ಬಿಬಿಸಿ ಇಂಡಿಯಾ ಕಚೇರಿಗಳಲ್ಲಿ ಐಟಿ 'ಸಮೀಕ್ಷೆ' 2ನೇ ದಿನವೂ ಮುಂದುವರಿಕೆ

ಬಿಬಿಸಿ ಇಂಡಿಯಾದ ಮೇಲೆ ಆದಾಯ ತೆರಿಗೆ ಇಲಾಖೆ ಸಮೀಕ್ಷೆ ಕಾರ್ಯಾಚರಣೆ ಎರಡನೇ ದಿನವೂ ಮುಂದುವರೆದಿದೆ. 
ಬಿಬಿಸಿ ಇಂಡಿಯಾ ಕಚೇರಿಯ ಬಳಿ ಮಾಧ್ಯಮ ಪ್ರತಿನಿಧಿಗಳು
ಬಿಬಿಸಿ ಇಂಡಿಯಾ ಕಚೇರಿಯ ಬಳಿ ಮಾಧ್ಯಮ ಪ್ರತಿನಿಧಿಗಳು
Updated on

ನವದೆಹಲಿ: ಬಿಬಿಸಿ ಇಂಡಿಯಾದ ಮೇಲೆ ಆದಾಯ ತೆರಿಗೆ ಇಲಾಖೆ ಸಮೀಕ್ಷೆ ಕಾರ್ಯಾಚರಣೆ ಎರಡನೇ ದಿನವೂ ಮುಂದುವರೆದಿದೆ. 

ಎಲೆಕ್ಟ್ರಾನಿಕ್, ಕಾಗದ ಆಧಾರದ ಆರ್ಥಿಕ ಡೇಟಾಗಳ ಪ್ರತಿಗಳನ್ನು ಇಲಾಖೆಯ ಅಧಿಕಾರಿಗಳು ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
 
ತೆರಿಗೆ ಇಲಾಖೆ ಮಂಗಳವಾರದಂದು ಬಿಬಿಸಿಯ ದೆಹಲಿ ಹಾಗೂ ಮುಂಬೈ ಕಚೇರಿಗಳಲ್ಲಿ ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಾರಂಭಿಸಿತ್ತು. ಮಂಗಳವಾರ ಬೆಳಿಗ್ಗೆ 11:30 ರ ವೇಳೆಗೆ ಬಿಬಿಸಿ ಕಚೇರಿಗೆ ತೆರಳಿದ ಅಧಿಕಾರಿಗಳು ಇನ್ನೂ ಕಾರ್ಯಾಚರಣೆ ಮುಂದುವರೆಸಿದ್ದಾರೆ. 

ತೆರಿಗೆ ಅಧಿಕಾರಿಗಳು ಬಿಬಿಸಿಯ ಆರ್ಥಿಕ ಹಾಗೂ ಇನ್ನಿತರ ವಿಭಾಗದ ಸಿಬ್ಬಂದಿಗಳೊಂದಿಗೆ ಮಾತನಾಡುತ್ತಿದ್ದು, ಬೇರೆ ಸಿಬ್ಬಂದಿಗಳು ಹಾಗೂ ಪತ್ರಕರ್ತರಿಗೆ ಕಚೇರಿಯಿಂದ ವಾಪಸ್ ತೆರಳುವುದಕ್ಕೆ ಅನುಮತಿ ನೀಡಿದರು.
 
ಕಾರ್ಯಾಚರಣೆಯ ಭಾಗವಾಗಿ ಕೆಲವು ಕಂಪ್ಯೂಟರ್ ಪೆರಿಫೆರಲ್ಸ್ ಮತ್ತು ಮೊಬೈಲ್ ಫೋನ್‌ಗಳನ್ನು ಕ್ಲೋನ್ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com