'ಹೊಸ ಸಂಸತ್ ಭವನದಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಯೋಚಿಸಿರಲಿಲ್ಲ, ಜೀವಿತಾವಧಿಯ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿ ಆಗಿರುವುದು ನನ್ನ ಅದೃಷ್ಟ': ಎಚ್ ಡಿ ದೇವೇಗೌಡ

ಹೊಸ ಸಂಸತ್ ಭವನದಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಯೋಚಿಸಿರಲಿಲ್ಲ, ಜೀವಿತಾವಧಿಯ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿ ಆಗಿರುವುದು ನನ್ನ ಅದೃಷ್ಟ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ನೂತನ್ ಸಂಸತ್ ಭವನದಲ್ಲಿ ಎಚ್ ಡಿ ದೇವೇಗೌಡ
ನೂತನ್ ಸಂಸತ್ ಭವನದಲ್ಲಿ ಎಚ್ ಡಿ ದೇವೇಗೌಡ
Updated on

ನವದೆಹಲಿ: ಹೊಸ ಸಂಸತ್ ಭವನದಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಯೋಚಿಸಿರಲಿಲ್ಲ, ಜೀವಿತಾವಧಿಯ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿ ಆಗಿರುವುದು ನನ್ನ ಅದೃಷ್ಟ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದ್ದಾರೆ.

ದೆಹಲಿಯಲ್ಲಿ ಭಾನುವಾರ (ಮೇ 28) ದಂದು ನಡೆದ ನೂತನ ಸಂಸತ್​ ಭವನದ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ತಮ್ಮ ಅವಿಸ್ಮರಣೀಯ ಕ್ಷಣದ ಕುರಿತು ಅನುಭವ ಹಂಚಿಕೊಂಡರು. 'ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಮಹತ್ತರವಾದ ಕ್ಷಣಕ್ಕೆ ಸಾಕ್ಷಿಯಾಗಿರುವುದು ನನ್ನ ಅದೃಷ್ಟ. ತನ್ನ ಜೀವಿತಾವಧಿಯಲ್ಲಿ ಹೊಸ ಸಂಸತ್ತಿನ ಕಟ್ಟಡದಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಯೋಚಿಸಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 

ಭಾರತದ ಪ್ರಜಾಸತ್ತಾತ್ಮಕ ಇತಿಹಾಸದಲ್ಲಿ ಒಂದು ಮಹತ್ತರ ಕ್ಷಣಕ್ಕೆ ಸಾಕ್ಷಿಯಾಗಿರುವುದು ನನ್ನ ಅದೃಷ್ಟ. 1962ರಲ್ಲಿ ಕರ್ನಾಟಕ ವಿಧಾನಸಭೆಗೆ ಶಾಸಕನಾಗಿ, 1991ರಲ್ಲಿ ಸಂಸತ್​ ಸದಸ್ಯನಾಗಿದ್ದೆ.  32 ವರ್ಷಗಳ ಹಿಂದೆ ನಾನು ಜನರ ಈ ಮಹಾನ್ ಸದನವನ್ನು ಪ್ರವೇಶಿಸಿದಾಗ ನಾನು ಪ್ರಧಾನಿಯಾಗುತ್ತೇನೆ ಎಂದು ನಾನು ಕನಸಿನಲ್ಲೂ ಎಂದಿಗೂ ಭಾವಿಸಿರಲಿಲ್ಲ. ಸಾರ್ವಜನಿಕ ಜೀವನದಲ್ಲಿ ನಾನು ಇಷ್ಟು ದಿನ ಉಳಿಯುತ್ತೇನೆ ಎಂದೂ ಊಹಿಸಿರಲಿಲ್ಲ. ದೊಡ್ಡ ಆಶ್ಚರ್ಯವೆಂದರೆ ನನ್ನ ಜೀವಿತಾವಧಿಯಲ್ಲಿ ನಾನು ಹೊಸ ಸಂಸತ್ತಿನ ಕಟ್ಟಡದಲ್ಲಿ ಕುಳಿತುಕೊಳ್ಳುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಭಾರತೀಯ ಸಂಪ್ರದಾಯದಲ್ಲಿ ಹೊಸ ನಿರ್ಮಾಣ ಹಾಗೂ ಗೃಹಪ್ರವೇಶ ಅತ್ಯಂತ ಮಂಗಳಕರವಾಗಿದ್ದು ನೂತನ ಸಂಸತ್​ ಭವನ ಉದ್ಘಾಟನೆ ಒಂದು ಅಸಾಧಾರಣವಾದ ಕ್ಷಣ ಎಂದು 91 ವರ್ಷ ವಯಸ್ಸಿನ ದೇವೇಗೌಡರು ಬಣ್ಣಿಸಿದ್ದಾರೆ. 

