ಬೆಳಕಿನಲ್ಲಿ ಮಿಂದೆದ್ದ ಅಯೋಧ್ಯೆ: 24 ಲಕ್ಷ ದೀಪದ ಮೂಲಕ ಗಿನ್ನಿಸ್ ದಾಖಲೆ!

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಸರಯೂ ನದಿಯ ತೀರದಲ್ಲಿ 24 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ'ಯನ್ನು ನಿರ್ಮಿಸಲಾಗಿದೆ.ಈ ಮೂಲಕ ನಗರದ ಹಿಂದಿನ 17 ಲಕ್ಷ ದೀಪಗಳ ದಾಖಲೆಯನ್ನು ಮುರಿದಿದೆ.
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಿಂದ ಪ್ರಮಾಣ ಪತ್ರ ಸ್ವೀಕರಿಸಿದ ಸಿಎಂ ಯೋಗಿ ಆದಿತ್ಯನಾಥ್.
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಿಂದ ಪ್ರಮಾಣ ಪತ್ರ ಸ್ವೀಕರಿಸಿದ ಸಿಎಂ ಯೋಗಿ ಆದಿತ್ಯನಾಥ್.
Updated on

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಸರಯೂ ನದಿಯ ತೀರದಲ್ಲಿ 24 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ'ಯನ್ನು ನಿರ್ಮಿಸಲಾಗಿದೆ.ಈ ಮೂಲಕ ನಗರದ ಹಿಂದಿನ 17 ಲಕ್ಷ ದೀಪಗಳ ದಾಖಲೆಯನ್ನು ಮುರಿದಿದೆ.

ಡ್ರೋನ್ ಮೂಲಕ ದೀಪಗಳನ್ನು ಎಣಿಕೆ ಮಾಡಲಾಗಿದೆ. 'ದೀಪೋತ್ಸವ 2023' ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಿರ್ಮಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಿಂದ ಪ್ರಮಾಣ ಪತ್ರ ಸ್ವೀಕರಿಸಿ ಬಳಿಕ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಇಡೀ ಅಯೋಧ್ಯೆಯ ಜನತೆಗೆ ಹೃತ್ಪೂರ್ವಕ ಧನ್ಯವಾದ ತಿಳಿಸಿದರು.

'ದೀಪೋತ್ಸವದ ಕಾರ್ಯಕ್ರಮವನ್ನು ಆರಂಭಿಸಿದಾಗ, ಪ್ರತಿಯೊಬ್ಬರಿಗೂ ಒಂದೇ ಒಂದು ಆಸೆಯಿತ್ತು. ಅದು ರಾಮ ಮಂದಿರ ನಿರ್ಮಾಣ. ದೇವಾಲಯ (ರಾಮ ಮಂದಿರ) ನಿರ್ಮಾಣ ಕಳೆದ 9.5 ವರ್ಷಗಳಲ್ಲಿ ಪ್ರಧಾನಿ ಮೋದಿ ಭಾರತದಲ್ಲಿ ಸ್ಥಾಪಿಸಿದ ‘ರಾಮ ರಾಜ್ಯ’ದ ಅಡಿಪಾಯವನ್ನು ಬಲಪಡಿಸುತ್ತದೆ' ಎಂದು ಹೇಳಿದರು.

ದೀಪೋತ್ಸವ ಮೆರವಣಿಗೆಯಲ್ಲಿ ಭಗವಾನ್ ರಾಮನ ಸಾರವನ್ನು ಚಿತ್ರಿಸುವ 18 ವಿಸ್ಮಯ, ಸ್ಫೂರ್ತಿದಾಯಕ ಮತ್ತು ದೈವಿಕ ಸ್ತಬ್ದ ಚಿತ್ರಗಳನ್ನು ಪ್ರದರ್ಶಿಸಲಾಯಿತು.

ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜೈವೀರ್ ಸಿಂಗ್ ಅವರು ಶನಿವಾರ ಅಯೋಧ್ಯೆಯಲ್ಲಿ ಮೆರವಣಿಗೆಗೆ ಅಧಿಕೃತವಾಗಿ ಚಾಲನೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com