ಉತ್ತರಾಖಂಡದಲ್ಲೂ ಕೊರೋನಾ ಹೊಸ ರೂಪಾಂತರಿ XBB 1.5 ಪತ್ತೆ

ಅಮೆರಿಕದಲ್ಲಿ ಕೋವಿಡ್ ಉಲ್ಬಣಕ್ಕೆ ಕಾರಣವಾದ COVID-19 ಹೊಸ ತಳಿ ಎಕ್ಸ್​ಬಿಬಿ 1.5  ವೈರಸ್ ಉತ್ತರಾಖಂಡದಲ್ಲೂ ವರದಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಕ್ಸ್​ಬಿಬಿ 1.5 ಪ್ರಕರಣಗಳ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಡೆಹ್ರಾಡೂನ್‌: ಅಮೆರಿಕದಲ್ಲಿ ಕೋವಿಡ್ ಉಲ್ಬಣಕ್ಕೆ ಕಾರಣವಾದ COVID-19 ಹೊಸ ತಳಿ ಎಕ್ಸ್​ಬಿಬಿ 1.5  ವೈರಸ್ ಉತ್ತರಾಖಂಡದಲ್ಲೂ ವರದಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಕ್ಸ್​ಬಿಬಿ 1.5 ಪ್ರಕರಣಗಳ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

ಇಂದು ಉತ್ತರಾಖಂಡದಲ್ಲಿ ಈ ಹೊಸ ಪ್ರಕರಣ ಪತ್ತೆಯಾಗಿದ್ದು, ಇದಕ್ಕೂ ಮುನ್ನ ಗುಜರಾತ್‌ನಲ್ಲಿ ಮೂರು, ಕರ್ನಾಟಕ, ತೆಲಂಗಾಣ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ ಎಂದು ಭಾರತೀಯ SARS-CoV-2 ಜೀನೋಮಿಕ್ಸ್ ಒಕ್ಕೂಟ(INSACOG) ತಿಳಿಸಿದೆ.

ಎಕ್ಸ್​ಬಿಬಿ 1.5 ತಳಿಯು ಓಮಿಕ್ರಾನ್ ನ ಎಕ್ಸ್​ಬಿಬಿ ರೂಪಾಂತರದ ಸಂಬಂಧಿಯಾಗಿದ್ದು, ಒಮಿಕ್ರಾನ್‌ ನ ಸಬ್‌ವೇರಿಯೆಂಟ್‌ ಎಕ್ಸ್​​​ಬಿಬಿ 1.5 ಪ್ರಕರಣವು ಡಿಸೆಂಬರ್‌ 31 ರಂದು ಗುಜರಾತ್‌ನಲ್ಲಿ ಮೊದಲ ಬಾರಿಗೆ ವರದಿಯಾಗಿತ್ತು.

ಈಗಾಗಲೇ ಅಮೆರಿಕದಲ್ಲಿ ಶೇ. 40.5 ರಷ್ಟು ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿರುವ ಎಕ್ಸ್​​ಬಿಬಿ 1.5 ರೂಪಾಂತರಿ ಭಾರತದಲ್ಲೂ ಪತ್ತೆಯಾಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.

ಈ ಮಧ್ಯೆ XBB.1.5 ರೂಪಾಂತರಿಯು ಮೇಲ್ನೋಟಕ್ಕೆ ಅಷ್ಟೊಂದು ಅಪಾಯಕಾರಿಯಲ್ಲ ಎಂಬುದಾಗಿ ತಜ್ಞರು ಹೇಳಿದ್ದಾರೆ. ಎಕ್ಸ್‌ಬಿಬಿ 1.5 ಹೊಸ ಕೋವಿಡ್ ರೂಪಾಂತರದ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ. ಏಕೆಂದರೆ, ಭಾರತದಲ್ಲಿ ಶೇ. 90ರಷ್ಟು ಜನರು ಲಸಿಕೆ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com