ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಹಣಾಹಣಿಗೆ ವೇದಿಕೆ ಸಿದ್ಧವಾಗಿದ್ದು, ಜಿದ್ದಾಜಿದ್ದಿನ ಪ್ರಶಸ್ತಿ ಫೈಟ್'ಗೆ ಬದ್ಧವೈರಿಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ಆಟಗಾರರು ಸಜ್ಜಾಗುತ್ತಿದ್ದಾರೆ. ಫೈನಲ್ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಈ ಗೂಗಲ್ ತನ್ನ ಸರ್ಚ್ ಹೋಮ್ ಪೇಜ್ ನಲ್ಲಿ ವಿಶೇಷ ಡೂಡಲ್ ಬಿಡಿಸಿ, ಸಂಭ್ರಮಿಸುತ್ತಿದೆ.
ಇಂದಿನ ಡೂಡಲ್ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2023 ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯವನ್ನು ಸಂಭ್ರಮಿಸುವುದಾಗಿದೆ ಎಂದು ಗೂಗಲ್ ತನ್ನ ಡೂಡಲ್ ಅನ್ನು ವಿವರಿಸಿದೆ.
ಇಂದಿನ ಡೂಡಲ್ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2023 ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಅನ್ನು ಆಚರಿಸುತ್ತಿದೆ ಎಂದು ಹೇಳಿದೆ,
ಐಕಾನಿಕ್ ಕ್ರಿಕೆಟ್ ಅಂಶಗಳ ನಡುವೆ ವಿಶ್ವಕಪ್ ಕಣ್ಣಗೆ ಕಟ್ಟುವಂತೆ ಗೂಗಲ್ ಡೂಡಲ್ ಗ್ರಾಂಡ್ ಫೈನಲ್ ಪಂದ್ಯದ ಸಾರವನ್ನು ಸೆರೆಹಿಡಿದಿದೆ.
ಇಡೀ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತವು ಸತತ 10 ಪಂದ್ಯಗಳನ್ನು ಗೆದ್ದಿದೆ. ಒಂದೇ ಒಂದು ಪಂದ್ಯವನ್ನು ಸೋಲದೆ ಅಜೇಯವಾಗಿ ಫೈನಲ್‌ಗೆ ತಲುಪಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು 70 ರನ್‌ಗಳಿಂದ ಸೋಲಿಸಿತು.
ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನವೆಂಬರ್ 16 ರಂದು ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾವನ್ನು 3 ವಿಕೆಟ್‌ಗಳಿಂದ ಸೋಲಿಸಿತು. ಆಸ್ಟ್ರೇಲಿಯಾ ತನ್ನ ಆರಂಭಿಕ ಪಂದ್ಯದಲ್ಲಿ ಭಾರತ ಮತ್ತು ಲೀಗ್ ಹಂತದಲ್ಲಿ ತನ್ನ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಅನುಭವಿಸಿದೆ. ಆದರೆ ನಂತರ ನಡೆದ ಸತತ ಎಂಟು ಪಂದ್ಯಗಳನ್ನು ಗೆದ್ದುಕೊಂಡಿದೆ.
Advertisement