2 ದಿನಗಳ ಪ್ರವಾಸ: ಚೆಗುವೆರಾ ಮಗಳು, ಮೊಮ್ಮಗಳು ಭಾರತಕ್ಕೆ ಆಗಮನ

ಕ್ಯೂಬಾದ ಕ್ರಾಂತಿಕಾರಿ ನಾಯಕ 'ಚೆ' ಗುವೇರಾ ಅವರ ಪುತ್ರಿ ಅಲೀಡಾ ಗುವೇರಾ ಅವರು 2 ದಿನಗಳ ಭಾರತ ಭೇಟಿ ನಿಮಿತ್ತ ಇಂದು ಚೆನ್ನೈಗೆ ಆಗಮಿಸಿದ್ದಾರೆ.
ಚೆ ಗುವೇರಾ ಪುತ್ರಿ
ಚೆ ಗುವೇರಾ ಪುತ್ರಿ

ಚೆನ್ನೈ: ಕ್ಯೂಬಾದ ಕ್ರಾಂತಿಕಾರಿ ನಾಯಕ 'ಚೆ' ಗುವೇರಾ ಅವರ ಪುತ್ರಿ ಅಲೀಡಾ ಗುವೇರಾ ಅವರು 2 ದಿನಗಳ ಭಾರತ ಭೇಟಿ ನಿಮಿತ್ತ ಇಂದು ಚೆನ್ನೈಗೆ ಆಗಮಿಸಿದ್ದಾರೆ.

 ಸಿಪಿಐ(ಎಂ) ರಾಜ್ಯ ಘಟಕ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಂಗಳವಾರ ಎರಡು ದಿನಗಳ ಭೇಟಿಗಾಗಿ ಚೆಗುವೆಪಾ ಅವರ ಮಗಳು ಅಲೀಡಾ ಗುವೇರಾ ಮತ್ತು  ಅಲೀಡಾ ಅವರ ಪುತ್ರಿ ಎಸ್ಟೆಫಾನಿಯಾ ಗುವೇರಾ ಆಗಮಿಸಿದ್ದಾರೆ. ಅವರಿಗೆ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿ ಬಾಲಕೃಷ್ಣನ್ ಮತ್ತು ಹಿರಿಯ ನಾಯಕ ಜಿ ರಾಮಕೃಷ್ಣನ್ ಮತ್ತಿತರರು ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತವನ್ನು ನೀಡಿದರು. 

ಸಿಪಿಐ(ಎಂ) ಪ್ರಕಾರ, ತಿರುವನಂತಪುರದಿಂದ ಚೆನ್ನೈಗೆ ಆಗಮಿಸಿದ ಅಲೆಡಾ ಅವರು ಮಂಗಳವಾರ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಮತ್ತು ಬುಧವಾರ ಸಾರ್ವಜನಿಕ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಾರ್ವಜನಿಕ ಸಮಾರಂಭದಲ್ಲಿ ಡಿಎಂಕೆ ಸಂಸದೆ ಕನಿಮೊಳಿ ಮತ್ತು ವಿಸಿಕೆ ಸಂಸ್ಥಾಪಕ ಮತ್ತು ಲೋಕಸಭಾ ಸದಸ್ಯ ತೊಲ್ ತಿರುಮಾವಲವನ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಅಲೀಡಾ ಅವರ ಪುತ್ರಿ ಎಸ್ಟೆಫಾನಿಯಾ ಗುವೇರಾ ಅವರನ್ನು ಸಹ ಸಮಾರಂಭದಲ್ಲಿ ಅಭಿನಂದಿಸಲಾಗುವುದು ಎಂದು ತಿಳಿದುಬಂದಿದೆ.

ಬಾಗೇಪಲ್ಲಿಗೆ ಚೆಗುವೆರಾ ಕುಟುಂಬ
ಇನ್ನು ಚೆಗುವಾರ ಅವರ ಮಗಳು ಮಕ್ಕಳ ವೈದ್ಯೆ ಡಾ.ಅಲಿಡಾ ಚೆಗೆವಾರ ಮತ್ತು ಮೊಮ್ಮಗಳು ಅರ್ಥಶಾಸ್ತ್ರಜ್ಞೆ ದ ಎಸ್ತಿಫಾನಿಯಾ ಮಾಚಿನ್ ಚೆಗೆವಾರ ಅವರು ಜ.19 ರಂದು ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.  ಇದರ ಪೂರ್ವಭಾವಿಯಾಗಿ ಸಿದ್ಧತಾ ಸಭೆಯನ್ನು ಜ.17ರ ಮಧ್ಯಾಹ್ನ 2 ಗಂಟೆಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೌಹಾರ್ದ ಕರ್ನಾಟಕದ ಹಾಗೂ ಪ್ರಗತಿಪರ ಸಂಘಟನೆಗಳ ಸಂಚಾಲಕ ಎಂ.ಪಿ.ಮುನಿವೆಂಕಟಪ್ಪ ತಿಳಿಸಿದ್ದಾರೆ.

ಚೇಳೂರು, ಗುಡಿಬಂಡೆ ತಾಲ್ಲೂಕುಗಳ ಸಮಾನ ಮನಸ್ಕರು, ಬುದ್ದಿಜೀವಿಗಳು, ಸಂಘ-ಸಂಸ್ಥೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸುವಂತೆ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com