ಜನತೆ ಪಾಠ ಕಲಿಸಿದ್ದಾರೆ
ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ಸಂಸತ್ತು ಏರಿಳಿತಗಳನ್ನು ಕಂಡಿದೆ ದೇಶದ ಜನತೆ ಜಾಗರೂಕರಾಗಿದ್ದಾರೆ ರಾಷ್ಟ್ರದ ಶಾಂತಿಗೆ ಚ್ಯುತಿ ತರಲು ಹೋದವರುನ್ನು ಈ ಮನೆಯಿಂದ ಹೊರ ಕಳುಹಿಸಿದ್ದಾರೆ. ಜನತೆ ರಾಜಕಾರಣಿಗಳಿಗೆ ಕಠಿಣ ಪಾಠಗಳನ್ನು ಕಲಿಸಿದ್ದಾರೆ. ನೂತನ ಸಂಸತ್ ಭವನದ ಉದ್ಘಾಟನೆಯ ಈ ಸಂದರ್ಭದಲ್ಲಿ ನಾನು ಭಾರತದ ಸಮಸ್ತ ಜನತೆಗೆ ವಂದಿಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಹೇಳಿದ್ದಾರೆ. 

ಹಳೆಯ ಸಂಸತ್ ಭವನವನ್ನು ಉದ್ಘಾಟಿಸಿದಾಗ, ಭಾರತ ಇನ್ನೂ ವಸಾಹತುಶಾಹಿ ಆಳ್ವಿಕೆಯಲ್ಲಿತ್ತು ಮತ್ತು ಸ್ವಾತಂತ್ರ್ಯ ದಿಗಂತದಲ್ಲಿ ಇರಲಿಲ್ಲ ಎಂದು ಹೇಳಿದ ದೇವೇಗೌಡ ಅವರು, ಭಾರತೀಯ ಸಂಪ್ರದಾಯದಲ್ಲಿ ಮತ್ತು ಸಾಮಾನ್ಯ ಭಾರತೀಯನ ಜೀವಿತಾವಧಿಯಲ್ಲಿ, ಹೊಸ ಮನೆ ನಿರ್ಮಾಣ ಮತ್ತು ಹೊಸ ಮನೆಗೆ ಪ್ರವೇಶಿಸುವುದು ಅತ್ಯಂತ ಮಂಗಳಕರ ಮತ್ತು ಅಪರೂಪದ ಕ್ಷಣವಾಗಿದೆ. ಶಾಂತಿಯುತ ಮತ್ತು ಅಹಿಂಸಾತ್ಮಕ ಮಾರ್ಗಗಳ ಮೂಲಕ ರಾಷ್ಟ್ರವಾಯಿತು. ಇದು ಅಮೂಲ್ಯವಾದ ಸಾಧನೆಯಾಗಿದೆ. ಅದು ನಮ್ಮ ಪರಂಪರೆಯಾಗಿದೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ನಾವು ಸಂರಕ್ಷಿಸಬೇಕಾದ ಮೌಲ್ಯ ವ್ಯವಸ್ಥೆಯಾಗಿದೆ" ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಬಂದಾಗಿನಿಂದ ನಮ್ಮ ಸಂಸತ್ತು ಏರಿಳಿತಗಳನ್ನು ಕಂಡಿದೆ, ಮತ್ತು ಅದು ದುರಹಂಕಾರ ಮತ್ತು ವಿನಯ, ಗೆಲುವು ಮತ್ತು ಸೋಲುಗಳನ್ನು ಕಂಡಿದೆ, ಆದರೆ ಒಟ್ಟಾರೆಯಾಗಿ ಅದು ಸಮತೋಲನವನ್ನು ಕಾಯ್ದುಕೊಳ್ಳಲು ಮತ್ತು ಭಾರತದ ಜನರ ಆಶೋತ್ತರಗಳನ್ನು ಪೂರೈಸಲು ಪ್ರಯತ್ನಿಸಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com