'ನಾನು ಸಿಎಂ ಪದವಿ ಬಿಡಬೇಕೆಂದಿದ್ದೇನೆ, ಆದರೆ ಸಿಎಂ ಪದವಿ ನನ್ನನ್ನು ಬಿಡುತ್ತಿಲ್ಲ': ಹೀಗೆ ಹೇಳಿದ್ದು ಯಾರು ಅಂದರೆ...

ಮಹಿಳೆಯೊಬ್ಬರು ತಮ್ಮನ್ನು ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಕೇಳಿಕೊಂಡಿದ್ದನ್ನು ಸ್ಮರಿಸಿದ್ದು, ನಾನು ಸಿಎಂ ಪದವಿ ಬಿಡಬೇಕೆಂದಿದ್ದರೂ, ಸಿಎಂ ಪದವಿ ನನ್ನ ಬಿಡುತ್ತಿಲ್ಲ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಕಾಂಗ್ರೆಸ್ ಲೋಗೋ
ಕಾಂಗ್ರೆಸ್ ಲೋಗೋ

ಜೈಪುರ: ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಮಹಿಳೆಯೊಬ್ಬರು ತಮ್ಮನ್ನು ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಕೇಳಿಕೊಂಡಿದ್ದನ್ನು ಸ್ಮರಿಸಿದ್ದು, ನಾನು ಸಿಎಂ ಪದವಿ ಬಿಡಬೇಕೆಂದಿದ್ದರೂ, ಸಿಎಂ ಪದವಿ ನನ್ನ ಬಿಡುತ್ತಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅಶೋಕ್ ಗೆಹ್ಲೋಟ್, ಮಹಿಳೆಯೊಬ್ಬರೊಂದಿಗೆ ಮಾತನಾಡುತ್ತಿದ್ದದ್ದನ್ನು ಸ್ಮರಿಸಿದ್ದು, ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಆಕೆ ಕೇಳಿದರು. "ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ, ಆದರೆ ಹಲವು ಬಾರಿ ನಾನು ಸಿಎಂ ಹುದ್ದೆ ಬಿಟ್ಟುಬಿಡಬೇಕು ಅಂತ ಯೋಚನೆ ಮಾಡಿದ್ದೇನೆ, ಆದರೆ ಸಿಎಂ ಪದವಿ ನನ್ನನ್ನು ಬಿಡುತ್ತಿಲ್ಲ" ಎಂದು ಹೇಳಿದ್ದಾಗಿ ಗೆಹ್ಲೋಟ್ ತಿಳಿಸಿದ್ದಾರೆ 

ಇದೇ ವೇಳೆ ಕಾಂಗ್ರೆಸ್ ವರಿಷ್ಠರು ಏನು ತೀರ್ಮಾನಿಸುತ್ತಾರೋ ಅದನ್ನು ಒಪ್ಪಿಕೊಳ್ಳುವುದಾಗಿಯೂ ಗೆಹ್ಲೋಟ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com