ಮಧ್ಯ ಪ್ರದೇಶ: ಚುನಾವಣೆಯಲ್ಲಿ ಗೆಲ್ಲಲು 'ಫಕೀರಾ ಬಾಬಾ'ನಿಂದ ಚಪ್ಪಲಿ ಏಟು ತಿಂದ ಕಾಂಗ್ರೆಸ್ ಅಭ್ಯರ್ಥಿ- ವಿಡಿಯೋ

ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಅಭ್ಯರ್ಥಿಯೊಬ್ಬರು  'ಫಕೀರಾ ಬಾಬಾನಿಂದ ಚಪ್ಪಲಿ ಏಟು ತಿನ್ನುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಫಕೀರಾಬಾಬಾನಿಂದ ಚಪ್ಪಲಿಯಲ್ಲಿ  ಹೊಡೆಸಿಕೊಳ್ಳುತ್ತಿರುವ ಕಾಂಗ್ರೆಸ್ ಶಾಸಕ
ಫಕೀರಾಬಾಬಾನಿಂದ ಚಪ್ಪಲಿಯಲ್ಲಿ ಹೊಡೆಸಿಕೊಳ್ಳುತ್ತಿರುವ ಕಾಂಗ್ರೆಸ್ ಶಾಸಕ

ಭೋಪಾಲ್: ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಅಭ್ಯರ್ಥಿಯೊಬ್ಬರು 'ಫಕೀರಾ ಬಾಬಾನಿಂದ ಚಪ್ಪಲಿ ಏಟು ತಿನ್ನುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ರತ್ಲಾಮ್‌ನ ಕಾಂಗ್ರೆಸ್ ಅಭ್ಯರ್ಥಿ ಪರಸ್ ಸಕ್ಲೇಚಾ ಸ್ವಇಚ್ಚೆ ಮತ್ತು ಸಂತೋಷದಿಂದಲೇ ಫಕೀರ್ ಬಾಬಾನಿಂದ ಹೊಡೆಸಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಫಕೀರಾ ಬಾಬಾ ಸ್ಥಳೀಯವಾಗಿ ದೇವಮಾನವ ಎಂದು ಖ್ಯಾತರಾಗಿದ್ದು, ಅವರಿಂದ ಚಪ್ಪಲಿ ಏಟು ತಿಂದರೆ ಒಳ್ಳೆಯದಾಗುತ್ತದೆ ಎಂಬ ಮನೋಭಾವದಿಂದ ಶಾಸಕ ಸಕ್ಲೇಜಾ, ತಾವೇ ಚಪ್ಪಲಿ ತಂದು ಬಾಬಾನಿಂದ ಹೊಡೆಸಿಕೊಂಡಿದ್ದಾರೆ. 

ಫಕೀರ್ ಬಾಬಾ ಕೆಲವೊಮ್ಮೆ ಬೆನ್ನಿನ ಮೇಲೆ, ಕೆಲವೊಮ್ಮೆ ಭುಜದ ಮೇಲೆ ಮತ್ತು ಕೆಲವೊಮ್ಮೆ ಮುಖದ ಮೇಲೆ ಚಪ್ಪಲಿಯಿಂದ ಬಾರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇನ್ನೂ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾ ಕಾಂಗ್ರೆಸ್ ಕಾಲೆಳೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com