ಸದ್ಯಕ್ಕೆ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪರ್ಯಾಯವಿಲ್ಲ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್

ದೇಶದಲ್ಲಿ ಸದ್ಯದ ಮಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯವಾಗಿ ಯಾರೂ ಇಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.
ಅಜಿತ್ ಪವಾರ್
ಅಜಿತ್ ಪವಾರ್

ಮುಂಬೈ: ದೇಶದಲ್ಲಿ ಸದ್ಯದ ಮಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯವಾಗಿ ಯಾರೂ ಇಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾಡಿದ ಅವರು ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಪರ್ಯಾಯವಾಗಿ ಯಾವ ನಾಯಕರೂ ಇಲ್ಲ ಎಂದರು.

ರಾಷ್ಟ್ರೀಯ ಹಿತಾಸಕ್ತಿಗಳನ್ನು ಯಾರು ರಕ್ಷಣೆ ಮಾಡುತ್ತಾರೆ, ಯಾರ ಕೈಯಲ್ಲಿ ದೇಶ ಸುರಕ್ಷಿತ ಮತ್ತು ಬಲವಾಗಿರುತ್ತದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ವರ್ಚಸನ್ನು ಯಾರು ಹೆಚ್ಚಿಸುತ್ತಾರೆ ಎಂಬ ಅಂಶಗಳು ಈ ವಿಷಯದಲ್ಲಿ ಮುಖ್ಯವಾಗುತ್ತವೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರಿಗೆ ಸದ್ಯಕ್ಕೆ ದೇಶದಲ್ಲಿ ಯಾವುದೇ ಪರ್ಯಾಯವಿಲ್ಲ. ಇಂತಹ ನಿರ್ಧಾರವನ್ನು ವಿವಿಧ ಅಂಶಗಳನ್ನು ಆಧರಿಸಿ ತೆಗೆದುಕೊಳ್ಳಲಾಗಿದೆ ಮತ್ತು ಕೇವಲ ಒಂದು ಅಥವಾ ಎರಡು ವಿಷಯಗಳಿಂದಲ್ಲ ಎಂದು ಪವಾರ್ ಹೇಳಿದರು.

ನಾವು ಮೂರು ರಾಜ್ಯಗಳಲ್ಲಿ (ಇತ್ತೀಚಿನ ವಿಧಾನಸಭಾ ಚುನಾವಣೆಯ) ಫಲಿತಾಂಶಗಳನ್ನು ನೋಡಿದ್ದೇವೆ , ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಚುನಾವಣೆಯಲ್ಲಿ ಮೊದಲು ಒಂದು ಊಹೆಯಿತ್ತು, ಆದರೆ ಕೆಲವು ಫಲಿತಾಂಶಗಳು ಒಂದೇ ಆಗಿರುತ್ತವೆ ಎಂದು ಅರ್ಥವಲ್ಲ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com