ರೀಲ್ಸ್ ಗಾಗಿ ಐಫೋನ್ ಖರೀದಿಸಲು ತಮ್ಮ 8 ತಿಂಗಳ ಮಗುವನ್ನೇ ಮಾರಾಟ ಮಾಡಿದ ದಂಪತಿ!

ದಂಪತಿ, ರೀಲ್ಸ್ ಗಾಗಿ ಐಫೋನ್ 14 ಖರೀದಿಸಲು ತಮ್ಮ ಎಂಟು ತಿಂಗಳ ಮಗುವನ್ನೇ ಮಾರಾಟ ಮಾಡಿದ ಅಮಾನವೀಯ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಇನ್ನೂ ಭಯಾನಕ ಸಂಗತಿಯೆಂದರೆ ಅವರು ದೇಶಾದ್ಯಂತ ತಮ್ಮ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲ್ಕತ್ತಾ: ದಂಪತಿ, ರೀಲ್ಸ್ ಗಾಗಿ ಐಫೋನ್ 14 ಖರೀದಿಸಲು ತಮ್ಮ ಎಂಟು ತಿಂಗಳ ಮಗುವನ್ನೇ ಮಾರಾಟ ಮಾಡಿದ ಅಮಾನವೀಯ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಇನ್ನೂ ಭಯಾನಕ ಸಂಗತಿಯೆಂದರೆ ಅವರು ದೇಶಾದ್ಯಂತ ತಮ್ಮ ಪ್ರಯಾಣದ Instagram ರೀಲ್‌ಗಳನ್ನು ಚಿತ್ರೀಕರಿಸಲು ಈ ಐಫೋನ್ ಖರೀದಿಸಿದ್ದಾರೆ.

ಕೋಲ್ಕತ್ತಾ ಬಳಿಯ ಪಾನಿಹಟಿಯ ಗಂಗಾನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪಶ್ಚಿಮ ಬಂಗಾಳ ಪೊಲೀಸರು ತಿಳಿಸಿದ್ದಾರೆ.

ಮಗುವಿನ ತಾಯಿ ಸತಿ ಘೋಷ್ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ, ತಲೆಮರೆಸಿಕೊಂಡಿರುವ ತಂದೆ, ಜಯದೇವ್ ಘೋಷ್ ತೀವ್ರ ಶೋಧ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಮನೆಯಲ್ಲಿ ವಾರಗಟ್ಟಲೆ ಮಗು ಕಾಣಿಸದ ಹಿನ್ನೆಲೆಯಲ್ಲಿ ದಂಪತಿಗಳ ಮೇಲೆ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಚಾರಣೆಯ ನಂತರ, ಮಹಿಳೆ ಅಂತಿಮವಾಗಿ ದಿಘಾ ಮತ್ತು ಮಂದರ್ಮೋನಿಯಂತಹ ಸ್ಥಳಗಳಿಗೆ ಪ್ರಯಾಣಿಸಲು ಮತ್ತು Instagram ರೀಲ್ಸ್ ಶೂಟ್ ಮಾಡಲು iPhone 14 ಅನ್ನು ಖರೀದಿಸಲು ಹಣಕ್ಕಾಗಿ ಮಗುವನ್ನು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡರು.

ಈ ಹಿಂದೆ ತಮ್ಮ ಏಳು ವರ್ಷದ ಮಗಳನ್ನು ಮಾರಾಟ ಮಾಡಲು ತಂದೆ ಯತ್ನಿಸಿದ್ದರು ಎಂಬ ಅಂಶವೂ ಇದೇ ವೇಳೆ ಬಹಿರಂಗವಾಗಿದೆ.

ಮಾನವ ಕಳ್ಳಸಾಗಣೆ ಆರೋಪದ ಮೇಲೆ ಮಗುವನ್ನು ಖರೀದಿಸಿದ ದಂಪತಿ ಮತ್ತು ಮಹಿಳೆಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಪ್ರಿಯಾಂಕಾ ಘೋಷ್‌ನಿಂದ ಮಗುವನ್ನು ರಕ್ಷಿಸಿದ್ದು, ವಿವರವಾದ ತನಿಖೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com