ಮಹಾರಾಷ್ಟ್ರ: ಹಳಿ ತಪ್ಪಿದ ಸರಕು ಸಾಗಣೆ ರೈಲಿನ ಇಂಜಿನ್

ಸರಕುಸಾಗಣೆ ರೈಲಿನ ಇಂಜಿನ್ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಗೋಧ್ನಿ ಕಾರ್ಡ್ ಲೈನ್ ಬಳಿ ಹಳಿ ತಪ್ಪಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಹಳಿ ತಪ್ಪಿದ ರೈಲು (ಸಾಂಕೇತಿಕ ಚಿತ್ರ)
ಹಳಿ ತಪ್ಪಿದ ರೈಲು (ಸಾಂಕೇತಿಕ ಚಿತ್ರ)
Updated on

ನಾಗ್ಪುರ: ಸರಕುಸಾಗಣೆ ರೈಲಿನ ಇಂಜಿನ್ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಗೋಧ್ನಿ ಕಾರ್ಡ್ ಲೈನ್ ಬಳಿ ಹಳಿ ತಪ್ಪಿದೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಘಟನೆಯ ಹಿನ್ನೆಲೆ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಖಾಲಿ ಇದ್ದ ಸರಕು ಸಾಗಣೆ ರೈಲಿನ ಇಂಜಿನ್ ಹಳಿ ತಪ್ಪಿದ್ದು ರಾತ್ರಿ 8:30 ಕ್ಕೆ ಈ ಘಟನೆ ವರದಿಯಾಗಿದೆ. ರೈಲ್ವೆ ಭಾಷೆಯಲ್ಲಿ ಕಾರ್ಡ್ (chord) ಎಂದರೆ ಎರಡು ಪ್ರತ್ಯೇಕ ಮಾರ್ಗಗಳನ್ನು ಸಂಪರ್ಕಿಸುವ ಸಣ್ಣ ಸಾಲು ಎಂಬುದಾಗಿದೆ.

ಟ್ರ್ಯಾಕ್ ದುರಸ್ತಿ ಕಾಮಗಾರಿ ನಡೆಯುತ್ತಿದ್ದು ರೈಲುಗಳ ಸಂಚಾರಕ್ಕೆ ಅಡ್ಡಿ ಉಂಟಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com