3ನೇ ಹೆಂಡತಿಗಾಗಿ ತನ್ನ ಸ್ವಂತ ಮಗನನ್ನೇ ಕೊಂದ ಪಾಪಿ ತಂದೆ!

3ನೇ ಹೆಂಡತಿಗೆ ಮಗನನ್ನು ಕಂಡರೆ ಇಷ್ಟವಿಲ್ಲ ಎಂಬ ಒಂದೇ ಕಾರಣಕ್ಕೆ ಸ್ವಂತ ತಂದೆಯೇ ತನ್ನ 7 ವರ್ಷದ ಮಗಗನ್ನು ಹತ್ಯೆ ಮಾಡಿರುವ ಘಟನೆ ಇಂದೋರ್ ನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಇಂದೋರ್: 3ನೇ ಹೆಂಡತಿಗೆ ಮಗನನ್ನು ಕಂಡರೆ ಇಷ್ಟವಿಲ್ಲ ಎಂಬ ಒಂದೇ ಕಾರಣಕ್ಕೆ ಸ್ವಂತ ತಂದೆಯೇ ತನ್ನ 7 ವರ್ಷದ ಮಗಗನ್ನು ಹತ್ಯೆ ಮಾಡಿರುವ ಘಟನೆ ಇಂದೋರ್ ನಲ್ಲಿ ನಡೆದಿದೆ.

ಹೌದು.. ಮಧ್ಯಪ್ರದೇಶದ ಇಂದೋರ್‌ನಲ್ಲಿ ಮಂಗಳವಾರ ಈ ಘಟನೆ ಲರದಿಯಾಗಿದ್ದು, ಏಳು ವರ್ಷದ ಬಾಲಕನನ್ನು ತಂದೆಯೇ ಮಲತಾಯಿಯ ಒತ್ತಡದ ಕಾರಣದಿಂದ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

3 ನೇ ತರಗತಿ ವಿದ್ಯಾರ್ಥಿ ಪ್ರತೀಕ್ ತನ್ನ ಅಜ್ಜಿಯೊಂದಿಗೆ ಮಲಗಿದ್ದಾಗ  ಭಾನುವಾರ, ಅವರ 26 ವರ್ಷದ ತಂದೆ ಶಶಿಪಾಲ್ ಮುಂಡೆ, ಕೂಲರ್ ಹೊಂದಿರುವ ತನ್ನ ಕೋಣೆಯಲ್ಲಿ ಮಲಗಲು ಹೇಳಿದ್ದ. ಕೂಲರ್ ಬಗ್ಗೆ ಉತ್ಸುಕನಾಗಿದ್ದ ಹುಡುಗ, ತನ್ನ ತಂದೆಯ ಕೋಣೆಗೆ ಹೋಗುವುದಾಗಿ ತನ್ನ ಅಜ್ಜಿಗೆ ಹೇಳಿದನು.  ಬಳಿಕ ಮುಂಜಾನೆ ಆತನ ಶವ ಪತ್ತೆಯಾಗಿದೆ.

ಪೊಲೀಸರ ಪ್ರಕಾರ, ಮಗ ಪ್ರತೀಕ್ ಮಲಗಿದ್ದಾಗ ಶಶಿಪಾಲ್ ಟಿವಿ ವಾಲ್ಯೂಮ್ ಹೆಚ್ಚಿಸಿ ಕತ್ತು ಹಿಸುಕಿದ್ದಾನೆ. ಆತ ತನ್ನ ಪತ್ನಿಗೆ ವಿಡಿಯೋಕಾಲ್ ಮಾಡಲು ಯತ್ನಿಸಿದನಾದರೂ ಆಕೆ ಸ್ವೀಕರಿಸಲಿಲ್ಲ. ತನ್ನ ಚಿಕ್ಕ ಮಗನನ್ನು ಕೊಂದ ನಂತರ, ಶಶಿಪಾಲ್ ತನ್ನ ಮೂರನೇ ಹೆಂಡತಿ ಪಾಯಲ್‌ಗೆ ವಾಟ್ಸಾಪ್‌ನಲ್ಲಿ ಪುರಾವೆಯಾಗಿ ವೀಡಿಯೊವನ್ನು ಹಂಚಿಕೊಂಡಿದ್ದಾನೆ, ಆದರೆ ಅವಳು ಅವನ ಮೊಬೈಲ್ ಸಂಖ್ಯೆಯನ್ನು ನಿರ್ಬಂಧಿಸಿದ್ದರಿಂದ ಅವಳು ಅದನ್ನು ನೋಡಲಾಗಲಿಲ್ಲ. ಘಟನೆ ಬಳಿಕ ಆರೋಪಿ ತಂದೆ ಶಶಿಪಾಲ್ ಪರಾರಿಯಾಗಿದ್ದ. ಆದರೆ ಬಳಿಕ ತುರ್ತು ಕಾರ್ಯಾಚರಣೆ  ನಡೆಸಿದ ಪೊಲೀಸರು ತಂದೆ ಶಶಿಪಾಲ್ ಮತ್ತು ತಾಯಿ 23 ವರ್ಷದ ಪಾಯಲ್ ರನ್ನು ಬಂಧಿಸಿದ್ದಾರೆ.

