ಮೆಡಿಕಲ್‌ ಶಾಪ್‌ಗೆ ನುಗ್ಗಿ ಸಿಬ್ಬಂದಿ ಮೇಲೆ ʼಕೋಯ್ತಾ ಗ್ಯಾಂಗ್‌ʼ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ, ವಿಡಿಯೋ ವೈರಲ್

ಮುಂಬೈನ ಮೆಡಿಕಲ್ ಶಾಪ್ ಮೇಲೆ ಸ್ಥಳೀಯ ಕುಖ್ಯಾತ ದರೋಡೆ ಗ್ಯಾಂಗ್ ಕೋಯ್ತಾ ಗ್ಯಾಂಗ್‌ ದಾಳಿ ಮಾಡಿದ್ದು, ಬೆದರಿಕೆ ಹಾಕಿದ್ದಾರೆ.
ಕೋಯ್ತಾ ಗ್ಯಾಂಗ್ ದಾಳಿ
ಕೋಯ್ತಾ ಗ್ಯಾಂಗ್ ದಾಳಿ

ಮುಂಬೈ: ಮುಂಬೈನ ಮೆಡಿಕಲ್ ಶಾಪ್ ಮೇಲೆ ಸ್ಥಳೀಯ ಕುಖ್ಯಾತ ದರೋಡೆ ಗ್ಯಾಂಗ್ ಕೋಯ್ತಾ ಗ್ಯಾಂಗ್‌ ದಾಳಿ ಮಾಡಿದ್ದು, ಬೆದರಿಕೆ ಹಾಕಿದ್ದಾರೆ.

ಮಹಾರಾಷ್ಟ್ರದ ಪಿಂಪ್ರಿ-ಚಿಂಚ್ವಾಡ್ ನಲ್ಲಿ ಈ ಘಟನೆ ನಡೆದಿದ್ದು, ಮಚ್ಚು ಹಿಡಿದು ಮೆಡಿಕಲ್‌ ಶಾಪ್‌ ಸಿಬ್ಬಂದಿ ಮೇಲೆ ಗುಂಪೊಂದು ಹಲ್ಲೆಗೈದಿದ್ದಾರೆ. ಮೆಡಿಕಲ್‌ ಶಾಪ್‌ಗೆ ಇದ್ದಕ್ಕಿದ್ದಂತೆ ತಲವಾರು, ಕತ್ತಿ ಹಿಡಿದುಕೊಂಡು 5-6 ಜನ ನುಗ್ಗಿದ್ದಾರೆ. ಮೆಡಿಕಲ್‌ ಸಿಬ್ಬಂದಿ ಮೇಲೆ ಹಲ್ಲೆಗೈದಿದ್ದಾರೆ. ಆ ಬಳಿಕ ಮೆಡಿಕಲ್‌ ಗೆ ಹಾನಿ ಮಾಡಿದ್ದಾರೆ. ಕತ್ತಿಯಿಂದ ಒಡೆದು ಸಾಮಾಗ್ರಿಗಳನ್ನು ಧ್ವಂಸಗೈದು ಬೆದರಿಕೆ ಹಾಕಿದ್ದಾರೆ ಎಂದು ಘಟನೆ ಬಗ್ಗೆ ಪೊಲೀಸರು ಹೇಳಿದ್ದಾರೆ.

ಮೆಡಿಕಲ್‌ ಶಾಪ್‌ ಮೇಲೆ ದಾಳಿ ನಡೆಸುವ ಮುನ್ನ ಕಾಮ್‌ಗರ್‌ ನಗರ ಪ್ರದೇಶದಲ್ಲಿ ಕೆಲ ವಾಹನಗಳನ್ನು ಈ ಗುಂಪು ಹಾನಿ ಮಾಡಿದೆ. ಮೆಡಿಕಲ್ ಶಾಪ್ ಮೇಲೆ ದಾಳಿ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಹಿಂದೆ ಜನವರಿಯಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಜನರಲ್ಲಿ ಭೀತಿಯನ್ನು ಹುಟ್ಟಿಸುವ ʼ ಕೋಯ್ತಾ ಗ್ಯಾಂಗ್‌ʼ ಸದಸ್ಯರ ಹಾವಳಿಯನ್ನು ಮಟ್ಟಹಾಕಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದರು. ಆ ಬಳಿಕವೂ ʼಕೋಯ್ತಾ ಗ್ಯಾಂಗ್‌ʼ ಅಟ್ಟಹಾಸ ಮುಂದುವರೆದಿದೆ. ಇತ್ತೀಚೆಗೆ ಇದೇ ರೀತಿಯ ಘಟನೆ ಪುಣೆಯಲ್ಲೂ ನಡೆದಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com