ಅಪ್ರಾಪ್ತೆಯ ಬಾಯಿಗೆ ಮರದ ಕೆಂಡ ಹಾಕಿ ವಿಧ್ವಂಸಕ ಕೃತ್ಯ: ಆಶ್ರಮದ ಗುರು ಸೇರಿ ನಾಲ್ವರ ಬಂಧನ

ಮಹಾಸಮುಂಡ್: ಅಪ್ರಾಪ್ತ ಬಾಲಕಿಯನ್ನು ಅಮಾನುಷವಾಗಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಆರೋಪಿ ಆಶ್ರಮ ಗುರು ರಮೇಶ್ ಠಾಕೂರ್ ನನ್ನು ಬಂಧಿಸಲಾಗಿದೆ.
17 ವರ್ಷದ ಅಪ್ರಾಪ್ತ ಬಾಲಕಿ ಜಾಗೃತಿ ಸಿನ್ಹಾ ಎಂಬಾಕೆಗೆ ಅಕ್ರಮ ಆಶ್ರಮದಲ್ಲಿ 3 ಸೇವಾದಾರರು ನಿರ್ದಯವಾಗಿ ಥಳಿಸಿದ್ದಾರೆ. ಸುಡುವ ಮರದ ತುಂಡನ್ನು ಆಕೆಯ ಬಾಯಿಗೆ ತುರುಕಲಾಗಿತ್ತು. ತದನಂತರ ದೇಹದ ಇತರ ಭಾಗಗಳನ್ನು ಅದೇ ಮರದಿಂದ ಸುಡಲಾಯಿತು. ಪಟೇರಪಾಲಿ ಬಾಗ್ಬಹ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಜೈ ಗುರುದೇವ್ ಮಾನಸ್ ಆಶ್ರಮದಲ್ಲಿ ಈ ಘಟನೆ ನಡೆದಿದ್ದು ಅಲ್ಲಿ ಆಶ್ರಮದ ಗುರು ರಮೇಶ್ ಠಾಕೂರ್ ಕೂಡ ಇದ್ದರು ಎನ್ನಲಾಗಿದೆ. ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಕೆಲ ಗುರುಮಾತೆಯೂ ಇದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಭೋಗ್ ನೈವೇದ್ಯದ ವಿವಾದದ ಹಿನ್ನೆಲೆಯಲ್ಲಿ ಮೂವರು ಸೇವಕರು ಜಾಗೃತಿ ಅವರ ಬಾಯಿಗೆ ಸಡುವ ಮರದ ತುಂಡನ್ನು ಬಾಯಿಗೆ ತುರುಕಿದ್ದರು. ಆರೋಪಿ ಬಾಲಕಿಯ ಬಾಯಿ, ಗಂಟಲು, ನಾಲಿಗೆ ಅಲ್ಲದೆ ದೇಹದ ಇತರ ಭಾಗಗಳನ್ನು ಸುಡಲಾಗಿದ್ದು ಇಡೀ ಘಟನೆ ಫೆಬ್ರವರಿ 24ರಂದು ನಡೆದಿತ್ತು. ಈ ಸಂಬಂಧ ಸಂತ್ರಸ್ತೆ ಫೆಬ್ರವರಿ 28ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಅಪ್ರಾಪ್ತೆಯ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ನಡೆಯುತ್ತಿದೆ
ಅಪ್ರಾಪ್ತ ಬಾಲಕಿಗೆ ಆರಂಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ಅವರ ಸ್ಥಿತಿ ಚಿಂತಾಜನಕವಾಗಿದೆ. ಸಂತ್ರಸ್ತೆಯ ಸಹೋದರ ಮನೀಶ್ ಸಿನ್ಹಾ ತಿಳಿಸಿದ್ದಾರೆ. ಸಂತ್ರಸ್ತ ಬಾಲಕಿ ಕುಟುಂಬವು ಕಳೆದ ಜನವರಿಯಿಂದ ಆಶ್ರಮದೊಂದಿಗೆ ಸಂಬಂಧ ಹೊಂದಿತ್ತು. ಇದರ ನಂತರ, ಫೆಬ್ರವರಿ 20ರಂದು, ಇಡೀ ಕುಟುಂಬ(ತಾಯಿ-ತಂದೆ ಮತ್ತು ಒಡಹುಟ್ಟಿದವರು) ಪೂಜೆಯಲ್ಲಿ ಪಾಲ್ಗೊಳ್ಳಲು ಆಶ್ರಮವನ್ನು ತೆರಳಿದ್ದರು. ನಂತರ ಪೋಷಕರು ಹಿಂತಿರುಗಿದ್ದು ಒಡಹುಟ್ಟಿದವರು ಆಶ್ರಮದಲ್ಲಿಯೇ ಇದ್ದರು.