"ನಾನು ಈ ವಿಡಿಯೋ ಮತ್ತು ಪಾಯಲ್‌ಗೆ ಸಂದೇಶವನ್ನು ಕಳುಹಿಸಿದ್ದೇನೆ, ಈಗ ನನ್ನ ಮಗ ನಾನು ಅವನನ್ನು ಕೊಂದಿದ್ದರಿಂದ ಅವಳಿಗೆ ಎಂದಿಗೂ ತೊಂದರೆ ನೀಡುವುದಿಲ್ಲ.. ಎಂದು ಶಶಿಪಾಲ್ ಹೇಳಿದ್ದಾನೆ.  ಮೂಲಗಳ ಪ್ರಕಾರ ಪಾಯಲ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಳು ಮತ್ತು ತನ್ನ ಪಚಿಯ ಮೊದಲ ಮಗ ಪ್ರತೀಕ್‌ನನ್ನು ತೊಡೆದುಹಾಕದ ಹೊರತು ಅವಳು ತನ್ನ ಪೋಷಕರ ಮನೆಯಿಂದ ಹಿಂತಿರುಗುವುದಿಲ್ಲ ಎಂದು ಶಶಿಪಾಲ್‌ಗೆ ಹೇಳಿದ್ದಳು.

"ಶಶಿಪಾಲ್ ಮುಂಡೆ ಅವರ ಮೂರನೇ ಹೆಂಡತಿ ಮೊದಲಿನಿಂದಲೂ ಹುಡುಗನ ಬಗ್ಗೆ ತುಂಬಾ ಅಸಮಾಧಾನ ಹೊಂದಿದ್ದರು. ಅವರು ಈ ವಿಷಯದ ಬಗ್ಗೆ ಆಗಾಗ್ಗೆ ಜಗಳವಾಡುತ್ತಿದ್ದರು..ಪಾಯಲ್ ತನ್ನ ಪತಿಗೆ ತನ್ನ ಮಗನನ್ನು ಕಳುಹಿಸಿದರೆ ಅಥವಾ ಅವನನ್ನು ಕೊಂದರೆ ಮಾತ್ರ ತಾನು ಹಿಂತಿರುಗುತ್ತೇನೆ ಎಂದು ಹೇಳಿದ್ದರು. ಹೀಗಾಗಿ ಆತ ಮಗನನ್ನು ಕೊಂದು ಹಾಕಿದ್ದಾನೆ. ಶಶಿಪಾಲ್ ಮುಂಡೆ ಅವರ ಮೊಬೈಲ್‌ನಲ್ಲಿ ಕೊಲೆಯ ವಿಡಿಯೋ ಕ್ಲಿಪ್ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ಜೈವೀರ್ ಸಿಂಗ್ ಭಡೋರಿಯಾ ಹೇಳಿದ್ದಾರೆ.

ಇನ್ನು ತನಗೂ ಅಪರಾಧಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಾಯಲ್ ಹೇಳಿದ್ದಾರೆ. ನನ್ನ ಪತಿಗೆ ತನ್ನ ಏಳು ವರ್ಷದ ಮಗನನ್ನು ಸಾಯಿಸುವಂತೆ ನಾನು ಯಾವತ್ತೂ ಹೇಳಿಲ್ಲ ಎಂದು ಮಾಧ್ಯಮದವರ ಮುಂದೆ ಹೇಳಿದ್ದಾಳೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com