

ಚೆನ್ನೈ: ಯಾವುದೇ ನದಿಯು ಒಂದು ರಾಜ್ಯಕ್ಕೆ ಸೇರಿಲ್ಲ, ಕಾವೇರಿ ನೀರನ್ನು 4 ರಾಜ್ಯಗಳಿಗೆ ಹಂಚಬೇಕು, ಅದು 4 ರಾಜ್ಯಗಳಲ್ಲಿ ಹರಿಯುತ್ತದೆ, ಭಾರೀ ಮಳೆಯಾದಾಗ ಮತ್ತು ಕಡಿಮೆಯಾದಾಗ ಒಂದು ಸೂತ್ರವಿದೆ. ಮಳೆಯ ನಂತರವೂ ಒಂದು ಸೂತ್ರವಿದೆ, ಆದ್ದರಿಂದ ತಮಿಳು ನಾಡು ಆ ಸೂತ್ರದ ಪ್ರಕಾರ ನೀರು ಬಿಡಲು ಕೇಳುತ್ತಿದ್ದೇವೆ, ನಾವು ಸಂಪೂರ್ಣ ನೀರು ಬಿಡಲು ಕೇಳುತ್ತಿಲ್ಲ ಎಂದು ಕರ್ನಾಟಕ-ತಮಿಳು ನಾಡು ಮಧ್ಯೆ ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್ ಹೇಳಿದ್ದಾರೆ.
ಇಂದು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಯಾವುದೇ ನದಿ ಒಂದು ರಾಜ್ಯಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಕಾವೇರಿ ನದಿ ನಾಲ್ಕು ರಾಜ್ಯಗಳ ಮೂಲಕ ಹರಿಯುತ್ತದೆ.ಮಳೆ ಹೆಚ್ಚಾದಾಗ ಮತ್ತು ಕಡಿಮೆಯಾದಾಗ ಅಲ್ಲಿ ಎರಡು ರೀತಿಯ ಸೂತ್ರವಿರುತ್ತದೆ. ಆ ಸೂತ್ರದ ಪ್ರಕಾರ ಅಷ್ಟು ಪ್ರಮಾಣದ ಕಾವೇರಿ ನೀರನ್ನು ಬಿಡುಗಡೆ ಮಾಡಿ ಎಂದು ನಾವು ಕೇಳಿಕೊಳ್ಳುತ್ತಿದ್ದೇವೆ. ಸೂತ್ರದಲ್ಲಿ ಹೇಳಿದಂತೆ ಇಡೀ ಕಾವೇರಿ ನೀರನ್ನು ತಮಿಳು ನಾಡಿಗೆ ಬಿಡುಗಡೆ ಮಾಡಿ ಎಂದು ನಾವು ಕೇಳುತ್ತಿಲ್ಲ ಎಂದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಇದನ್ನು ಹೇಳುತ್ತದೆ. ಹೀಗಾಗಿ ನಾವು ಸೂತ್ರ ಪ್ರಕಾರ ನೀರು ಬಿಡುಗಡೆ ಮಾಡಿ ಎಂದು ಕೇಳುತ್ತಿದ್ದೇವೆ ಎಂದರು.