ಫೆಬ್ರುವರಿ 24ರಂದು ಬೆಳಗ್ಗೆ ಪರೀಕ್ಷೆ ಇದ್ದ ಕಾರಣ ಅಣ್ಣನೂ ವಾಪಸಾದ. ಅದೇ ದಿನ ರಾತ್ರಿ, ಪೂಜೆಯ ಸಮಯದಲ್ಲಿ ನೀಡಲಾಗುವ ಭೋಗ್ ಬಗ್ಗೆ ಸೇವಾದಾರರು ಮತ್ತು ಸಹೋದರಿಯ ನಡುವೆ ಜಗಳವಾಗಿತ್ತು. ಭೋಗ್ಗೆ ವಿಷ ಹಾಕಿದ್ದಾಳೆ ಎಂದು ಆರೋಪಿಸಿ ಸೇವಾದಾರರು ಸಂತ್ರಸ್ತೆಯನ್ನು ನಿರ್ದಯವಾಗಿ ಥಳಿಸಿದ್ದಾರೆ. ಅಲ್ಲದೇ ಆಕೆಯ ಅಂಗಾಂಗಗಳನ್ನು ಸುಟ್ಟು ಹಾಕಿದ್ದಾರೆ. ಗಂಭೀರವಾಗಿ ಗಾಯಗೊಂಡ ಸಂತ್ರಸ್ತ ಬಾಲಕಿಯನ್ನು ರಾತ್ರಿಯಿಡೀ ಆಶ್ರಮದಲ್ಲಿ ಇರಿಸಲಾಯಿತು.
ಈ ಪ್ರಕರಣ ಸಂಬಂಧ ಅದಾಗಲೇ ಮೂವರು ಆರೋಪಿಗಳಾದ ನರೇಶ್ ಪಟೇಲ್, ಭೋಜ್ರಾಮ್ ಸಾಹು ಮತ್ತು ರಾಕೇಶ್ ದಿವಾನ್ ಎಂಬುರನ್ನು ಬಂಧಿಸಲಾಗಿತ್ತು. ಗುರುವಾರ ತಡರಾತ್ರಿ ರಮೇಶ್ ಠಾಕೂರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. 4 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಈ ಆಶ್ರಮದ ಬಗ್ಗೆ ಆಡಳಿತಕ್ಕೆ ಮಾಹಿತಿ ಇರಲಿಲ್ಲ. ಆಶ್ರಮದ ಬಗ್ಗೆ ಬಾಗ್ಬಹ್ರಾ ಪೊಲೀಸ್ ಠಾಣೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಯಾವುದೇ ದಾಖಲೆ ಲಭ್ಯವಾಗಿಲ್ಲ. ಸುಮಾರು 4 ಎಕರೆ ಜಾಗದಲ್ಲಿ ನಡೆಯುತ್ತಿರುವ ಈ ಆಶ್ರಮದಲ್ಲಿ ಕಳೆದ 4 ವರ್ಷಗಳಿಂದ ಕಾಮಗಾರಿ ಹೇಗೆ ನಡೆದಿದೆ ಎಂಬುದೂ ಪ್ರಶ್ನೆಗಳ ಸುಳಿಯಲ್ಲಿದೆ. ಗ್ರಾಮಸ್ಥರು ಈ ಭೂಮಿಯನ್ನು ಅಕ್ರಮ ಎಂದು ಕರೆಯುತ್ತಿದ್ದಾರೆ. ಇಲ್ಲಿ ಘಟನೆಯ ನಂತರ ಕಾಳಾರ ಸಮಾಜವು ಆಡಳಿತಕ್ಕೆ ಎಚ್ಚರಿಕೆ ನೀಡಿ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


