಿತಾಯ ಯೋಜನೆಯಡಿ ಇರಿಸಬಹುದಾದ ಠೇವಣಿಯ ಮೊತ್ತವನ್ನು ಈಗಿರುವ 15 ಲಕ್ಷ ರೂನಿಂದ 30 ಲಕ್ಷ ರೂಗೆ ಹೆಚ್ಚಳ ಮಾಡಲಾಗಿದೆ.
  • ಆನ್ಲೈನ್ ಗೇಮ್ಸ್ ಗಳಲ್ಲಿ ರೂ.10 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಗೆದ್ದರೆ ಅದಕ್ಕೆ ಶೇ.30ರಷ್ಟು ತೆರಿಗೆ ವಿಧಿಸಲಾಗುತ್ತದೆ. ಗೆದ್ದ ಹಣದಲ್ಲಿ ಶೇ.30 ತೆರಿಗೆ ಕಳೆದು ಬಹುಮಾನ ಸಿಗುತ್ತದೆ.
  • ರೂ.5 ಲಕ್ಷಕ್ಕಿಂತ ಅಧಿಕ ಪ್ರೀಮಿಯಂ ಪಾವತಿಸುವ ಜೀವ ವಿಮೆ ಪಾಲಿಸಿಗಳ ಅವಧಿ ಮುಗಿದಾಗ ಪಾಲಿಸಿದಾರರಿಗೆ ವಿಮಾ ಮೊತ್ತಕ್ಕೆ ಇನ್ನು ಮುಂದೆ ತೆರಿಗೆ ಪಾವತಿಸಬೇಕಾಗುತ್ತದೆ. ಏ.1ರ ನಂತರ ಖರೀದಿಸುವ ಜೀವವಿಮಾ ಪಾಲಿಸಿಗಳು ಮೆಚೂರ್ ಆದ ಬಳಿಕ ಸಿಗುವಹಣಕ್ಕೆ ತೆರಿಗೆ ವಿಧಿಸಲಾಗುತ್ತದೆ.
  • ಚಿನ್ನದ ಮಾರಾಟಕ್ಕೆ ಸಂಖ್ಯೆ ಮತ್ತು ಅಲ್ಫಾಬೆಟ್'ಗಳ ಮಿಶ್ರಣ ಒಳಗೊಂಡ 6 ಅಂಕಿಗಳ ಹಾಲ್ ಮಾರ್ಕ್ ಕಡ್ಡಾಯಗೊಳಿಸಲಾಗಿದೆ. ಅಲ್ಲದೆ, ಎಲೆಕ್ಟ್ರಾನಿಕ್ ರೂಪದ ಚಿನ್ನವನ್ನು ಭೌತಿಕ ಚಿನ್ನವಾಗಿ ಪರಿವರ್ತಿಸಿದರೆ ಅಥವಾ ಭೌತಿಕ ರೂಪದಲ್ಲಿರುವ ಚಿನ್ನವನ್ನು ಎಲೆಕ್ಟ್ರಾನಿಕ್ ರೂಪಕ್ಕೆ ಬದಲಾಯಿಸಿದರೆ ಅದಕ್ಕೆ ತಗಲುವ ಕ್ಯಾಪಿಟಲ್ ಗೇನ್ಸ್'ಗೆ ತೆರಿಗೆ ವಿಧಿಸುವುದಿಲ್ಲ.
  • ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್'ಪ್ರೆಸ್ ವೇ ಗಳಲ್ಲಿ ಸಂಚರಿಸುವ ವಾಹನ ಮಾಲೀಕರು ಏ.1ರಿಂದ ಹೆಚ್ಚಿನ ಟೋಲ್ ಕಟ್ಟಬೇಕಾಗಿ ಬರಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಟೋಲ್ ಶುಲ್ಕವನ್ನು ಶೇ.7ರವರೆಗೂ ಹೆಚ್ಚಳ ಮಾಡಿದೆ. ಕಳೆದ ವರ್ಷ ಹೆದ್ದಾರಿಗಳ ಟೋಲ್ ಮೂಲಕ ರೂ.33881 ಕೋಟಿ ಸಂಗ್ರಹ ಮಾಡಲಾಗಿತ್ತು. ಇದು ಹಿಂದಿನ ವರ್ಷಕ್ಕಿಂತ ಶೇ.21ರಷ್ಟು ಹೆಚ್ಚಳವಾಗಿದೆ.
  • ಈ ಬಾರಿ ಹಿರಿಯರ ುಳಿತಾಯದಲ್ಲಿ ಬಾರಿ ಅನುಕೂಲ ಮಾಡಿಕೊಡಲಾಗಿದೆ. ಉಳಿತಾಯ ಯೋಜನೆಯಡಿ ಇರಿಸಬಹುದಾದ ಠೇವಣಿಯ ಮೊತ್ತವನ್ನು ಈಗಿರುವ 15 ಲಕ್ಷ ರೂ.ನಿಂದ 30 ಲಕ್ಷ ರೂಗೆ ಹೆಚ್ಚಳ ಮಾಡಲಾಗಿದೆ. ಈ ಯೋಜನೆಯಲ್ಲಿ ಹಿರಿಯ ನಾಗರೀಕರು ಠೇವಣಿ ಇರಿಸಿದರೆ ಅದಕ್ಕೆ ಸರ್ಕಾರ ಆತ್ಯಂತ ಗರಿಷ್ಠ ಬಡ್ಡಿ ನೀಡುತ್ತದೆ.
  • ಯಾವುದೇ ಯುಪಿಐ ವ್ಯಾಲೆಟ್ ಬಳಸಿಕೊಂಡು ಪಿಪಿಐಗೆ ಮಾಡುವ ರೂ.2000ಗಿಂತ ಹೆಚ್ಚಿನ ವಹಿವಾಟಿಗೆ ಇನ್ನು ಮುಂದೆ ಶೇ.1.1ರಷ್ಟು ಅಂತರ್ಬಳಕೆ ಶುಲ್ಕವನ್ನು ವಿಧಿಸಲಾಗುತ್ತದೆ. ಎಲ್ಲಾ ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆ, ಯುಪಿಐನಿಂದ ಮಾಡುವ ಇತರೆ ಖರೀದಿಗೆ ಈ ಶುಲ್ಕ ಅನ್ವಯವಾಗದು. ಆದರೆ, ಇದು ಗ್ರಾಹಕರಿಗೆ ಹೊರೆ ಆಗದು. ವ್ಯಾಪಾರಿಗಳಿಗೆ ಅನ್ವಯವಾಗಲಿದೆ.

Related Stories

No stories found.

Advertisement

X
Kannada Prabha
www.kannadaprabha.com