ಮಹಾರಾಷ್ಟ್ರ: ಟವರ್‌ ವ್ಯಾಗನ್‌ ಡಿಕ್ಕಿ ಹೊಡೆದು ನಾಲ್ವರು ರೈಲ್ವೆ ಟ್ರ್ಯಾಕ್‌ಮ್ಯಾನ್‌ಗಳು ಸಾವು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಸೋಮವಾರ ಟವರ್ ವ್ಯಾಗನ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ರೈಲ್ವೆ ಟ್ರ್ಯಾಕ್‌ಮೆನ್‌ಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನಾಸಿಕ್: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಸೋಮವಾರ ಟವರ್ ವ್ಯಾಗನ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ರೈಲ್ವೆ ಟ್ರ್ಯಾಕ್‌ಮೆನ್‌ಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟವರ್ ವ್ಯಾಗನ್ ಅನ್ನು ಎಲೆಕ್ಟ್ರಿಫೈಡ್ ವಿಭಾಗಗಳಲ್ಲಿ ಅತಿ ಎತ್ತರದಲ್ಲಿರುವ ಉಪಕರಣಗಳ ನಿರ್ವಹಣೆಗಾಗಿ ಬಳಸಲಾಗುತ್ತದೆ. ಮಧ್ಯ ರೈಲ್ವೆಯ ಲಾಸಲ್‌ಗಾಂವ್ ಮತ್ತು ಉಗಾಂವ್ ನಿಲ್ದಾಣಗಳ ನಡುವೆ ಇಂದು ಬೆಳಗ್ಗೆ 5.45 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ರ್ಯಾಕ್‌ಮೆನ್‌ಗಳು ಕೆಲಸ ಮಾಡುತ್ತಿದ್ದಾಗ ರಾಂಗ್ ಸೈಡ್‌ನಿಂದ ಬಂದ ಟವರ್ ವ್ಯಾಗನ್ ಅವರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ಕುರಿತು ಮಾಹಿತಿ ಪಡೆದ ಲಾಸಲ್‌ಗಾಂವ್‌ ಪೊಲೀಸ್‌ ತಂಡ ಸ್ಥಳಕ್ಕೆ ಧಾವಿಸಿದೆ. ಪೊಲೀಸರು ವ್ಯಾಗನ್ ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಮೃತರನ್ನು ಸಂತೋಷ್ ಭೌರಾವ್ ಕೇದಾರೆ(38), ದಿನೇಶ್ ಸಹದು ದಾರಾಡೆ(35), ಕೃಷ್ಣ ಆತ್ಮರಾಮ್ ಅಹಿರೆ(40) ಮತ್ತು ಸಂತೋಷ್ ಸುಖದೇವ್ ಶಿರ್ಸಾತ್(38) ಎಂದು ಗುರುತಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com