ದೇಶ

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೆ 2 ಚೀತಾ ಮರಿಗಳ ಸಾವು!

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿರುವ ಚೀತಾ ಜ್ವಾಲಾಳ ಎರಡು ಮರಿಗಳು ಸಾವನ್ನಪ್ಪಿವೆ. ಜ್ವಾಲಾ ಮಾ.24 ರಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು.

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೆ 2 ಚೀತಾ ಮರಿಗಳ ಸಾವು!
ಚೀತಾ ಮರಿಗಳು
Published On :

ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿರುವ ಚೀತಾ ಜ್ವಾಲಾಳ ಎರಡು ಮರಿಗಳು ಸಾವನ್ನಪ್ಪಿವೆ.  ಜ್ವಾಲಾ ಮಾ.24 ರಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು.
 
ನಾಲ್ಕು ಮರಿಗಳ ಪೈಕಿ ಇತ್ತೀಚೆಗೆ ಒಂದು ಮರಿ ಸಾವನ್ನಪ್ಪಿತ್ತು. ಇಂದು 2 ಮರಿಗಳು ಸಾವನ್ನಪ್ಪಿದ್ದು, ಮತ್ತೊಂದು ಚೀತಾ ಮರಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ರಾಷ್ಟ್ರೀಯ ಉದ್ಯಾನವನದ ಮೂಲಗಳು ತಿಳಿಸಿವೆ.

ಮೊದಲ ಮರಿ ಬಲಹೀನತೆಯಿಂದ ಸಾವನ್ನಪ್ಪಿತ್ತು, ಇಂದು 2 ಚೀತಾ ಮರಿಗಳು ಸಾವನ್ನಪ್ಪುವ ಮೂಲಕ 2 ತಿಂಗಳಲ್ಲಿ 6 ಚೀತಾಗಳು ಸಾವನ್ನಪ್ಪಿವೆ. ಈ ಪೈಕಿ ಇಲ್ಲೇ ಹುಟ್ಟಿದ ಚೀತಾಗಳಷ್ಟೇ ಅಲ್ಲದೇ ಆಫ್ರಿಕಾದಿಂದ ತಂದಿದ್ದ ಮೂರು ಚೀತಾಗಳೂ ಇವೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.